ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 2020-21ನೇ ಸಾಲಿಗೆ 4,759 ಕೋಟಿ ರುಪಾಯಿಯ ಕೊರತೆ ಬಜೆಟ್ ಅನ್ನು ಮಂಡಿಸಿದ್ದಾರೆ. ಅವರು ನೀಡಿರುವ ಲೆಕ್ಕಾಚಾರದ ಪ್ರಕಾರ, ರಾಜ್ಯ ಸರ್ಕಾರಕ್ಕೆ 2,33,134 ಕೋಟಿ ರುಪಾಯಿ ಆದಾಯ ಬರಬಹುದು. ಇನ್ನು ವೆಚ್ಚವು 2,37,893 ಕೋಟಿ ರುಪಾಯಿ ಅಂದಾಜು ಮಾಡಲಾಗಿದೆ. ಅಲ್ಲಿಗೆ ಆದಾಯಕ್ಕಿಂತ ಖರ್ಚಿನ ಬಾಬ್ತು ಹೆಚ್ಚಿದೆ.
46,072 ಕೋಟಿ ರುಪಾಯಿ ವಿತ್ತೀಯ ಕೊರತೆ (Fiscal Deficit) ನಿರೀಕ್ಷೆ ಮಾಡಲಾಗಿದೆ. ಆ ಮೊತ್ತದ ಅಂದಾಜಿನ ಮೇಲೆ ಹೇಳಬೇಕು ಅಂದರೆ, ಕರ್ನಾಟಕದ ಒಟ್ಟು ಜಿಡಿಪಿಯ ಶೇಕಡಾ 2.55ರಷ್ಟು ಆಗುತ್ತದೆ. 2020-21ರ ಕೊನೆಗೆ ಒಟ್ಟು ಹೊಣೆಗಾರಿಕೆ 3,68,692 ಕೋಟಿ ಇರುತ್ತದೆ. ಅದು ಆಂತರಿಕ ಉತ್ಪನ್ನದ ಶೇಕಡಾ 20.42ರಷ್ಟು ಆಗುತ್ತದೆ.
ಅಂದ ಹಾಗೆ, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಅಡಿಯಲ್ಲಿ 2020-21ನೇ ಸಾಲಿನಗೆ ನಿಗದಿ ಮಾಡಲಾದ ಶೇಕಡಾ 25ರ ಮಿತಿಯೊಳಗೇ ಇದು ಇರುತ್ತದೆ. ಇಷ್ಟು ತಿಳಿದುಕೊಂಡ ಮೇಲೆ ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಮತ್ತು ಅದನ್ನು ಖರ್ಚು ಮಾಡುವುದು ಯಾವುದಕ್ಕೆ ಎಂಬುದನ್ನು ತಿಳಿದುಕೊಳ್ಳದಿದ್ದರೆ ಹೇಗೆ?
ರಾಜ್ಯ ಸರ್ಕಾರದ ಆದಾಯ ಮೂಲ
ರಾಜ್ಯ ತೆರಿಗೆ ಮೂಲಕ ಬರುವ ಆದಾಯ - 54 ಪೈಸೆ
ಸಾಲದ ಮೂಲಕ ತರುವುದು- 22 ಪೈಸೆ
ಕೇಂದ್ರದ ತೆರಿಗೆ ಪಾಲಿನಿಂದ ಬರುವುದು- 12 ಪೈಸೆ
ಸಹಾಯಾನುದಾನ- 7 ಪೈಸೆ
ರಾಜಸ್ವದಿಂದ- 3 ಪೈಸೆ
ಸಾರ್ವಜನಿಕ ಲೆಕ್ಕ (ನಿವ್ವಳ)- 2 ಪೈಸೆ
ಯಾವ್ಯಾವುದಕ್ಕೆ ಎಷ್ಟು ಖರ್ಚು?
ವೇತನ ಮತ್ತು ಭತ್ಯೆಗಳು- 21 ಪೈಸೆ
ಬಂಡವಾಳ ವೆಚ್ಚ- 20 ಪೈಸೆ
ಇತರ ರಾಜಸ್ವ ವೆಚ್ಚ- 16 ಪೈಸೆ
ಋಣ ಮೇಲುಸ್ತುವಾರಿ- 15 ಪೈಸೆ
ಸಹಾಯ ಧನ- 10 ಪೈಸೆ
ಪಿಂಚಣಿ- 9 ಪೈಸೆ
ಸಹಾಯಾನುದಾನ ಮತ್ತು ಇತರೆ- 4 ಪೈಸೆ
ಸಾಮಾಜಿಕ ಭದ್ರತಾ ಪಿಂಚಣಿಗಳು- 3 ಪೈಸೆ
ಆಡಳಿತಾತ್ಮಕ ವೆಚ್ಚಗಳು- 2 ಪೈಸೆ
ರಾಜ್ಯ ಸರ್ಕಾರಕ್ಕೆ ಬರುವ ಸ್ವಂತ ಆದಾಯ
ವಾಣಿಜ್ಯ ತೆರಿಗೆಗಳು- 64%
ರಾಜ್ಯ ಅಬಕಾರಿ- 18%
ನೋಂದಣಿ ಮತ್ತು ಮುದ್ರಾಂಕ- 10%
ಮೋಟಾರು ವಾಹನ ತೆರಿಗೆ- 6%
ಇತರೆ- 2%
ವಿವಿಧ ಇಲಾಖೆಗಳಿಗೆ
ಶಿಕ್ಷಣ- 11%
ನಗರಾಭಿವೃದ್ಧಿ- 10%
ಜಲ ಸಂಪನ್ಮೂಲ- 8%
ಇಂಧನ- 7%
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ- 6%
ಕಂದಾಯ- 4%
ಲೋಕೋಪಯೋಗಿ- 4%
ಆರೋಗ್ಯ ಮತ್ತು ಕುಟುಂಬ ಕಲ್ಯಾಣ- 4%
ಒಳಾಡಳಿತ ಮತ್ತು ಸಾರಿಗೆ- 4%
ಸಮಾಜ ಕಲ್ಯಾಣ- 4%
ಕೃಷಿ ಮತ್ತು ತೋಟಗಾರಿಕೆ- 3%
ಮಹಿಳಾ ಮತ್ತು ಮಕ್ಕಳ ಕಲ್ಯಾಣ- 2%
ವಸತಿ- 1%
ಆಹಾರ ಮತ್ತು ನಾಗರಿಕ ಸರಬರಾಜು- 1%
ಇತರೆ- 31%
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications