For Quick Alerts
ALLOW NOTIFICATIONS  
For Daily Alerts

25ರಿಂದ 37 ಅಮೆರಿಕನ್ ಡಾಲರ್ ಗೆ ಮಾಡೆರ್ನಾದಿಂದ ಕೋವಿಡ್- 19 ಲಸಿಕೆ

|

ಕೋವಿಡ್- 19 ಲಸಿಕೆಗಾಗಿ ಸರ್ಕಾರಗಳಿಗೆ ಮಾಡೆರ್ನಾದಿಂದ 25ರಿಂದ 37 ಅಮೆರಿಕನ್ ಡಾಲರ್ ದರ ವಿಧಿಸುವುದಾಗಿ ಹಾಗೂ ಅದೆಷ್ಟು ಸಂಖ್ಯೆಯಲ್ಲಿ ಆರ್ಡರ್ ಮಾಡುತ್ತಾರೆ ಎಂಬುದರ ಆಧಾರದಲ್ಲಿ ದರ ನಿಗದಿ ಮಾಡುವುದಾಗಿ ಕಂಪೆನಿಯ ಮುಖ್ಯಾಧಿಕಾರಿ ಸ್ಟೆಫಾನ್ ಬ್ಯಾನ್ಸೆಲ್ ಅವರು ಜರ್ಮನಿಯ ವಾರಪತ್ರಿಕೆ ವೆಲ್ಟ್ ಆಮ್ ಸೋನ್ ತಗ್ ಗೆ ತಿಳಿಸಿದ್ದಾರೆ. ಇವತ್ತಿಗೆ ಅಮೆರಿಕದ ಒಂದು ಡಾಲರ್ ಅಂದರೆ ಭಾರತದಲ್ಲಿ 74.119 ರುಪಾಯಿ.

25 ಡಾಲರ್ ಗಿಂತ ಕಡಿಮೆ ಬೆಲೆಗೆ ಲಸಿಕೆಯ ಹತ್ತಾರು ಲಕ್ಷ ಡೋಸ್ ಖರೀದಿಸಲು ಮಾಡೆರ್ನಾ ಜತೆಗೆ ಯುರೋಪಿಯನ್ ಆಯೋಗ ಒಪ್ಪಂದಕ್ಕೆ ಬರುವುದಕ್ಕೆ ಬಯಸಿದೆ ಎಂದು ಈ ಒಪ್ಪಂದದ ಮಾತುಕತೆಯಲ್ಲಿ ಭಾಗಿಯಾಗಿರುವ ಯುರೋಪಿಯನ್ ಒಕ್ಕೂಟದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊರೊನಾ ಲಸಿಕೆ ಸಿದ್ಧವಾದ ಮೇಲೆ ಎಲ್ಲರಿಗೂ ಉಚಿತವಾಗಿ ನೀಡಬೇಕು: ನಾರಾಯಣ ಮೂರ್ತಿಕೊರೊನಾ ಲಸಿಕೆ ಸಿದ್ಧವಾದ ಮೇಲೆ ಎಲ್ಲರಿಗೂ ಉಚಿತವಾಗಿ ನೀಡಬೇಕು: ನಾರಾಯಣ ಮೂರ್ತಿ

"ನಾವು ಈ ವರೆಗೆ ಯಾವುದೇ ಸಹಿ ಮಾಡಿಲ್ಲ. ಆದರೆ ಯುರೋಪಿಯನ್ ಆಯೋಗದ ಜತೆಗೆ ಒಪ್ಪಂದಕ್ಕೆ ಸನಿಹದಲ್ಲಿ ಇದ್ದೇವೆ. ನಾವು ಯುರೋಪ್ ಗೆ ಡೆಲಿವರಿ ನೀಡಲು ಬಯಸುತ್ತೇವೆ ಮತ್ತು ರಚನಾತ್ಮಕ ಮಾತುಕತೆಯಲ್ಲಿ ತೊಡಗಿದ್ದೇವೆ," ಎಂದು ಬ್ಯಾನ್ಸೆಲ್ ಅವರು ಹೇಳಿದ್ದಾರೆ. ಮುಂದುವರಿದು, ಇನ್ನೇನು ಕೆಲವೇ ದಿನಗಳಲ್ಲಿ ಒಪ್ಪಂದ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.

25ರಿಂದ 37 ಅಮೆರಿಕನ್ ಡಾಲರ್ ಗೆ ಮಾಡೆರ್ನಾದಿಂದ ಕೋವಿಡ್- 19 ಲಸಿಕೆ

ಮಾಡೆರ್ನಾದ ಪ್ರಯೋಗದ ಲಸಿಕೆ ಕೊರೊನಾ ನಿಯಂತ್ರಿಸಲು ಶೇಕಡಾ 94.5ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ. ಪಿಫೈಜರ್ ಹಾಗೂ ಬಯೋನ್ ಟೆಕ್ ಸಹಬಾಗಿತ್ವದಲ್ಲಿ ಬಂದ ಲಸಿಕೆ ಪ್ರಯೋಗದ ಫಲಿತಾಂಶಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾಡೆರ್ನಾದ ಲಸಿಕೆ ಫಲಿತಾಂಶ ಇದೆ. ಇನ್ನು ಕಳೆದ ಜುಲೈನಿಂದಲೇ ಮಾಡೆರ್ನಾ ಜತೆ ಯುರೋಪಿಯನ್ ಒಕ್ಕೂಟ ಮಾತುಕತೆ ನಡೆಸುತ್ತಿದೆ.

English summary

25 To 37 USD To Charge For Corona Vaccine By Moderna

According to Moderna CEO, 25 to 37 USD charge for corona vaccine. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X