ಭಾರತದ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಜುಲೈ 26 ರಿಂದ ಆರಂಭವಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಅದಾನಿ ಡೇಟಾ ನೆಟ್‌ವರ್ಕ್ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. 4 ದಿನಗಳಲ್ಲಿ ಸರಿ ಸುಮಾರು ಶೇ 71ರಷ್ಟು ಸ್ಪೆಕ್ಟ್ರಮ್ ಹರಾಜು ಮಾಡಲಾಗಿದ್ದು, ಇದರ ಮೌಲ್ಯ 1. 5 ಲಕ್ಷ ಕೋಟಿ ರು ಮೀರಿದೆ ಎಂದು ಟೆಲಿಕಾಂ ಸಚಿವ ಅಶ್ವನಿ ವೈಷ್ಣವ್ ಹೇಳಿದ್ದಾರೆ.
5G ಸ್ಪೆಕ್ಟ್ರಮ್ ಹರಾಜಿನಲ್ಲಿ 4.3 ಲಕ್ಷ ಕೋಟಿ ಮೌಲ್ಯದ 72 GHz ರೇಡಿಯೊವೇವ್‌ಗಳಿಗೆ ಬಿಡ್ಡಿಂಗ್ ನಡೆಯಲಿದೆ. ಹರಾಜು ಪ್ರಕ್ರಿಯೆಯು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಿದ್ದು, ಸಂಜೆ 6 ರವರೆಗೆ ನಡೆಯಲಿದೆ. ಟೆಲಿಕಾಂ ಇಲಾಖೆ (DoT) ಮೂಲಗಳ ಪ್ರಕಾರ, ರೇಡಿಯೊವೇವ್‌ಗಳ ನಿಜವಾದ ಬೇಡಿಕೆ ಮತ್ತು ವೈಯಕ್ತಿಕ ಬಿಡ್‌ದಾರರು ಬಳಸುವ ತಂತ್ರಗಳನ್ನು ಅವಲಂಬಿಸಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಇದು 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಹಾಗೂ 26 GHz ಅನ್ನು ಬಳಕೆ ಮಾಡುವ ಹಕ್ಕಿಗೆ ಸಂಬಂಧಿಸಿ ನಡೆಯುವ ಹರಾಜು ಇದಾಗಿದೆ.
20 ವರ್ಷಗಳ ಕಾಲ 5ಜಿ ಸ್ಪೆಕ್ಟ್ರಮ್ ಬಳಕೆ
ಏಳು ಸುತ್ತುಗಳಲ್ಲಿ ಶುಕ್ರವಾರ 231.6 ಕೋಟಿ ರು ಬಿಡ್ ಆಗಿತ್ತು. ವೈಯಕ್ತಿಕ ಬಿಡ್‌ಗಳ ಬ್ರೇಕಪ್ ವಿವರವನ್ನು ಸರ್ಕಾರವು ಇನ್ನೂ ಒದಗಿಸಿಲ್ಲ, ಆದರೆ ಇತ್ತೀಚಿನ ರಾಜ್ಯವಾರು ಡೇಟಾವು ಇಲ್ಲಿಯವರೆಗೆ 23 ಸುತ್ತುಗಳು ನಡೆದಿವೆ ಎಂದು ತೋರಿಸುತ್ತದೆ. ಹರಾಜಿನಲ್ಲಿ ಗೆಲುವು ಸಾಧಿಸಿದ ಸಂಸ್ಥೆಯು 20 ವರ್ಷಗಳ ಕಾಲ 5ಜಿ ಸ್ಪೆಕ್ಟ್ರಮ್ ಬಳಕೆಯ ಹಕ್ಕು ಹೊಂದಲಿದ್ದಾರೆ.
ಸುಮಾರು 40 ಪ್ರತಿಶತದಷ್ಟು ನಷ್ಟ
ಖಾಸಗಿ ನೆಟ್‌ವರ್ಕ್‌ಗಳಿಗಾಗಿ ಉದ್ಯಮಗಳಿಗೆ ಕೆಲವು ಏರ್‌ವೇವ್‌ಗಳನ್ನು ಹಂಚಿಕೆ ಮಾಡುವುದರಿಂದ ಸಂಭಾವ್ಯ ಆದಾಯದಲ್ಲಿ ಸುಮಾರು 40 ಪ್ರತಿಶತದಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ ಎಂಬ ಹಿಂದಿನ ಕಳವಳಗಳ ಹೊರತಾಗಿಯೂ ಟೆಲ್ಕೋಗಳು ಹರಾಜಿನಲ್ಲಿ ಆಕ್ರಮಣಕಾರಿಯಾಗಿ ಬಿಡ್ ಮಾಡುತ್ತಿವೆ.
ಸಚಿವ ಅಶ್ವನಿ ಶನಿವಾರದಂದು ಮುಂಬೈನಲ್ಲಿ ಪಿಇ ಫಂಡ್‌ಗಳು, ವಿಸಿಗಳು, ಹೂಡಿಕೆದಾರರು ಮತ್ತು ಬ್ಯಾಂಕ್‌ಗಳೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯಗಳು ಮತ್ತು ಟೆಲಿಕಾಂ ಕ್ಷೇತ್ರದ ಬೆಳವಣಿಗೆಯ ಹಾದಿ ಬಗ್ಗೆ ಚರ್ಚಿಸಲಿದ್ದಾರೆ. ಸರ್ಕಾರವು ಕ್ಷೇತ್ರಕ್ಕೆ ಹೊಸ ಕಾನೂನು ಚೌಕಟ್ಟನ್ನು ರೂಪಿಸುತ್ತಿರುವ ಸಮಯದಲ್ಲಿ ಈ ಕ್ರಮವು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಪೂರ್ಣ-ಪ್ರಮಾಣದ ಉನ್ನತ-ಗುಣಮಟ್ಟದ ವಿಡಿಯೋ
ಪೂರ್ಣ-ಪ್ರಮಾಣದ ಉನ್ನತ-ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನಕ್ಕೆ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು ಅನುಮತಿಸುವ ಅತಿ-ಕಡಿಮೆ ಲೇಟೆನ್ಸಿ ಸಂಪರ್ಕಗಳನ್ನು ಶಕ್ತಿಯುತಗೊಳಿಸುವುದರ ಜೊತೆಗೆ (ಜನನಿಬಿಡ ಪ್ರದೇಶಗಳಲ್ಲಿಯೂ ಸಹ), ಐದನೇ ತಲೆಮಾರಿನ ಅಥವಾ 5G ಇ-ಆರೋಗ್ಯದಂತಹ ಪರಿಹಾರಗಳನ್ನು ಸಕ್ರಿಯಗೊಳಿಸುತ್ತದೆ. ಸಂಪರ್ಕಿತ ವಾಹನಗಳು, ಹೆಚ್ಚು ತಲ್ಲೀನಗೊಳಿಸುವ ವರ್ಧಿತ ರಿಯಾಲಿಟಿ ಮತ್ತು ಮೆಟಾವರ್ಸ್ ಅನುಭವಗಳು, ಜೀವ ಉಳಿಸುವ ಬಳಕೆಯ ಪ್ರಕರಣಗಳು ಮತ್ತು ಇತರವುಗಳಲ್ಲಿ ಮುಂದುವರಿದ ಮೊಬೈಲ್ ಕ್ಲೌಡ್ ಗೇಮಿಂಗ್ ಕೂಡಾ 5ಜಿಯಿಂದ ಸಾಧ್ಯವಿದೆ.
700 MHz ಬ್ಯಾಂಡ್‌ಗೆ ಬಿಡ್
2016 ಮತ್ತು 2021ರಲ್ಲಿ ನಡೆದಿದ್ದ ಹರಾಜಿನಲ್ಲಿ ಯಾವುದೇ ಸಂಸ್ಥೆಯು 700 MHz ಬ್ಯಾಂಡ್‌ಗೆ ಬಿಡ್ ಮಾಡಿರಲಿಲ್ಲ. ಆದರೆ ಈ ಹರಾಜಿನಲ್ಲಿ 700 MHz ಬ್ಯಾಂಡ್‌ಗೂ ಬಿಡ್ ನಡೆದಿದೆ. 700 MHz ಬ್ಯಾಂಡ್‌ಗೆ 39,270 ಕೋಟಿ ರೂಪಾಯಿ ಬಿಡ್ಡಿಂಗ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಪ್ರಮುಖವಾಗಿ ಮಧ್ಯಮ ಹಾಗೂ ಅಧಿಕ ಸ್ಪೀಡ್ ಬ್ಯಾಂಡ್‌ಗೆ ಬಿಡ್ ಮಾಡಿದೆ. ಈಗಿನ ತಮ್ಮ ನೆಟ್‌ವರ್ಕ್‌ಗಿಂತ ಹತ್ತು ಪಟ್ಟು ಅಧಿಕ ಸ್ಪೀಡ್ ನೆಟ್‌ವರ್ಕ್ ಸೇವೆ ನೀಡುವ ಗುರಿಯನ್ನು ಈ ಮೂರು ಸಂಸ್ಥೆಗಳು ಹೊಂದಿದೆ. ಈ ನಡುವೆ ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ನೀಡಿರುವ ಸಂಸ್ಥೆಯಾದ ಅದಾನಿ ಡೇಟಾ ನೆಟ್‌ವರ್ಕ್ ಕೇವಲ ಅಧಿಕ ಸ್ಪೀಡ್‌ಗೆಬಿಡ್ ಮಾಡುವ ಸಾಧ್ಯತೆ ಇದೆ ಎಂದು ವರದಿಯು ಉಲ್ಲೇಖ ಮಾಡಿದೆ. ಜಿಯೋ 700 Mhz ಗೆ ಬಿಡ್ ಮಾಡಿರುವುದಾಗಿ ಈಗಾಗಲೇ ಹೇಳಿಕೊಂಡಿದೆ. ಒಟ್ಟಾರೆಯಾಗಿ ಸ್ಥಿತಿಯನ್ನು ನೋಡಿದಾಗ ಜಿಯೋ ಬಿಡ್ ನಲ್ಲಿ ಮುಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications