2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಜಿಡಿಪಿ ಗುರಿ ಅಸಾಧ್ಯ: ಆರ್‌ಬಿಐ ಗವರ್ನರ್

ಆರ್ಥಿಕತೆಯ ಹಿಂಜರಿತದ ಮಧ್ಯೆ ಪ್ರಸ್ತುತ ಆರ್ಥಿಕತೆಯ ಬೆಳವಣಿಗೆ ದರವು 2025ಕ್ಕೆ 5 ಟ್ರಿಲಿಯನ್ ಡಾಲರ್ ಜಿಡಿಪಿ ಗುರಿ ಮುಟ್ಟುವುದು ಅಸಾಧ್ಯವಾಗಿದೆ ಎಂದು ಆರ್‌ಬಿಐನ ಮಾಜಿ ಗವರ್ನರ್ ಸಿ. ರಂಗರಾಜನ್ ಹೇಳಿದ್ದಾರೆ.

2025ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಕೊಂಡೊಯ್ಯುವುದು ಪ್ರಧಾನಿ ಮೋದಿ ಸರ್ಕಾರದ ಯೋಜನೆಯಾಗಿದ್ದು, ಪ್ರಸ್ತುತ ಆರ್ಥಿಕ ಪರಿಸ್ಥಿತಿ ಗಮನಿಸಿದರೆ ಗುರಿ ತಲುಪುವುದು ಅಸಾಧ್ಯವಾಗಿದೆ ಎಂದಿದ್ದಾರೆ.

2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಜಿಡಿಪಿ ಅಸಾಧ್ಯ: RBI ಗವರ್ನರ್

2019-20ರ ಹಣಕಾಸುವ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರವು 6 ವರ್ಷಗಳಿಗಿಂತ ಕನಿಷ್ಟ ಮಟ್ಟಕ್ಕೆ ತಲುಪಿ ಶೇಕಡಾ 5ಕ್ಕೆ ಇಳಿಕೆಯಾಗಿದೆ. 2ನೇ ತ್ರೈಮಾಸಿಕ ಮುನ್ಸೂಚನೆಯು ಈಗ ಶೇಕಡಾ 4.2ರಷ್ಟಿದೆ. ಆರ್‌ಬಿಐ ಕೂಡ ತನ್ನ ಬೆಳವಣಿಗೆ ದರವನ್ನು ವಾರ್ಷಿಕವಾಗಿ 90 ಬಿಪಿಎಎಸ್‌ನಿಂದ ಅಕ್ಟೋಬರ್ ನೀತಿ ಪರಿಶೀಲನೆಯಲ್ಲಿ 6.1ಕ್ಕೆ ಇಳಿಸಿದೆ.

' ಇಂದು ಭಾರತದ ಆರ್ಥಿಕತೆಯು 2.7 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ. ಆದರೆ ಮುಂದಿನ 5 ವರ್ಷಗಳಲ್ಲಿ ಇದನ್ನು 5 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ ದ್ವಿಗುಣಗೊಳಿಸುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಆ ಮಟ್ಟವನ್ನು ಸಾಧಿಸಲು ಅಗತ್ಯವಾದ ಬೆಳವಣಿಗೆ ದರವು ವರ್ಷಕ್ಕೆ ಶೇಕಡಾ 9 ಪ್ರತಿಶತಕ್ಕಿಂತ ಹೆಚ್ಚಾಗಿದೆ. 2025ಕ್ಕೆ 5 ಟ್ರಿಲಿಯನ್ ಡಾಲರ್ ತಲುಪುವ ಪ್ರಶ್ನೆಯೇ ಇಲ್ಲ' ಎಂದು ರಂಗರಾಜನ್ ತಿಳಿಸಿದ್ದಾರೆ.

' ನೀವು ಈಗಾಗಲೇ 2 ವರ್ಷಗಳನ್ನು ಕಳೆದುಕೊಂಡಿದ್ದೀರಿ. ಈ ವರ್ಷ ಅದು ಶೇಕಡಾ 6ಕ್ಕಿಂತ ಕಡಿಮೆ ಬೆಳವಣಿಗೆಯಾಗಿದೆ ಮತ್ತು ಮುಂದಿನ ವರ್ಷ ಇದು ಸುಮಾರು 7 ಪ್ರತಿಶತದಷ್ಟು ಇರಬಹುದು. ಅದರ ನಂತರ ಆರ್ಥಿಕತೆಯು ಹೆಚ್ಚಾಗಬಹುದು' ಎಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+