ಹತ್ತಿರ ಹತ್ತಿರ 50 ಲಕ್ಷ ಮಂದಿ ವೇತನದಾರರು ಜುಲೈ ತಿಂಗಳಿನಲ್ಲಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಖ್ಯವಾಗಿ ಅಸಂಘಟಿತ ವಲಯದೊಂದಿಗೆ ಒಟ್ಟಾರೆ ಉದ್ಯೋಗ ದರದಲ್ಲಿ ಚೇತರಿಕೆ ಕಂಡಿದ್ದರೂ ಈ ವಿಭಾಗದಲ್ಲಿ ಒಟ್ಟು 1.89 ಕೋಟಿ ಉದ್ಯೋಗ ನಷ್ಟವಾಗಿದೆ. ವೇತನ ಪಡೆಯುವ ವರ್ಗದಲ್ಲಿ ಹೆಚ್ಚುತ್ತಿರುವ ಉದ್ಯೋಗ ನಷ್ಟದ ಪ್ರಮಾಣವು ಆತಂಕಕ್ಕೆ ಕಾರಣವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಹೇಳಿದೆ.
CMIE ದತ್ತಾಂಶದ ಪ್ರಕಾರ, 2020ರ ಏಪ್ರಿಲ್ ನಲ್ಲಿ 1.77 ಕೋಟಿ ಮಂದಿ ವೇತನದಾರರು ಉದ್ಯೋಗ ಕಳೆದುಕೊಂಡಿದ್ದಾರೆ. ಮೇ ತಿಂಗಳಲ್ಲಿ 1 ಲಕ್ಷ ಉದ್ಯೋಗ ನಷ್ಟ, ಜೂನ್ ನಲ್ಲಿ 39 ಲಕ್ಷ ಉದ್ಯೋಗ ಗಳಿಕೆಯಾಗಿದ್ದು, ಜುಲೈನಲ್ಲಿ ಐವತ್ತು ಲಕ್ಷ ಉದ್ಯೋಗಗಳು ಹೆಚ್ಚುವರಿಯಾಗಿ ನಷ್ಟವಾಗಿದೆ.
ಇದು ಅನಾರೋಗ್ಯಕರ ಚೇತರಿಕೆ ಮತ್ತು ವೇತನ ವರ್ಗದವರ ಪಾಲಿಗೆ ಸನ್ನಿವೇಶ ಬಹಳ ಕೆಟ್ಟದಾಗಿದೆ ಎಂದು CMIE ಹೇಳಿದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಇರುವ ಒಟ್ಟಾರೆ ಉದ್ಯೋಗದ ಪೈಕಿ 21%ನಷ್ಟು ಮಂದಿ ವೇತನ ಪಡೆಯುವ ಉದ್ಯೋಗದವರಾಗಿದ್ದಾರೆ. ಆದ್ದರಿಂದ ಆರ್ಥಿಕತೆಗೆ ಸಮಸ್ಯೆ ಎದುರಾಗಿದೆ. ಅದರ ಫಲಿತವಾಗಿ ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ ಉದ್ಯೋಗ ನಷ್ಟದಲ್ಲಿ 15%ನಷ್ಟು ವೇತನದಾರರ ಉದ್ಯೋಗ ನಷ್ಟವಾಗಿದೆ.

ವೇತನ ಬರುವ ಉದ್ಯೋಗಗಳು ಕಳೆದುಕೊಂಡರೆ ಮತ್ತೆ ಸಿಗುವುದು ಸುಲಭವಿಲ್ಲ. ಆದ್ದರಿಂದ ಅವರ ಉದ್ಯೋಗ ನಷ್ಟವು ಚಿಂತೆಗೆ ಕಾರಣವಾಗಿದೆ ಎಂದು CMIE ಎಚ್ಚರಿಕೆ ನೀಡಿದೆ. ವೇತನದಾರ ಉದ್ಯೋಗಗಳು 2019- 20ರಲ್ಲಿ ಸರಾಸರಿ 1.90 ಕೋಟಿ ಹತ್ತಿರ ಕೊರತೆಯಾಗಿದೆ.
ಈ ಹಿಂದೆ CMIE ಅಂದಾಜು ಮಾಡಿದ್ದಂತೆ, ಲಾಕ್ ಡೌನ್ ಘೋಷಣೆಯಾದ ಏಪ್ರಿಲ್ ತಿಂಗಳಲ್ಲಿ 12.15 ಕೋಟಿ ಉದ್ಯೋಗ ನಷ್ಟವಾಗಬಹುದು ಎಂದಿತ್ತು. ಆ ತಿಂಗಳಲ್ಲಿ ಸಂಖ್ಯೆ ಹತ್ತಿರವೇ ಇತ್ತು. ಇನ್ನು ಮೇ ತಿಂಗಳಲ್ಲಿ ಅದು 10.03 ಕೋಟಿ ಆಯಿತು. ಜೂನ್ ನಲ್ಲಿ 2.99 ಕೋಟಿ ಹಾಗೂ ಜುಲೈನಲ್ಲಿ 1.10 ಕೋಟಿ ಆಯಿತು.
ಏಪ್ರಿಲ್ ನಲ್ಲಿ 30% ವೇತನದಾರರು ಕೆಲಸ ಕಳೆದುಕೊಂಡರು. ಜುಲೈನಲ್ಲಿ 3%ಗಿಂತ ಕಡಿಮೆ ಮಂದಿ ತಮ್ಮ ಜೀವನದ ಮಾರ್ಗ ಕಳೆದುಕೊಂಡಿದ್ದಾರೆ ಎಂದು CMIE ಹೇಳಿದೆ. ಈಗಲೂ 1.10 ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ತಿಳಿಸಿದೆ.


Click it and Unblock the Notifications