For Quick Alerts
ALLOW NOTIFICATIONS  
For Daily Alerts

27 ಎಕರೆ ಜಾಗ 1,359 ಕೋಟಿಗೆ ಬಿಕರಿ: ಖರೀದಿಸಿದ್ದು ಯಾರು, ಎಲ್ಲಿ?

|

ಹತ್ತಿರ ಹತ್ತಿರ 27 ಎಕರೆ ಜಾಗವನ್ನು 1,359 ಕೋಟಿ ರುಪಾಯಿಗೆ ಖರೀದಿ ಮಾಡಿದೆ ಗೋದ್ರೆಜ್ ಪ್ರಾಪರ್ಟೀಸ್. ದೆಹಲಿಯಲ್ಲಿ ಖರೀದಿ ಮಾಡಿರುವ ಈ ಜಾಗದಲ್ಲಿ ವಿಲಾಸಿ ಹೌಸಿಂಗ್ ಪ್ರಾಜೆಕ್ಟ್ ಗಳನ್ನು ಆರಂಭಿಸಬೇಕು ಎಂಬುದು ಗೋದ್ರೆಜ್ ಉದ್ದೇಶ. ದೆಹಲಿಯ ಅಶೋಕ್ ವಿಹಾರ್ ವಸತಿ ಮಾರುಕಟ್ಟೆಯಲ್ಲಿ ಹೊಸ ಪ್ರಾಜೆಕ್ಟ್ ಸೇರ್ಪಡೆ ಮಾಡಿದ್ದೇವೆ ಎಂದು ಕಂಪೆನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"1359 ಕೋಟಿ ರುಪಾಯಿ ಮೌಲ್ಯದ ಭೂಮಿ ಖರೀದಿ ಮಾಡಿದ ವ್ಯವಹಾರವು ಭಾರತದಲ್ಲಿ ಈಚೆಗಿನ ವರ್ಷಗಳಲ್ಲಿ ನಡೆದ ವಹಿವಾಟುಗಳ ಪೈಕಿಯೇ ಅತ್ಯಂತ ದೊಡ್ಡದು" ಎಂದು ಗೋದ್ರೆಜ್ ಪ್ರಾಪರ್ಟೀಸ್ ತಿಳಿಸಿದೆ.

ಅಂದ ಹಾಗೆ, ಈ ಮೊತ್ತವನ್ನು ಒಮ್ಮೆಲೇ ಕೊಡುವುದಿಲ್ಲ. ಕೆಲ ವರ್ಷಗಳ ಕಾಲ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 26.58 ಎಕರೆ ಪ್ರದೇಶದಲ್ಲಿ ಗೋದ್ರೆಜ್ ಪ್ರಾಪರ್ಟೀಸ್ ನಿಂದ ವಿಲಾಸಿ ಹೌಸಿಂಗ್ ಪ್ರಾಜೆಕ್ಟ್ ಅಭಿವೃದ್ಧಿ ಮಾಡಲಾಗುತ್ತದೆ. ಇದರಲ್ಲಿ ನಿರ್ಮಾಣ ಮಾಡಲು 32.8 ಲಕ್ಷ ಚದರಡಿ ಜಾಗ ದೊರೆಯುತ್ತದೆ.

27 ಎಕರೆ ಜಾಗ 1,359 ಕೋಟಿಗೆ ಬಿಕರಿ: ಖರೀದಿಸಿದ್ದು ಯಾರು, ಎಲ್ಲಿ?

2019ರಲ್ಲಿ ದೆಹಲಿಯ ಓಖ್ಲಾದಲ್ಲಿ ಮಾಡಿದ ನಂತರ ಇದು ರಾಷ್ಟ್ರ ರಾಜಧಾನಿಯಲ್ಲಿ ಗೋದ್ರೆಜ್ ಪ್ರಾಪರ್ಟೀಸ್ ನ ಎರಡನೇ ಪ್ರಾಜೆಕ್ಟ್. ಎನ್ ಸಿಆರ್, ಗುರುಗ್ರಾಮ ಹಾಗೂ ನೋಯ್ಡಾ ಸೇರಿದಂತೆ ಹಲವೆಡೆ ಯಶಸ್ವಿ ಪ್ರಾಜೆಕ್ಟ್ ಗಳನ್ನು ಗೋದ್ರೆಜ್ ಪ್ರಾಪರ್ಟೀಸ್ ಪೂರ್ಣಗೊಳಿಸಿದೆ.

English summary

27 Acre Land In Delhi Purchased For 1359 Crores By Godrej Properties

Godrej properties purchased nearly 27 acre land in Delhi for 1359 crore. Here is the complete details of the story.
Story first published: Monday, February 17, 2020, 10:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X