ಎಲ್ಲಾದ್ರೂ ಮಳಿಗೆಗಳಲ್ಲಿ, ಮಾಲ್‌ನಲ್ಲಿ ಯಾವುದಾದರೂ ವಸ್ತು ಅಥವಾ ಸೇವೆಯ ಮೇಲೆ ಡಿಸ್ಕೌಂಟ್ ಇದೆ ಅಂದರೆ ಮುಗಿದೇ ಹೋಯ್ತು. ಜನರು ಸಾಲುಗಟ್ಟಿ ನಿಂತು ಬೇಕಾದ್ರೂ ಮಳಿಗೆಗೆ ತೆರಳುತ್ತಾರೆ. ಅದೇ ರೀತಿಯ ಯಾವುದಾದರೂ ಶಾಪಿಂಗ್ ಸೈಟ್‌ನಲ್ಲಿ ಡಿಸ್ಕೌಂಟ್ ಇದೆ ಅಂದ್ರೆ ತಕ್ಷಣವೇ ಕೈ ಬೆರಳು ಆ ಆಯ್ಕೆಯ ಕಡೆಗೆ ತೆರಳಿಬಿಡುತ್ತೆ. ಆದರೆ ಈ ಡಿಸ್ಕೌಂಟ್ ಸೇಲ್ ಕುತೂಹಲದಿಂದಲೇ, ಒಟ್ಟಾರೆ ಭಾರತೀಯರಲ್ಲಿ 56.1 ಪರ್ಸೆಂಟ್ ಜನರು ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಖ್ಯಾತ ಆ್ಯಂಟಿ ವೈರಸ್ ಕಂಪನಿ ಮೆಕಫಿ ಪ್ರಕಾರ 2019ರಲ್ಲಿ 56.1 ಪರ್ಸೆಂಟ್‌ಗೂ ಹೆಚ್ಚು ಜನರು ಅಂತರ್ಜಾಲದಲ್ಲಿ ಸುಳ್ಳು ಸೇವಾಸಂಸ್ಥೆಗಳ ಜಾಲಕ್ಕೆ ಸಿಲುಕುತ್ತಿದ್ದಾರೆ. ಇದರಲ್ಲಿ ಭಾರತೀಯರೇ ಹೆಚ್ಚಾಗಿದ್ದು 50 ಪರ್ಸೆಂಟ್‌ಗೂ ಹೆಚ್ಚು ಜನರು ಮೋಸಕ್ಕೆ ಒಳಗಾಗಿದ್ದಾರೆ. ಹಬ್ಬದ ಸೀಸನ್‌ಗಳಲ್ಲಿ ಕೆಲವೊಂದು ಸೈಟ್‌ಗಳು ಹೆಚ್ಚು ಡಿಸ್ಕೌಂಟ್ ಆಫರ್‌ಗಳನ್ನು ನೀಡುವ ಮೂಲಕ ಜನರನ್ನು ಮೋಸದ ಜಾಲಕ್ಕೆ ತಳ್ಳುತ್ತಿವೆ.

ಇನ್ನು ಸುಳ್ಳು ಆನ್‌ಲೈನ್ ಖರೀದಿ ವೆಬ್‌ಸೈಟ್‌ಗಳ ಮೂಲಕ 28.6 ಪರ್ಸೆಂಟ್ ಭಾರತೀಯರು 20,000 ರುಪಾಯಿಗಳವರೆಗೂ ಹಣ ಕಳೆದುಕೊಂಡಿದ್ದಾರೆ. 78.6 ಪರ್ಸೆಂಟ್ ಜನರು ಕೆಲವೊಂದು ಸನ್ನಿವೇಶಗಳಲ್ಲಿ ಹಣ ಕಳೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇ-ಮೇಲ್ ಮೂಲಕ ಹಣ ಗೆದ್ದಿದ್ದೀರಾ ಎಂದು ಆಫರ್ ನೀಡುವುದು ಅಥವಾ SMS ಬರುವುದು ಸಾಮಾನ್ಯವಾಗಿಬಿಟ್ಟಿದೆ. ಈ ಮೋಸದ ಜಾಲಗಳಲ್ಲಿ ಭಾರತೀಯರೇ ಹೆಚ್ಚು ಸಿಲುಕುತ್ತಿರುವುದು ದುರದೃಷ್ಠಕರ. ಹೀಗಾಗಿ ಈ ರೀತಿಯ ಮೋಸದ ಜಾಲದ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications