For Quick Alerts
ALLOW NOTIFICATIONS  
For Daily Alerts

ಒಂದು ವಾರದಲ್ಲಿ ಈ 6 ಮೌಲ್ಯಯುತ ಕಂಪೆನಿಗಳ ಬಂಡವಾಳ 1.38 ಲಕ್ಷ ಕೋಟಿ ಉಡೀಸ್

|

ಭಾರತದ ಹತ್ತು ಮೌಲ್ಯಯುತ ಕಂಪೆನಿಗಳ ಪೈಕಿ 6ರ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯವು ಕಳೆದ ವಾರ (ಜುಲೈ 27ರಿಂದ 31, 2020) 1,38,839.83 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಬ್ಯಾಂಕ್ ಅತಿ ಹೆಚ್ಚು ಬಂಡವಾಳ ನಷ್ಟ ಅನುಭವಿಸಿದ ಕಂಪೆನಿಗಳು. ಕಳೆದ ವಾರ ಸೆನ್ಸೆಕ್ಸ್ 522.01 ಪಾಯಿಂಟ್ ನಷ್ಟ ಕಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾರುಕಟ್ಟೆ ಮೌಲ್ಯವು 50,239.78 ಕೋಟಿ ರು. ನಷ್ಟ ಕಂಡಿದ್ದರೆ, ಎಚ್ ಡಿಎಫ್ ಸಿ ಬ್ಯಾಂಕ್ 46,374.63 ಕೋಟಿ ರುಪಾಯಿ ಬಂಡವಾಳ ಮೌಲ್ಯ ಇಳಿಕೆ ಆಗಿದೆ. ಇನ್ನು ಐಸಿಐಸಿಐ ಬ್ಯಾಂಕ್ 22,631.74 ಕೋಟಿ, ಎಚ್ ಡಿಎಫ್ ಸಿ 10,078.06 ಕೋಟಿ ರುಪಾಯಿ ಕುಗ್ಗಿದೆ.

ಈ 10 ಕಂಪೆನಿ 4 ತಿಂಗಳಲ್ಲಿ ಸೃಷ್ಟಿಸಿರುವ ಸಂಪತ್ತು 140 ದೇಶದ ಜಿಡಿಪಿಗಿಂತ ಹೆಚ್ಚುಈ 10 ಕಂಪೆನಿ 4 ತಿಂಗಳಲ್ಲಿ ಸೃಷ್ಟಿಸಿರುವ ಸಂಪತ್ತು 140 ದೇಶದ ಜಿಡಿಪಿಗಿಂತ ಹೆಚ್ಚು

ಐಟಿಸಿ ಮೌಲ್ಯ 6,815.12 ಕೋಟಿ ರುಪಾಯಿ ಇಳಿದಿದ್ದರೆ, ಭಾರ್ತಿ ಏರ್ ಟೆಲ್ 2700.5 ಕೋಟಿ ಕಡಿಮೆ ಆಗಿದೆ. ಆದರೆ ಮಾಹಿತಿ ತಂತ್ರಜ್ಞಾನ (ಐ.ಟಿ.) ಕಂಪೆನಿಗಳಾದ ಟಿಸಿಎಸ್ ಬಂಡವಾಳ 47,054.91 ಕೋಟಿ, ಇನ್ಫೋಸಿಸ್ 18,591.83 ಕೋಟಿ, ಕೊಟಕ್ ಮಹೀಂದ್ರಾ 3481.72 ಕೋಟಿ ಹಾಗೂ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 740.11 ಕೋಟಿ ಬಂಡವಾಳ ಮೌಲ್ಯ ಹೆಚ್ಚಾಗಿದೆ.

ವಾರದಲ್ಲಿ ಈ 6 ಮೌಲ್ಯಯುತ ಕಂಪೆನಿಗಳ ಬಂಡವಾಳ 1.38 ಲಕ್ಷ ಕೋಟಿ ಉಡೀಸ್

ಷೇರು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ರಿಲಯನ್ಸ್ ಮೊದಲ ಸ್ಥಾನದಲ್ಲಿದೆ. ಆ ನಂತರದ ಸ್ಥಾನಗಳಲ್ಲಿ ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯುನಿಲಿವರ್, ಎಚ್ ಡಿಎಫ್ ಸಿ, ಭಾರ್ತಿ ಏರ್ ಟೆಲ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಟಿಸಿ ಹಾಗೂ ಐಸಿಐಸಿಐ ಬ್ಯಾಂಕ್ ಇವೆ.

English summary

6 Out 10 Most Valued Stock Lose 1.38 Lakh Crore Market Capitalisation In Share Market

Last week 6 out of 10 most valued stock lose 1.38 lakh crore market capitalisation, lead by Reliance Industries and HDFC Bank.
Story first published: Sunday, August 2, 2020, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X