ಭಾರತ ದೇಶದಲ್ಲಿ ನಡೆಯುತ್ತಿರುವ ಅತ್ಯಂತ ವ್ಯಾಪಕ ಕೋವಿಡ್-19 ಲಸಿಕಾಕರಣದ ಕಾರಣದಿಂದ ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿದ್ದು, ದೇಶದ ಸಮಗ್ರ ಆರ್ಥಿಕ ಪರಿಸ್ಥಿತಿ ಮತ್ತೆ ಹಳಿಗೆ ಬರುತ್ತಿದೆ. ಹೋಟೆಲ್ ಉದ್ಯಮವೂ ಈಗ ಸಾಕಷ್ಟು ಚೇತರಿಸಿಕೊಳ್ಳುತ್ತಿದ್ದು, ಹೋಟೆಲ್ ವಲಯದ ಕೆಲವೊಂದು ಷೇರುಗಳು ಮಾರುಕಟ್ಟೆಗಿಂತಲೂ ಹೆಚ್ಚು ಬೆಳವಣಿಗೆ ದಾಖಲಿಸುತ್ತಿವೆ. ಹಬ್ಬದ ಸೀಸನ್ ಕೂಡ ಆರಂಭವಾಗುತ್ತಿದ್ದು, ಈ ಮಧ್ಯೆ ಲಸಿಕಾರಣದಿಂದ ಹೋಟೆಲ್ ಉದ್ಯಮ ಅತಿ ಹೆಚ್ಚು ಚೇತರಿಕೆ ಹೊಂದಲಿದೆ ಎಂದು ನಂಬಲಾಗಿದೆ. ಲಾಕ್ ಡೌನ್‌ಗಳು ಸಹ ಎಲ್ಲೆಡೆ ತೆರವಾಗುತ್ತಿದ್ದು, ಇದೂ ಸಹ ಹೋಟೆಲ್ ಉದ್ಯಮದ ಬೆಳವಣಿಗೆಗೆ ಕಾರಣವಾಗಲಿದೆ. ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಳವಣಿಗೆ ದಾಖಲಿಸುತ್ತಿರುವ ಪ್ರಮುಖ ಹೋಟೆಲ್ ಉದ್ಯಮದ ಷೇರುಗಳು ಇಲ್ಲಿವೆ.
ಇಂಡಿಯನ್ ಹೋಟೆಲ್ಸ್ (Indian Hotels)
ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ ಇದು- ಹೋಟೆಲುಗಳು, ರೆಸಾರ್ಟ್‌ಗಳು, ಜಂಗಲ್ ಸಫಾರಿ, ಅರಮನೆಗಳು, ಸ್ಪಾಗಳು ಹಾಗೂ ವಿಮಾನದೊಳಗೆ ಆಹಾರ ಸರಬರಾಜು ಹೀಗೆ ಹಲವಾರು ವಿಭಿನ್ನ ಶ್ರೇಣಿಯ ಹೋಟೆಲ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ.
ಕಳೆದ 16 ವರ್ಷಗಳಲ್ಲಿ ಕೇವಲ ಶೇಕಡಾ 2.88 ರಷ್ಟು ಸೆಷನ್ ಗಳಲ್ಲಿ ಮಾತ್ರ ಈ ಷೇರಿಗೆ ಶೇ 5 ಕ್ಕಿಂತ ಹೆಚ್ಚು ಇಂಟ್ರಾಡೇ ಲಾಭ ಸಿಕ್ಕಿದೆ. ನಿಫ್ಟಿ ಮಿಡ್ ಕ್ಯಾಪ್ -100 ಸೂಚ್ಯಂಕದ ಪ್ರತಿಫಲ ಶೇ 87.94 ಕ್ಕೆ ಹೋಲಿಸಿದರೆ ಕಂಪನಿಯ ಷೇರುಗಳು ಕಳೆದ ಮೂರು ವರ್ಷಗಳಲ್ಲಿ ಶೇ 61.31 ರಷ್ಟು ಪ್ರತಿಫಲ ನೀಡಿವೆ. 1902 ರಲ್ಲಿ ಆರಂಭವಾದ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ ಪ್ರವಾಸ ಹಾಗೂ ಹೋಟೆಲ್ ಉದ್ಯಮದ ಮಿಡ್ ಕ್ಯಾಪ್ ಕಂಪನಿಯಾಗಿದ್ದು, 24,671.17 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ.
ಚಲೆಟ್ ಹೋಟೆಲ್ಸ್ (Chalet Hotels)
ಆಸ್ತಿಗಳ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ನೋಡುವುದಾದರೆ ಚಲೆಟ್ ಹೋಟೆಲ್ಸ್ ಲಿಮಿಟೆಡ್ ಹೋಟೆಲ್ ಉದ್ಯಮ್ ಅಗ್ರಗಣ್ಯನಾಗಿದೆ. ಕಂಪನಿಯ ಹೋಟೆಲ್ ವಿಭಾಗವು 7 ಕಾರ್ಯನಿರತ ಹೋಟೆಲ್‌ಗಳು ಮತ್ತು ಒಂದು ಸರ್ವಿಸ್ಡ್ ಅಪಾರ್ಟಮೆಂಟ್ಗಳನ್ನು ಹೊಂದಿದೆ. ಇವೆಲ್ಲವೂ ದೇಶದ ಬೃಹತ್ ನಗರಗಳಾದ ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಪುಣೆ ನಗರಗಳಲ್ಲಿ ಚಾಲನೆಯಲ್ಲಿದ್ದು, ಒಟ್ಟಾರೆಯಾಗಿ 2,554 ಕೋಣೆಗಳನ್ನು ಹೊಂದಿವೆ.
1986 ರಲ್ಲಿ ಸ್ಥಾಪನೆಯಾದ ಚಲೆಟ್ ಹೋಟೆಲ್ಸ್ ಲಿಮಿಟೆಡ್, ಹೋಟೆಲ್ ಹಾಗೂ ಪ್ರವಾಸೋದ್ಯಮ ವಲಯದ 4,884.69 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿರುವ ಮಿಡ್ ಕ್ಯಾಪ್ ಕಂಪನಿಯಾಗಿದೆ. ಜೂನ್ 30, 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 75.28 ಕೋಟಿ ರೂಪಾಯಿ ಲಾಭ ಗಳಿಸಿದೆ. ವರ್ಷದಿಂದ ವರ್ಷದ ಬೆಳವಣಿಗೆ ಶೇ 27.71 ಆಗಿದ್ದರೂ ತ್ರೈಮಾಸಿಕದಿಂದ ತ್ರೈಮಾಸಿಕದ ವರಮಾನ -26.26 ಪ್ರತಿಶತದಷ್ಟು ಕುಸಿದಿದೆ. ಮಾರ್ಚ್ 31, 2021 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯು ತನ್ನ ಒಟ್ಟು ಕಾರ್ಯಲಾಭದಲ್ಲಿನ ಶೇ 51.63 ರಷ್ಟನ್ನು ಬಡ್ಡಿ ಪಾವತಿಗೆ ಹಾಗೂ ಶೇ 30.8 ರಷ್ಟನ್ನು ಕಾರ್ಮಿಕ ವೆಚ್ಚಗಳಿಗಾಗಿ ಬಳಸಿದೆ.
ಬೈಕ್ ಹಾಸ್ಪಿಟ್ಯಾಲಿಟಿ (Byke Hospitality)
ಕಳೆದ ಐದು ವರ್ಷಗಳಲ್ಲಿ ಕಂಪನಿಯ ROE ನಿರಂತರವಾಗಿ ಕುಸಿಯುತ್ತಿದೆ. ಕಳೆದ ವರ್ಷ ಲಾಭದ ಬಹುತೇಕ ಭಾಗವನ್ನು ಷೇರುದಾರರಿಗೆ ಡಿವಿಡೆಂಡ್ ರೂಪದಲ್ಲಿ ನೀಡಲಾಯಿತು. ನಿಫ್ಟಿ ಸ್ಮಾಲ್ ಕ್ಯಾಪ್ -100 ಸೂಚ್ಯಂಕದ ಶೇ 86.43 ಪ್ರತಿಫಲಕ್ಕೆ ಹೋಲಿಸಿದರೆ ಕಂಪನಿಯ ಷೇರುಗಳು ಕಳೆದ ಮೂರು ವರ್ಷಗಳಲ್ಲಿ ಶೇ -50.3 ಪ್ರತಿಫಲ ನೀಡಿವೆ. 1990ರಲ್ಲಿ ಆರಂಭವಾದ ಬೈಕ್ ಹಾಸ್ಪಿಟ್ಯಾಲಿಟಿ ಲಿಮಿಟೆಡ್ ಹೋಟೆಲ್ ಮತ್ತು ಪ್ರವಾಸೋದ್ಯಮ ವಲಯದಲ್ಲಿನ ಸ್ಮಾಲ್ ಕ್ಯಾಪ್ ಕಂಪನಿಯಾಗಿದ್ದು, 148.56 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ.
ಮ್ಯಾಕ್ ಚಾರ್ಲ್ಸ್ (ಇಂಡಿಯಾ) ಲಿಮಿಟೆಡ್ Mac Charles (India) Limited
ಮಾರ್ಚ್ 31, 2021 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆಗಳಿಂದ ಬಂದ ಒಟ್ಟು ಲಾಭದ ಶೇ 37.4 ರಷ್ಟನ್ನು ಬಡ್ಡಿ ಪಾವತಿಗೆ ಹಾಗೂ ಶೇ 10.16 ರಷ್ಟನ್ನು ವೇತನ ಪಾವತಿಗೆ ಕಂಪನಿಯು ವಿನಿಯೋಗಿಸಿದೆ. ನಿಫ್ಟಿ ಸ್ಮಾಲ್ ಕ್ಯಾಪ್ -100 ಸೂಚ್ಯಂಕದ ಶೇ 86.43 ಪ್ರತಿಫಲಕ್ಕೆ ಹೋಲಿಸಿದರೆ ಕಂಪನಿಯ ಷೇರುಗಳು ಶೇ 47.57 ರಷ್ಟು ಪ್ರತಿಫಲ ನೀಡಿವೆ. ಜೂನ್ 30, 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 7.8 ಕೋಟಿ ರೂಪಾಯಿ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಶೇ 21.91 ರಷ್ಟು ಬೆಳವಣಿಗೆ ಸಾಧಿಸಿದ್ದರೂ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಲಾಭ ಶೇ -24.61 ರಷ್ಟು ಕುಸಿದಿದೆ.
1979 ರಲ್ಲಿ ಆರಂಭವಾದ ಮ್ಯಾಕ್ ಚಾರ್ಲ್ಸ್ ಇಂಡಿಯಾ ಲಿಮಿಟೆಡ್ ಹೋಟೆಲ್ ಹಾಗೂ ಪ್ರವಾಸೋದ್ಯಮ ವಲಯದ ಸಣ್ಣ ಕಂಪನಿಯಾಗಿದ್ದು, 605.33 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ.
ಇಐ ಹೋಟೆಲ್ಸ್ (EI Hotels)
ಕಳೆದ 16 ವರ್ಷಗಳಲ್ಲಿ ಕೇವಲ ಶೇ 2.5 ರಷ್ಟು ಸೆಷನ್ಗಳಲ್ಲಿ ಈ ಕಂಪನಿಯ ಷೇರು ಬೆಲೆ ಇಂಟ್ರಾಡೇನಲ್ಲಿ ಶೇ 5 ಕ್ಕಿಂತ ಹೆಚ್ಚು ಇಳಿಕೆಯಾಗಿದೆ. ನಿಫ್ಟಿ ಮಿಡ್ ಕ್ಯಾಪ್ -100 ಸೂಚ್ಯಂಕದ ಶೇ 87.94 ಕ್ಕೆ ಹೋಲಿಸಿದರೆ ಕಂಪನಿಯ ಷೇರುಗಳು ಕಳೆದ ಮೂರು ವರ್ಷಗಳಲ್ಲಿ ಶೇ -11.68 ರಷ್ಟು ಪ್ರತಿಫಲ ನೀಡಿವೆ. ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಗೆ 113.23 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಇತ್ತೀಚಿನ ವಿಶ್ಲೇಷಣೆಯ ಪ್ರಕಾರ ಐಸಿಐಸಿಐ ಡೈರೆಕ್ಟ್ ಈ ಕಂಪನಿಯ ಷೇರುಗಳನ್ನು ಕೊಳ್ಳುವಂತೆ ಶಿಫಾರಸು ಮಾಡಿದೆ.
ಇಂಡಿಯಾ ಟೂರಿಸಂ ಡೆವಲಪಮೆಂಟ್ ಕಾರ್ಪೊರೇಷನ್ (India Tourism Development Corporation Ltd)
1965 ರಲ್ಲಿ ಆರಂಭವಾದ ಇಂಡಿಯಾ ಟೂರಿಸಂ ಡೆವಲಪಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಇದೊಂದು ಮಿಡ್ ಕ್ಯಾಪ್ ಕಂಪನಿಯಾಗಿದ್ದು, 3,361.30 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ. ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕದ ಶೇ 86.43 ಗೆ ಹೋಲಿಸಿದರೆ ಕಂಪನಿಯ ಷೇರುಗಳು ಶೇ 42.12 ರಷ್ಟು ಪ್ರತಿಫಲ ನೀಡಿವೆ. ಜೂನ್ 30, 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು 47.31 ಕೋಟಿ ರೂಪಾಯಿ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಬೆಳವಣಿಗೆಯು ಶೇ 48.31 ರಷ್ಟಿದ್ದರೂ, ತ್ರೈಮಾಸಿಕ ಬೆಳವಣಿಗೆ ಶೇ -43.54 ರಷ್ಟು ಕುಸಿತ ದಾಖಲಿಸಿದೆ.
ಹಾಸ್ಪಿಟಾಲಿಟಿ ವಲಯದ ಉತ್ತಮ ಪ್ರದರ್ಶನ ನೀಡುತ್ತಿರುವ ಷೇರುಗಳು
| ಹೋಟೆಲ್ ಕಂಪನಿ | ಮೌಲ್ಯ ರೂ.ಗಳಲ್ಲಿ | ಮಾರುಕಟ್ಟೆ ಬಂಡವಾಳ ರೂ.ಗಳಲ್ಲಿ | 1 ವರ್ಷದ ಪ್ರತಿಫಲ |
| ಇಂಡಿಯನ್ ಹೋಟೆಲ್ಸ್ | 207,70 | 24.70 TCr | 113.24% |
| ಚಲೆಟ್ | 241,65 | 4.95 TCr | 74.48% |
| ಬೈಕ್ ಹಾಸ್ಪಿಟಾಲಿಟಿ | 37,05 | 148.56 Cr | 177.53% |
| ಮ್ಯಾಕ್ ಚಾರ್ಲ್ಸ್ | 462,05 | 605.33 Cr | 95.87% |
| ಇಐ ಹೊಟೇಲ್ಸ್ | 142,75 | 8.93 TCr | 85.03% |
| ಐಟಿಡಿಸಿ | 393,80 | 3.38 TCr | 75.45% |


Click it and Unblock the Notifications