ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟದ ಬಳಿ ಉತ್ಖನದಲ್ಲಿ ಸುಮಾರು 4,000 ವರ್ಷಗಳಷ್ಟು ಹಳೆಯದಾದ ಮಾನವನ ನೆಲೆಗೆ ಸಂಬಂಧಿಸಿದ ಪ್ರಾಚೀನ ಕಲಾಕೃತಿಗಳು ಪತ್ತೆಯಾಗಿದೆ. ಈ ಪ್ರದೇಶವು ಈಗಾಗಲೇ ಅಶೋಕನ ಶಾಸನಗಳ ಆವಿಷ್ಕಾರದಿಂದ ಪ್ರಸಿದ್ಧವಾಗಿದ್ದು, ಇದೀಗ ಮತ್ತೊಮ್ಮೆ ಪುರಾತತ್ವ ಇಲಾಖೆಯ ಗಮನ ತನ್ನ ಕಡೆಗೆ ಸಳೆದಿದೆ. ಹಾಗಿದ್ದರೆ ಯಾವೆಲ್ಲಾ ವಸ್ತುಗಳು ಪತ್ತೆ ಆಗಿವೆ? ಆಗಿನ ಕಾಲದ ಜೀವನ ಶೈಲಿ ಹೇಗಿತ್ತು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಹೌದು, ಮಸ್ಕಿಯಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಬೆಟ್ಟದ ಪ್ರದೇಶದಲ್ಲಿ ಜನವಸತಿ ಇತ್ತು ಎನ್ನುವುದರ ಕರುಹುಗಳು ಸಾಕ್ಷಿಯಾಗಿವೆ.

ಪುರಾತತ್ವಜ್ಞರ ತಂಡವು ಮಸ್ಕಿಯಲ್ಲಿ ಸಂಶೋಧನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು 4,000 ವರ್ಷಗಳ ಹಿಂದೆಯೇ ಇಲ್ಲಿ ಮಾನವ ಚಟುವಟಿಕೆಗಳು ಇದ್ದವು ಎಂಬುದನ್ನು ಪತ್ತೆಹಚ್ಚಿದೆ. ಈ ಪ್ರದೇಶವು ಆರಂಭಿಕ ನಾಗರಿಕತೆಯ ಕುರುಹುಗಳನ್ನು ಹೊಂದಿರುವವರು ಎಂದು ಹೇಳಿದೆ.
ಭಾರತ, ಅಮೆರಿಕ ಮತ್ತು ಕೆನಡಾದ 20ಕ್ಕೂ ಹೆಚ್ಚು ಸಂಶೋಧಕರು ಉತ್ಖನದ ಹಡುಗಾಟದಲ್ಲಿ ಭಾಗವಹಿಸಿದ್ದರು. ಈ ವೇಳೆ 4000 ವರ್ಷಗಳಷ್ಟು ಹಳೆಯದಾದ ಮಾನವನ ವಸಾಹತು ಪ್ರದೇಶ ಇತ್ತು ಎಂಬುವುದಕ್ಕೆ ಪುರಾವೆಗಳು ಪತ್ತೆಯಾಗಿದೆ.
ಸಂಶೋಧನೆಗಳ ಪ್ರಕಾರ, ಕ್ರಿಸ್ತಪೂರ್ವ 11 ರಿಂದ 14 ನೇ ಶತಮಾನಗಳ ನಡುವೆ ಇಲ್ಲಿ ಮಾನವ ವಸಾಹತು ಅಸ್ತಿತ್ವದಲ್ಲಿತ್ತು ಎಂದು ಅವರು ಅಂದಾಜು ಮಾಹಿತಿಯನ್ನು ತಿಳಿಸಿದ್ದಾರೆ.
ಯಾವೆಲ್ಲಾ ವಸ್ತುಗಳು ಪತ್ತೆ?
ಸಂಶೋಧನೆಯ ವೇಳೆಯಲ್ಲಿ ಮಣ್ಣಿನ ಮಡಿಕೆಗಳು, ಕಲಾತ್ಮಕ ವಸ್ತುಗಳು, ಉಪಕರಣಗಳು ಮತ್ತು ಅಡುಗೆ ಪಾತ್ರೆಗಳು ಪತ್ತೆಯಾಗಿವೆ. ದವಸ-ಧಾನ್ಯಗಳು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿವೆ.ಇವುಗಳು ಆ ಕಾಲದ ಜನರ ವಿಕಸನಗೊಳ್ಳುತ್ತಿರುವ ಸಾಂಸ್ಕೃತಿಕ ಪದ್ಧತಿಗಳು ಮತ್ತು ಅಭಿವೃದ್ಧಿ ಹೊಂದಿದ ಸಮುದಾಯವನ್ನು ಸೂಚನೆ ಮಾಡುವಂತೆ ಇವೆ.
ಈ ಉತ್ಖನನವನ್ನು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಆಂಡ್ರ್ಯೂ ಎಂ. ಬಾಯರ್, ಮೆಕ್‌ಗಿಲ್ ವಿಶ್ವವಿದ್ಯಾಲಯದ ಡಾ. ಪೀಟರ್ ಜಿ. ಜೋಹಾನ್ಸೆನ್ ಮತ್ತು ಶಿವ್ ನಾಡರ್ ವಿಶ್ವವಿದ್ಯಾಲಯದ ವಿದ್ವಾಂಸರು ನೇತೃತ್ವದಲ್ಲಿ ಸಂಶೋಧನೆಯನ್ನು ನಡೆಸಲಾಗಿದೆ.
ಸಂಶೋಧನೆಗೂ ಮುನ್ನ ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಅನುಮತಿ ನೀಡಿದ ನಂತರ ಕಳೆದ ಮೂರು ತಿಂಗಳುಗಳಿಂದ ಈ ತಂಡವು ಮಸ್ಕಿಯಲ್ಲಿ ಕಾರ್ಯಚಾರಣೆಯನ್ನು ನಡೆಸುತ್ತಿತ್ತು.
ಇವರು ಸಂಶೋಧನೆಯನ್ನು ಆರಂಭಿಸುವ ಮೊದಲು ಆಸಕ್ತಿದಾಯಕವೆನಿಸುವ 271 ಸ್ಥಳಗಳನ್ನು ಗುರುತಿಸಿದ್ದರು. ಮಲ್ಲಿಕಾರ್ಜುನ ಬೆಟ್ಟ ಮತ್ತು ಅದರ ಸಮೀಪದ ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ನಡೆಸಿದ ಕೆಲಸ ದೀರ್ಘಕಾಲದ ಮಾನವ ವಾಸಸ್ಥಾನ ಎಂಬುದನ್ನು ಖಚಿತಪಡಿಸಿದೆ.
ಈ ಕಲಾಕೃತಿಗಳು ಸುಮಾರು 4000 ವರ್ಷಗಳ ಹಿಂದೆ ಮಸ್ಕಿಯಲ್ಲಿ ನಿರಂತರವಾಗಿ ಮಾನವರು ವಾಸಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಗಳಾಗಿವೆ.ಅವರ ಆ ಕಾಲಿನ ಜೀವನ ವ್ಯವಸ್ಥೆ ಉತ್ತಮವಾಗಿ ಇತ್ತು ಎಂಬುದಕ್ಕೆ ಈ ಪುರಾವೆಗಳೇ ಉದಾಹಣೆಯಾಗಿವೆ.ಈ ಪುರಾವೆಗಳು ಮಸ್ಕಿಯ ಮಹತ್ವವನ್ನು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.


Click it and Unblock the Notifications