For Quick Alerts
ALLOW NOTIFICATIONS  
For Daily Alerts

ಭಾರತದಿಂದ ವಿದೇಶಕ್ಕೆ ಹಣ ವರ್ಗಾವಣೆ ಮಾಡಿದಲ್ಲಿ ಅ. 1ರಿಂದ 5% ಟಿಸಿಎಸ್

|

ಭಾರತದಿಂದ ವಿದೇಶಕ್ಕೆ ಹಣವನ್ನು ವರ್ಗಾವಣೆ ಮಾಡುವವರು ತುರ್ತಾಗಿ ಗಮನಿಸಬೇಕಾದ ಸಂಗತಿ ಇದು. ಮುಂದಿನ ತಿಂಗಳು, ಅಕ್ಟೋಬರ್ 1ನೇ ತಾರೀಕಿನಿಂದ ವಿದೇಶಕ್ಕೆ ಭಾರತದಿಂದ ವರ್ಗಾವಣೆ ಆಗುವ ಹಣಕ್ಕೆ ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್ (ಟಿಸಿಎಸ್) ಬೀಳುತ್ತದೆ. ಹಣಕಾಸು ಕಾಯ್ದೆ 2020ರ ಪ್ರಕಾರ, ವಿದೇಶಕ್ಕೆ ಕಳುಹಿಸುವ ಮೊತ್ತದಲ್ಲಿ 5% ಟಿಸಿಎಸ್ ಕಡಿತ ಆಗುತ್ತದೆ.

 

ಇನ್ನು ಎಲ್ಲ ವಿದೇಶಿ ಹಣ ವರ್ಗಾವಣೆಗೂ ಇದು ಅನ್ವಯ ಆಗುತ್ತದೆ ಎಂದಲ್ಲ. 7 ಲಕ್ಷಕ್ಕಿಂತ ಕಡಿಮೆ ಅವಧಿಗೆ ಹಾಗೂ ಟೂರ್ ಪ್ಯಾಕೇಜ್ ಖರೀದಿಗೆ ಅನ್ವಯ ಆಗಲ್ಲ. ಟೂರ್ ಪ್ಯಾಕೇಜ್ ಅಲ್ಲದಿದ್ದಲ್ಲಿ, ಏಳು ಲಕ್ಷ ಮೇಲ್ಪಟ್ಟ ಮೊತ್ತದ ಪಾವತಿಗೆ ಟಿಸಿಎಸ್ ಅನ್ವಯ ಆಗುತ್ತದೆ.

 

ಜುಲೈ- ಸೆಪ್ಟೆಂಬರ್ ತ್ರೈಮಾಸಿಕಕ್ಕೂ ಜಿಡಿಪಿ ಕುಸಿತ ಮುಂದುವರಿಯುವ ಸಾಧ್ಯತೆಜುಲೈ- ಸೆಪ್ಟೆಂಬರ್ ತ್ರೈಮಾಸಿಕಕ್ಕೂ ಜಿಡಿಪಿ ಕುಸಿತ ಮುಂದುವರಿಯುವ ಸಾಧ್ಯತೆ

ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು, ಶೈಕ್ಷಣಿಕ ಸಾಲ ಪಡೆದವರಿಗೆ ಹಣಕಾಸು ಸಂಸ್ಥೆಗಳಿಂದ ಏಳು ಲಕ್ಷ ಮೇಲ್ಪಟ್ಟು ಮೊತ್ತ ವರ್ಗಾವಣೆ ಮಾಡುವಾಗ 0.5% ನಿಗದಿ ಮಾಡಲಾಗಿದೆ. ಇನ್ನು ಈಗಾಗಲೇ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಆಗಿರುವವರಿಗೆ ಈ ಟಿಸಿಎಸ್ ಅನ್ವಯ ಆಗಲ್ಲ.

ಭಾರತದಿಂದ ವಿದೇಶಕ್ಕೆ ಹಣ ವರ್ಗಾವಣೆ ಮಾಡಿದಲ್ಲಿ ಅ. 1ರಿಂದ 5% ಟಿಸಿಎಸ್

ಈ ವರ್ಷದ ಮಾರ್ಚ್ 27ನೇ ತಾರೀಕಿನಂದು ಹಣಕಾಸು ಕಾಯ್ದೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ನಿಯಮಗಳು ಅಕ್ಟೋಬರ್ 1ನೇ ತಾರೀಕಿನಿಂದ ಅನ್ವಯ ಆಗುತ್ತದೆ. ಗ್ರಾಹಕರು ಈ ಟಿಸಿಎಸ್ ಭರಿಸಬೇಕಾಗುತ್ತದೆ.

English summary

5% Tax at Source on Foreign Remittances to Start From 1 October

Foreign remittance attract 5% TCS from October 1, 2020. Here is the details about tax. There are certain exemption.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X