ಡಿಸ್ಕೌಂಟ್ ಬ್ರೋಕರ್ 5paisa.comನಿಂದ ಉಚಿತ ಆಪ್ಲಿಕೇಷನ್ ಆರಂಭಿಸಲಾಗಿದೆ. ಸುರಕ್ಷಿತ ಹೂಡಿಕೆ ಮತ್ತು ಯಶಸ್ವಿ ಸಂಪತ್ತು ಸೃಷ್ಟಿಗೆ ಹೂಡಿಕೆದಾರರಿಗೆ ಈ ಮೂಲಕ ನೆರವಾಗುವುದು ಉದ್ದೇಶ ಎಂದು ಸೋಮವಾರ ತಿಳಿಸಲಾಗಿದೆ. 5paisa ಸ್ಕೂಲ್ ನಿಂದ ಯುವ ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡೇ ಕಲಿಕೆ ಮಾದರಿಯನ್ನು ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.
5paisa.com ಎಂಬುದು ದೇಶದಲ್ಲಿನ ಏಕೈಕ್ ಲಿಸ್ಟೆಡ್ ಡಿಸ್ಕೌಂಟ್ ಬ್ರೋಕರೇಜ್ ಹೌಸ್. ಇದಕ್ಕೆ 7 ಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರಿದ್ದಾರೆ. ಶೂನ್ಯ ಬ್ರೋಕರೇಜ್ ನಲ್ಲಿ ಈಕ್ವಿಟಿ ಹೂಡಿಕೆಗೆ ಇದು ಅವಕಾಶ ಮಾಡಿಕೊಡುತ್ತದೆ. ಇದರ ಪ್ಲಾಟ್ ಫಾರ್ಮ್ ನಲ್ಲಿ ಮ್ಯೂಚುವಲ್ ಫಂಡ್ಸ್, ಇನ್ಷೂರೆನ್ಸ್, ಸಾಲ ಮತ್ತಿತರ ವ್ಯವಹಾರಗಳೂ ಇವೆ.
5paisa ಸ್ಕೂಲ್ ಉಚಿತ ಅಪ್ಲಿಕೇಷನ್
ಸರಿಯಾದ ಮಾರ್ಗದರ್ಶನ ಹಾಗೂ ಜ್ಞಾನ ಇಲ್ಲದೆ ಹಲವು ಯುವಜನರು ಮತ್ತು ಹೊಸ ಹೂಡಿಕೆದಾರರು ಈಕ್ವಿಟಿಯಲ್ಲಿ ಹಣ ಕಳೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. 5paisa ಸ್ಕೂಲ್ ಉಚಿತ ಅಪ್ಲಿಕೇಷನ್. ಎರಡು ಹಂತದ ಪ್ರಕ್ರಿಯೆ ಮೂಲಕ ಇದನ್ನು ಯಾರೂ ಬೇಕಾದರೂ ಬಳಸಬಹುದು ಎಂದು 5paisa.com ಸಿಇಒ ಪ್ರಕಾಶ್ ಗಗ್ದಾನಿ ತಿಳಿಸಿದ್ದಾರೆ.
ಹೂಡಿಕೆದಾರರಿಗೆ ಶಿಕ್ಷಣ ಅಗತ್ಯ
ಹತ್ತಾರು ಲಕ್ಷ ಹೊಸ ಹೂಡಿಕೆದಾರರು ಪ್ರತಿ ತಿಂಗಳು ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದನ್ನು ನೋಡುತ್ತಿದ್ದೇವೆ. ಹೂಡಿಕೆದಾರರ ಶಿಕ್ಷಣ ಈಗ ಬಹಳ ಅಗತ್ಯವಾಗಿದೆ. ತಂತ್ರಜ್ಞಾನದ ಬೆಳವಣಿಗೆ, ಇಂಟರ್ ನೆಟ್ ಸಂಪರ್ಕ್ ಹಾಗೂ ಉತ್ತಮ ಗುಣಮಟ್ಟ ಹಾಗೂ ಕೈಗೆಟುಕುವ ಪ್ಲಾಟ್ ಫಾರ್ಮ್ ಗಳ ಕಾರಣಕ್ಕೆ ಈಕ್ವಿಟಿಯಲ್ಲಿ ಹೂಡಿಕೆ ಮಾಡುವವರು ಹೆಚ್ಚಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಲಿಕೆ ಪ್ರಕ್ರಿಯೆ ಖುಷಿಯ ಸಂಗತಿ ಆಗಬೇಕು
5paisa ಸ್ಕೂಲ್ ಇದೇ ಕ್ಷೇತ್ರದಲ್ಲಿನ ತಜ್ಞರ ಜತೆ ಒಟ್ಟಾಗಿದ್ದು, ವೆಬಿನಾರ್ ಗಳ ನೇರ ಪ್ರಸಾರ ಮಾಡಲಿದೆ. ಮೇಲ್ ಸ್ತರದ ಟ್ರೇಡಿಂಗ್ ತಂತ್ರಗಳನ್ನು ಕಲಿಯಲು ಸಹಾಯ ಮಾಡಲಿದೆ. ಮಾಹಿತಿಯು ವಿಡಿಯೋ ಮತ್ತು ಟೆಕ್ಸ್ಟ್ ಎರಡರಲ್ಲೂ ಸಿಗಲಿವೆ. ಒಟ್ಟಾರೆ ಕಲಿಕೆ ಪ್ರಕ್ರಿಯೆ ಖುಷಿಯ ಸಂಗತಿ ಆಗಿರಬೇಕು ಎಂಬುದು 5paisa ಸ್ಕೂಲ್ ಉದ್ದೇಶ ಎಂದು ತಿಳಿಸಲಾಗಿದೆ.
5paisa ಸ್ಕೂಲ್ ನಿಂದ ಸರ್ಟಿಫಿಕೇಟ್
ಅಂದ ಹಾಗೆ, 5paisa ಸ್ಕೂಲ್ ನಿಂದ ಸರ್ಟಿಫಿಕೇಟ್ ಗಳನ್ನು ಸಹ ನೀಡಲಾಗುತ್ತದೆ. ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಹಲವು ಮಾದರಿಗಳನ್ನು ರೂಪಿಸಲಾಗಿದ್ದು, ಕೆಲವು ವಿಷಯಗಳ ಬಗ್ಗೆಯಂತೂ ಒಂದೇ ನಿಮಿಷದ ಓದಿನಿಂದ ಆ ಬಗ್ಗೆ ಪೂರ್ತಿ ತಿಳಿದುಕೊಳ್ಳಬಹುದಾಗಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.


Click it and Unblock the Notifications