For Quick Alerts
ALLOW NOTIFICATIONS  
For Daily Alerts

3,500 ಕೋಟಿ ರುಪಾಯಿ ಒಡೆಯ 'ಕೋಬಿ ಬ್ರಯಾಂಟ್' ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ

|

ಹಣ ಎಷ್ಟಿದ್ದರೆ ಏನು.. ವಿಧಿ ಯಾವಾಗ ಬೇಕಾದರೂ ಬಂದು ಎರಗಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ ಅಷ್ಟೇ.. ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿದ್ದ ಅಮೆರಿಕಾದ ಬಾಸ್ಕೆಟ್‌ಬಾಲ್ ಆಟಗಾರ ಕೋಬಿ ಬ್ರಯಾಂಟ್ (41) ಮೃತಪಟ್ಟಿದ್ದಾರೆ. 3,500 ಕೋಟಿಗೂ ಅಧಿಕ ಸಂಪತ್ತನ್ನು ಹೊಂದಿದ್ದ ಬಾಸ್ಕೆಟ್‌ಬಾಲ್ ಲೆಜೆಂಟ್‌ ದುರಂತ ಸಾವನ್ನಪ್ಪಿದ್ದಾರೆ. ವಿಶ್ವದಾದ್ಯಂತ ಸೆಲೆಬ್ರೆಟಿಗಳು ಸೇರಿದಂತೆ ಕೋಟ್ಯಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಬಾಸ್ಕೆಟ್‌ಬಾಲ್‌ ಲೆಜೆಂಡ್ ಆಗಿರುವ ಕೋಬಿ ಬ್ರಯಾಂಟ್‌ ಅಮೆರಿಕಾ ಅಷ್ಟೇ ಅಲ್ಲದೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತನ್ನ ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಸ್ಕೆಟ್‌ ಬಾಲ್ ಮೂಲಕ ಸಾವಿರಾರು ಕೋಟಿ ಸಂಪಾದೆಯ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಹಣ ಹೂಡಿಕೆಯನ್ನು ಮಾಡಿದ್ದರು.

ಐದು ಬಾರಿ ನ್ಯಾಷ್‌ನಲ್ ಚಾಂಪಿಯನ್

ಐದು ಬಾರಿ ನ್ಯಾಷ್‌ನಲ್ ಚಾಂಪಿಯನ್

ಐದು ಬಾರಿ ಎನ್‌ಬಿಎ(ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್) ಚಾಂಪಿಯನ್ ಆಗಿದ್ದ ಅಮೆರಿಕಾದ ಬ್ರಯಾಂಟ್ ತಮ್ಮ 13 ವರ್ಷದ ಪುತ್ರಿ ಮತ್ತು 7 ಸಹ ಪ್ರಯಾಣಿಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಲಾಸ್ ಏಂಜಲಿಸ್‌ನ ಪಶ್ಚಿಮಕ್ಕಿರುವ ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡು ಎಲ್ಲರೂ ಮೃತಪಟ್ಟಿದ್ದಾರೆ.

3,500 ಕೋಟಿ ರುಪಾಯಿ ಒಡೆಯನಾಗಿದ್ದ ಬ್ರಯಾಂಟ್

3,500 ಕೋಟಿ ರುಪಾಯಿ ಒಡೆಯನಾಗಿದ್ದ ಬ್ರಯಾಂಟ್

ಕೋಬಿ ಬ್ರಯಾಂಟ್ ಬಾಸ್ಕೆಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಟ ಆಟಗಾರನಾಗಿದ್ದು, ಎರಡು ದಶಕಗಳ ಕಾಲ ಎನ್‌ಬಿಎ ಚಾಂಪಿಯನ್ ಆಗಿ ಮೆರೆದಿದ್ದರು. ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳಾದ ರಾಯಭಾರಿ ಕೂಡ ಆಗಿದ್ದರು. ಬಾಡಿ ಆರ್ಮರ್ ಎಂಬ ಸ್ಪೋರ್ಟ್ಸ್ ಡ್ರಿಂಕ್ಸ್‌ನಲ್ಲಿ 10 ಪರ್ಸೆಂಟ್‌ನಷ್ಟು ಪಾಲನ್ನು ಹೊಂದಿದ್ದರು. ಇವರ ಒಟ್ಟಾರೆ ಸಂಪತ್ತು 3,500 ಕೋಟಿ ರುಪಾಯಿಗೂ ಹೆಚ್ಚಿತ್ತು.

ಜಾಹೀರಾತುಗಳಿಂದಲೇ ಸಂಪಾದಿಸಿದ್ದ 2,000 ಕೋಟಿ

ಜಾಹೀರಾತುಗಳಿಂದಲೇ ಸಂಪಾದಿಸಿದ್ದ 2,000 ಕೋಟಿ

ಇವರ ಒಟ್ಟಾರೆ ಬಾಸ್ಕೆಟ್‌ ಬಾಲ್‌ ಪಯಣದಲ್ಲಿ 328 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 2,341 ಕೋಟಿ 83 ಲಕ್ಷ) ವೇತನವಾಗಿ ಪಡೆದಿದ್ದಾರೆ. ಜಾಹೀರಾತು ಸೇರಿದಂತೆ ಇತರೆ ಮೂಲಗಳಿಂದ 280 ಮಿಲಿಯನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 2,000 ಕೋಟಿ) ಆದಾಯ ಸಂಪಾದಿಸಿದ್ದಾರೆ.

English summary

3,500 Crore Owner Basketball Legend Kobe bryant Passed Away

3,500 crore assets owner basketball legend Kobe bryant Passed Away in helicopter crash
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X