ತುಮಕೂರಿನ ಜನತೆಗೆ ಸಿಹಿಸುದ್ದಿ.. 498 ಕೋಟಿ ಅನುದಾನ.. ಶಿರಾ ಸೇರಿ 4 ಕಡೆ ರೈಲ್ವೆ ನಿಲ್ದಾಣ ಹೌದು, ತುಮಕೂರು-ಚಿತ್ರದುರ್ಗ-ದಾವಣಗೆರೆ ಬ್ರಾಡ್ ಗೇಜ್ ರೈಲ್ವೆ ಮಾರ್ಗದಲ್ಲಿ ತಿಮ್ಮರಾಜನಹಳ್ಳಿಯಿಂದ ತಾವರೆಕೆರೆಯವರೆಗೆ 498ರೂ ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಂದವಾಗಿದ್ದು,ಶಿರಾ ಸೇರಿದಂತೆ ನಾಲ್ಕು ಕಡೆಗಳಲ್ಲಿ ನಿಲ್ದಾಣಗಳು ನಿರ್ಮಾಣವಾಗಲಿವೆ ಎಂದು ಶಿರಾ ಕ್ಷೇತ್ರದ ಶಾಸಕ ಹಾಗೂ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಈ ಕಾಮಗಾರಿ ಪೂರ್ಣಗೊಳಲು ಒಟ್ಟು 41 ಕಿ.ಮೀ. ಉದ್ದದ ಈ ಕಾಮಗಾರಿಗೆ ಫರೀದಾಬಾದ್ ನ ಮೆಸರ್ಸ್ ಕೆ.ಆರ್.ಸಿ.ಆಲ್ಟಿಸ್ ಜಾಯಿಂಟ್ ವೆಂಚರ್ ಎಂಬ ಏಜೆನ್ಸಿಯೊಂದಿಗೆ ಒಪ್ಪಂದವಾಗಿದ್ದು, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ ಮತ್ತು ತಾವರೆಕೆರೆಯಲ್ಲಿ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ. ಒಟ್ಟು 11 ದೊಡ್ಡ ಸೇತುವೆಗಳು, 55 ಕಿರುಸೇತುವೆ-ಕಲ್ವರ್ಟ್ ಗಳು, 35 ಓವರ್ ಬ್ರಿಜ್ ಹಾಗೂ 35 ಅಂಡರ್ ಬ್ರಿಜ್ ಗಳು ಕಾಮಗಾರಿಯ ಭಾಗವಾಗಿರುತ್ತವೆ ಎಂದು ಹಿರಿಯ ಶಾಸಕ ಜಯಚಂದ್ರ ಹೇಳಿದ್ದಾರೆ.

ಈ ರೈಲು ಮಾರ್ಗವು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸೀಬಿಯಿಂದ ಆರಂಭವಾಗಿ ಧರ್ಮಪುರದ ಮೂಲಕ 41 ಕಿ.ಮೀ. ಉದ್ದಕ್ಕೆ ಹಾದುಹೋಗುತ್ತದೆ. ಇದರಿಂದ ಶಿರಾ ತಾಲ್ಲೂಕಿನಲ್ಲಿ ಶೇಂಗಾ, ತೆಂಗಿನಕಾಯಿ, ಅಡಿಕೆ, ಹುಣಸೆಹಣ್ಣು, ತರಕಾರಿ ಮತ್ತು ದವಸ ಧಾನ್ಯಗಳನ್ನು ಬೆಳೆಯುವ ರೈತರಿಗೆ ಉತ್ಪನ್ನಗಳ ಸಾಗಣೆ ಹಾಗೂ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜೊತೆಗೆ, ಈ ಭಾಗದ ಜನಸಾಮಾನ್ಯರಿಗೆ ದಾವಣಗೆರೆ ಮತ್ತು ಬೆಂಗಳೂರಿಗೆ ಹೋಗುವುದು ಇನ್ನಷ್ಟು ಸುಲಭವಾಗುತ್ತದೆ ಎಂದು ಟಿ.ಬಿ ಜಯಚಂದ್ರ ಹೇಳಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಎರಡು ವಾರಗಳಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರೊಂದಿಗೆ ಶಿರಾದಲ್ಲಿ ತಾವು ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಶಿರಾ ಆಸುಪಾಸಿನಲ್ಲಿ ಈಗ ಐದು ರಾಷ್ಟ್ರೀಯ ಹೆದ್ದಾರಿಗಳಿದ್ದು, ಜೊತೆಗೆ ಈ ರೈಲ್ವೆ ಮಾರ್ಗವೂ ಬಳಕೆಗೆ ಸಿದ್ಧಗೊಂಡರೆ ಅತ್ಯುತ್ತಮ ಉತ್ತಮ ಸಂಪರ್ಕ ವ್ಯವಸ್ಥೆ ದೊರೆಯುತ್ತದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಶಿರಾ ತಾಲೂಕಿಗೆ ಬರಲಿದೆ ರೈಲು
ಶಿರಾ ತಾಲ್ಲೂಕು, ಕರ್ನಾಟಕದ ತುಮಕೂರು ಜಿಲ್ಲೆಯ ಪ್ರಮುಖ ಪ್ರದೇಶವಾಗಿದ್ದು, ಇಲ್ಲಿ ನೇರ ರೈಲು ಸಂಪರ್ಕ ಕಲ್ಪಿಸುವುದು ಜನತೆಯ ಬಹು ವರ್ಷಗಳ ಕನಸು. ಈ ಭಾಗದ ನಾಗರಿಕರು ಮತ್ತು ಹೋರಾಟಗಾರರು ಈ ಕನಸನ್ನು ಸಾಕಾರಗೊಳಿಸಲು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ.
2011-12ರಲ್ಲಿ, ಕೇಂದ್ರ ಸರ್ಕಾರವು ತುಮಕೂರು-ದಾವಣಗೆರೆ ರೈಲು ಮಾರ್ಗ (191 ಕಿಮೀ) ನಿರ್ಮಾಣಕ್ಕೆ ಅನುಮೋದನೆ ನೀಡಿತು.
ಯೋಜನೆಯ ಅಂದಾಜು ವೆಚ್ಚ: 913 ಕೋಟಿ
ವೆಚ್ಚ ಹಂಚಿಕೆ: ಕೇಂದ್ರ ಸರ್ಕಾರ ಶೇ. 50% ಮತ್ತು ರಾಜ್ಯ ಸರ್ಕಾರ ಶೇ. 50%
ಈ ಮಾರ್ಗದ ಭಾಗವಾಗಿಯೇ ಶಿರಾ ತಾಲ್ಲೂಕಿಗೂ ನೇರ ರೈಲು ಸಂಪರ್ಕ ಸಿಗಬೇಕೆಂದು ಪ್ರಾರಂಭದಲ್ಲಿ ನಿರ್ಧಾರವಿತ್ತು. ಆದರೆ ಈ ಯೋಜನೆಗೆ ಅನುಮೋದನೆ ಸಿಕ್ಕಿದ್ದು 13 ವರ್ಷಗಳು ಆಗಿವೆ.ಕಾಮಗಾರಿ ದೀರ್ಘ ಸಮಯದಿಂದ ಮಂದಗತಿಯಲ್ಲಿ ಸಾಗುತ್ತಿದೆ. ಭೂಮಿ, ಸ್ಥಳೀಯ ಸಮಸ್ಯೆಗಳು, ಅನುದಾನ ಬಿಡುಗಡೆ ವಿಳಂಬಗಳು ಈ ಯೋಜನೆಯ ಮುಂದಿನ ಹೆಜ್ಜೆಗಳನ್ನು ತಡೆಹಿಡಿದಿವೆ.
ಕರ್ನಾಟಕಕ್ಕೆ ಎರಡು ಹೊಸ ರೈಲ್ವೆ ಮಾರ್ಗಗಳು
ರೈಲ್ವೆ ಇಲಾಖೆಯು ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಮಹತ್ವಪೂರ್ಣ ಹೆಜ್ಜೆ ಇಡಿದ್ದು,ಎರಡು ನೂತನ ರೈಲ್ವೆ ಮಾರ್ಗಗಳ ಅಂತಿಮ ಸ್ಥಳ ಸಮೀಕ್ಷೆ (Final Location Survey)ಗೆ ಅನುಮೋದನೆ ನೀಡಿದೆ. ಈ ಯೋಜನೆಗಳಿಂದ ರಾಜ್ಯದ 6 ಜಿಲ್ಲೆಗಳ ಅಭಿವೃದ್ಧಿಯಾಗಲಿದೆ.
ನೂತನ ರೈಲ್ವೆ ಮಾರ್ಗಗಳು
ಆಲಮಟ್ಟಿ ಮತ್ತುಯಾದಗಿರಿ ರೈಲ್ವೆ ಮಾರ್ಗ: ಈ ಮಾರ್ಗವು ಉತ್ತರ ಕರ್ನಾಟಕದ ಸಂಪರ್ಕತೆಗೆ ಭದ್ರತೆಯನ್ನು ಹೆಚ್ಚಿಸುತ್ತದೆ.ಕೈಗಾರಿಕಾ ವಲಯಗಳಿಗೆ ಸುಲಭ ಸಂಪರ್ಕ ಒದಗಿಸುತ್ತದೆ.
ಭದ್ರಾವತಿ ಮತ್ತು ಚಿಕ್ಕಜಾಜೂರು ರೈಲ್ವೆ ಮಾರ್ಗ: ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ಕರ್ನಾಟಕ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.
6 ಜಿಲ್ಲೆಗಳಿಗೆ ಲಾಭ: ಈ ಹೊಸ ಮಾರ್ಗಗಳು ಸಂಪರ್ಕವಿಲ್ಲದ ಅಥವಾ ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಿಗೆ ಅಭಿವೃದ್ಧಿ ತರುವ ಸಾಧ್ಯತೆ ಇದೆ.
ವ್ಯವಸ್ಥಿತ ಸಂಚಾರ: ಜನಸಂಚಾರ, ವಾಣಿಜ್ಯ, ಕೃಷಿ ಹಾಗೂ ಕೈಗಾರಿಕಾ ಸಾಗಣೆ ಸುಲಭಗೊಳ್ಳಲಿದೆ.
ಮೂಲ ಸೌಕರ್ಯ ವಿಸ್ತರಣೆ: ರೈಲ್ವೆ ನಿಲ್ದಾಣಗಳು, ಟ್ರ್ಯಾಕ್, ಹಾಗೂ ಸಂಚಾರ ವ್ಯವಸ್ಥೆಗಳ ಅಭಿವೃದ್ದಿ ನಿರೀಕ್ಷಿಸಬಹುದು.
ಸರ್ಕಾರವು ಈಗಾಗಲೇ ಅಂತಿಮ ಸ್ಥಳ ಸರ್ವೆಗಾಗಿ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದ್ದುದು ಎಂದು ರೈಲ್ವೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.


Click it and Unblock the Notifications