ಬೆಂಗಳೂರು, ಆಗಸ್ಟ್ 21: ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಕಡಿತ ಸಾಮಾನ್ಯವಾಗಿ ಬಿಟ್ಟಿದೆ. ಐಟಿ ಕ್ಷೇತ್ರದಲ್ಲಿ ಸಾಮೂಹಿಕ ವಜಾಗೊಳಿಸುವಿಕೆಯು ಲಕ್ಷಾಂತರ ಮಂದಿಯನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಇದೇ ರೀತಿ ಸುಮಾರು ಹನ್ನೆರಡಕ್ಕೂ ಹೆಚ್ಚು ಲೈಫ್ ಸ್ಟೈಲ್, ತ್ವರಿತ-ಸೇವಾ ರೆಸ್ಟೋರೆಂಟ್‌ಗಳು ಮತ್ತು ದಿನಸಿ ಚಿಲ್ಲರೆ ವ್ಯಾಪಾರ ಸಂಸ್ಥೆಗಳು ಆರ್ಥಿಕ ವರ್ಷ 24 ರಲ್ಲಿ ಸುಮಾರು 26,000 ಉದ್ಯೋಗಗಳನ್ನು ಕಡಿತಗೊಳಿಸಿವೆ. ಕಳೆದೆರಡು ವರ್ಷಗಳಿಂದ ಗ್ರಾಹಕರ ಬೇಡಿಕೆಯಲ್ಲಿ ಕುಸಿತ ಹಾಗೂ ತಮ್ಮ ಔಟ್ ಲೆಟ್ ವಿಸ್ತರಣೆಗಳಲ್ಲಿನ ನಿಧಾನಗತಿ ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ರಿಟೇಲ್ ಆರ್ಮ್, ಟೈಟಾನ್, ರೇಮಂಡ್, ಪೇಜ್ ಮತ್ತು ಸ್ಪೆನ್ಸರ್ಸ್ - ಐದು ಚಿಲ್ಲರೆ ವ್ಯಾಪಾರ ಸಂಸ್ಥೆಗಳ ಇತ್ತೀಚಿನ ವಾರ್ಷಿಕ ವರದಿಗಳ ಪ್ರಕಾರ ಇವುಗಳಲ್ಲಿ ಉದ್ಯೋಗ ಕಡಿತ ಹೆಚ್ಚಳವಾಗಿದ್ದು ಇದು ಉದ್ಯೋಗಿಗಳ ಕುಸಿತವನ್ನು 17% ರಷ್ಟು ಗುರುತಿಸಬಹುದಾಗಿದೆ ಅಥವಾ 52,000 ಮಂದಿಯಷ್ಟಾಗಿದೆ. ರಿಟೇಲ್ ವಲಯ, ಕೃಷಿಯ ನಂತರದ ಎರಡನೇ ಅತಿ ದೊಡ್ಡ ಉದ್ಯೋಗದಾತ ವಲಯವಾಗಿದ್ದು, ಇಲ್ಲಿ ಖಾಯಂ ಮತ್ತು ಗುತ್ತಿಗೆ ಕಾರ್ಮಿಕರನ್ನು ಒಳಗೊಂಡಿರುವ ಒಟ್ಟು ಸಿಬ್ಬಂದಿಯನ್ನು ಹೊಂದಿದ್ದು, ಇಲ್ಲಿ ಉದ್ಯೋಗ ಕ್ಷೀಣತೆ ಕಾಣಿಸಿಕೊಂಡಿದೆ. ಆರ್ಥಿಕ ವರ್ಷದಲ್ಲಿ 24 ರಲ್ಲಿ, ಈ ರಿಟೇಲ್ ವ್ಯಾಪಾರಗಳ ಒಟ್ಟು ಉದ್ಯೋಗವು 429,000 ರಷ್ಟಿದ್ದು ಅದಕ್ಕೂ ಹಿಂದಿನ ವರ್ಷ 455,000ದಷ್ಟಿತ್ತು.

"ಪ್ರತಿಭೆಗಳ ಕೊರತೆಯಿದ್ದು ಇದಕ್ಕಾಗಿ ನಾವು ಕೆಲ ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಉದ್ಯಮವು ನೇಮಕಾತಿಗೆ ಆಯ್ಕೆಗಳು ಸಿಗುತ್ತವೆ. ಕೆಲವು ಕಂಪನಿಗಳು ಕೆಲವು ವ್ಯವಹಾರಗಳನ್ನು ಸ್ಥಗಿತಗೊಳಿಸಿರುವುದರಿಂದ ಸಿಬ್ಬಂದಿಯನ್ನು ಕಡಿಮೆಗೊಳಿಸಿರಬಹುದು, ಆದರೆ ಶಾಪರ್ಸ್ ಸ್ಟಾಪ್ ಮತ್ತು ಟ್ರೆಂಡ್ ನಂತಹ ಕಂಪನಿಗಳು ವಿಸ್ತರಣೆಯನ್ನು ಮುಂದುವರೆಸುತ್ತವೆ ಮತ್ತು ಸಿಬ್ಬಂದಿ ಅಗತ್ಯವಿರುತ್ತದೆ "ಎಂದು ದೇಶದ ಸಂಘಟಿತ ರಿಟೇಲ್ ವ್ಯಾಪಾರವನ್ನು ಪ್ರತಿನಿಧಿಸುವ ರಿಟೇಲ್ ವ್ಯಾಪಾರಿಗಳ ಸಂಘದ ಸಿಇಒ ಕುಮಾರ್ ರಾಜಗೋಪಾಲನ್ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ನಂತರದ ಅವಧಿಯಲ್ಲಿ, ಜನರ ಕೊಳ್ಳುಬಾಕತನ ಹೆಚ್ಚಾಗಿ ಕಾರುಗಳಿಂದ ಹಿಡಿದು ಉಡುಪುಗಳವರೆಗೆ ಎಲ್ಲಾ ವರ್ಗಗಳಾದ್ಯಂತ ಶಾಪಿಂಗ್ ಗಾಗಿ ಖರ್ಚು ಮಾಡಲು ಕಾರಣವಾಯಿತು. ಆದರೆ ಹಣದುಬ್ಬರ , ಬಡ್ಡಿದರಗಳಲ್ಲಿನ ಹೆಚ್ಚಳ, ಸ್ಟಾರ್ಟ್‌ಅಪ್‌ಗಳು ಮತ್ತು ಐಟಿಯಂತಹ ವಲಯಗಳಲ್ಲಿನ ಉದ್ಯೋಗ ನಷ್ಟ ಮತ್ತು ಆರ್ಥಿಕತೆಯ ಮಂದಗತಿಯ ಬೆಳವಣಿಗೆಯೂ ಒಟ್ಟಾರೆ 2022 ರ ದೀಪಾವಳಿಯ ನಂತರ ಉಡುಪುಗಳು, ಜೀವನಶೈಲಿ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್ ಮುಂದಾದ ಅನಿವಾರ್ಯವಲ್ಲದ ವೆಚ್ಚವನ್ನು ಗ್ರಾಹಕರು ಕಡಿಮೆ ಮಾಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಭಾರತದಲ್ಲಿ ರಿಟೇಲ್ ಮಾರಾಟದಲ್ಲಿನ ಈ ಬೆಳವಣಿಗೆಯು ಕಳೆದ ವರ್ಷಕ್ಕಿಂತ ಈ ವರ್ಷವೂ 4 ಪ್ರತಿಶತಕ್ಕೆ ಕುಸಿಯಿತು.
ಮಾರಾಟದಲ್ಲಿ ಕುಂಠಿತವಾದ ಕಾರಣ, ಈ ವ್ಯಾಪಾರಗಳು ತಮ್ಮ ಮಳಿಗೆಗಳನ್ನು ಕನಿಷ್ಠ ಐದು ವರ್ಷಗಳಲ್ಲಿ ನಿಧಾನ ಗತಿಯಲ್ಲಿ ವಿಸ್ತರಿಸಿದವು. ವಾಣಿಜ್ಯ ರಿಯಲ್ ಎಸ್ಟೇಟ್ ಸೇವೆಗಳ ಕಂಪನಿ CBRE ಪ್ರಕಾರ, ಚಿಲ್ಲರೆ ಉದ್ಯಮವು 2023 ರಲ್ಲಿ ಅಗ್ರ ಎಂಟು ನಗರಗಳಲ್ಲಿ 7.1 ಮಿಲಿಯನ್ ಚದರ ಅಡಿ ಜಾಗವನ್ನು ಆಕ್ರಮಿಸಿಕೊಂಡಿದೆ. 2024 ರ ವೇಳೆಗೆ, ಈ ಸಂಖ್ಯೆ 6-6.5 ಮಿಲಿಯನ್ ಚದರ ಅಡಿಗಳಿಗೆ ಇಳಿಯುತ್ತದೆ ಎಂದು ಊಹಿಸಲಾಗಿತ್ತು.
"ಸ್ಟೋರ್ ಉತ್ಪಾದಕತೆಯು ಸಾಮಾನ್ಯವಾಗಿ ಹೆಚ್ಚು - ಕಡಿಮೆಯಂತೆ ಚಕ್ರಗಳ ರೀತಿಯಲ್ಲಿ ನಡೆಯುತ್ತದೆ. ಇನ್ನೊಂದೆಡೆ ಗ್ರಾಹಕರು ತಮ್ಮ ಖರ್ಚು ವೆಚ್ಚಗಳನ್ನು ಸಾಂಕ್ರಾಮಿಕದ ವೇಳೆ ಸಡಿಲಿಸುವುದನ್ನು ನೋಡಿದ್ದೇವೆ. ಸಾಂಕ್ರಾಮಿಕೋತ್ತರ ಅವಧಿಯಲ್ಲಿ ವ್ಯಾಪಾರ ಏರಿಕೆಯಾಗಿ ಇದು ರಿಟೇಲ್ ಸಂಸ್ಥೆಗಳು ತಮ್ಮ ನೆಟ್ವರ್ಕ್ ಅಥವಾ ಔಟ್ ಲೆಟ್ ಗಳನ್ನು ವಿಸ್ತರಿಸಲು ಕಾರಣವಾಯಿತು. ಆದರೆ ಇದಾದ ನಂತರ ಕೆಲವು ಅಂಗಡಿಗಳಲ್ಲಿ ಹೆಚ್ಚಿನ ಉತ್ಪಾದಕತೆ ಕಂಡುಬಾರದಿದ್ದರೇ ಇವುಗಳನ್ನು ನಿರ್ವಹಿಸುವ ತಂಡಗಳು ವಸ್ತುನಿಷ್ಠತೆಯಿಂದ , ನಿರ್ದಯವಾಗಿ ಅಂಗಡಿಗಳನ್ನು ಮುಚ್ಚುತ್ತದೆ"ಎಂದು ಚಿಲ್ಲರೆ ಸಲಹಾ ಸಂಸ್ಥೆ ಥರ್ಡ್ ಐಸೈಟ್ ಸಂಸ್ಥಾಪಕ ದೇವಾಂಗ್ಶು ದತ್ತಾ ಹೇಳಿದ್ದಾರೆ.
"ಇದಲ್ಲದೆ, ಯಾವುದೇ ಕಂಪನಿಯು ಆರೋಗ್ಯಕರ ಮತ್ತು ನೇರವಾದ ಕಾರ್ಯಾಚರಣೆಗಳನ್ನು ಹೊಂದಲು ಬಯಸುವ ಕಾರಣ ಅಂತಹ ಸಂಸ್ಥೆಗಳನ್ನು ನಾವು ದೂಷಿಸಲು ಸಾಧ್ಯವಿಲ್ಲ" ಎನ್ನುತ್ತಾರೆ ದೇವಾಂಗ್ಶು ದತ್ತಾ .
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications