ಬೆಂಗಳೂರು, ಮಾರ್ಚ್ 24: ನಾವು ಹೂಡಿಕೆ ಮಾಡಿರುವ ಹಣ ಸೇಫ್ ಆಗಿರಬೇಕು, ಸರ್ಕಾರದ ಗ್ಯಾರಂಟಿ ಇರಬೇಕು, ತಿಂಗಳಾನುಸಾರ ನಮಗೆ ಅದ್ರಿಂದ ಲಾಭಾಂಶ ಬರಬೇಕು, ಮತ್ತು ನಮ್ಮ ಆಯ್ಕೆ ಬಹಳ ಸೇಫ್ ಆಗಿರಬೇಕು ಅನ್ನೋರ ಮೊದಲ ಆಯ್ಕೆ ಅಂದರೆ ಅದು ಫಿಕ್ಸೆಡ್ ಡೆಪಾಸಿಟ್‌ಗಳು. ಅದರಲ್ಲೂ ಹಿರಿಯ ನಾಕರೀಕರು ಶೇಖಡ 99 ರಷ್ಟು ಅವಲಂಬಿತರಾಗೋದು ಇದ್ರ ಮೇಲೆ.
ಇದು ಸೇಫ್ ಹೌದು. ಆದ್ರೆ ಕೆಲವೊಮ್ಮೆ ಹೆಚ್ಚು ಲಾಭ ಗಳಿಸುವ ಸಾಧ್ಯತೆಗಳಿದ್ದಾಗಲೂ ಎಫ್ಡಿಗಳು ನಿಮಗೆ ಆ ಅವಕಾಶವನ್ನ ತಪ್ಪಿಸಿಬಿಡುತ್ತವೆ.ಅದಕ್ಕೆ ಕಾರಣ ಹಣದುಬ್ಬರ. ಯಾಕಂದ್ರೆ ಎಫ್ಡಿ ಪದ್ದತಿಯಲ್ಲಿ ಪ್ರತಿ ವರ್ಷ ಹಣದುಬ್ಬರವನ್ನ ಪರಿಗಣಿಸಿ ನಿಮ್ಮ ಬಡ್ಡಿ ಮೊತ್ತ ನಿರ್ಧರಿಸಲಾಗುವುದಿಲ್ಲ. ಪೂರ್ವ ನಿಗಧಿತ ಬಡ್ಡಿ ದರಕ್ಕೆ ಪೂರ್ಣ ಅವಧಿಗೆ ಮಾತ್ರ ಬಡ್ಡಿ ಲೆಕ್ಕ ಹಾಕಲಾಗುತ್ತದೆ.

ಉದಾಹರಣೆಗೆ ನೀವು 20 ವರ್ಷಕ್ಕೆ ಎಫ್ಡಿ ಮಾಡಿದ್ದರೆ ಈ ಹಣದುಬ್ಬರ ನಿಮ್ಮ ಆದಾಯದ 60 ಪ್ರತಿಶತದಷ್ಟು ಭಾಗವನ್ನ ಕುಂಠಿತ ಮಾಡಿಬಿಡುತ್ತದೆ.ಹಾಗಾಗಿ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಂತಹ ಹೂಡಿಕೆಗಳಲ್ಲಿ ಕೂಡ ಗಮನಹರಿಸಬೇಕಾದ ಅವಶ್ಯಕತೆಯಿದೆ..6 ಪರ್ಸೆಂಟ್ ವಾರ್ಷಿಕ ಬಡ್ಡಿ ದರದಲ್ಲಿ ರೂ 1 ಕೋಟಿ ರೂ ಎಫ್ಡಿ ಮಾಡ್ತೀರಾ ಎಂದುಕೊಳ್ಳೋಣ. ಮೊದಲಿಗೆ ನೀವು ಲಾಭದಲ್ಲಿರುವಂತೆಯೇ ತೋರುತ್ತದೆ . ಆದರೆ ವಾರ್ಷಿಕ ಹಣದುಬ್ಬರ ದರವನ್ನು ಐದು ಪ್ರತಿಶತದವರೆಗೆ ಪರಿಗಣಿಸಿದಾಗ, ನಿಮಗೆ ರಿಯಾಲಿಟಿ ತೆರೆದುಕೊಳ್ಳುತ್ತದೆ.
ಮೊದಲ ವರ್ಷದ ಕೊನೆಯಲ್ಲಿ, ನಿಮ್ಮ FD ಹೂಡಿಕೆ 1.06 ಕೋಟಿ ರೂ.ಗಳಷ್ಟು ಬೆಳೆಯಬೇಕು. ಆದರೆ ಹಣದುಬ್ಬರಕ್ಕೆ ಸರಿಹೊಂದಿಸಿದಾಗ, ಅಂದಾಜು 1.01 ಕೋಟಿ ರೂ ಗಾತ್ರಕ್ಕೆ ಮಾತ್ರ ಬೆಳೆದಿರುತ್ತೆ. ಇದು ನೀವು ಇಟ್ಟ ಠೇವಣಿಗೆ ನಿಮಗೆ ಸಿಗುವ ಕನಿಷ್ಟ ಲಾಭ ಅಷ್ಟೆ.ಅದೇ ರೀತಿ 10 ನೇ ವರ್ಷದ ಹೊತ್ತಿಗೆ, ನಿಮ್ಮ ಹಣದುಬ್ಬರ ಪೂರ್ವದ ಆದಾಯ ರೂ 1.79 ಕೋಟಿಯಾಗಿರುತ್ತದೆ, ಆದರೆ ಹಣದುಬ್ಬರದ ನಂತರ ಅದು ಕೇವಲ 1.10 ಕೋಟಿಯಾಗಿರುತ್ತದೆ. ಅಲ್ಲಿಗೆ ಹಣದುಬ್ಬರ ಫಿಕ್ಸೆಡ್ ಡೆಪಾಸಿಟ್ ನ ಲಾಭದ ಮೇಲೆ ಎಂಥಾ ಪರಿಣಾಮ ಬೀರುತ್ತದೆ ಯೋಚಿಸಿ ನೋಡಿ. ಲೆಕ್ಕಾಚಾರದ ಪ್ರಕಾರ ಶೇಕಡಾ 60ರಷ್ಟು.
ಹಿರಿಯ ನಾಗರಿಕರು ಹಣದುಬ್ಬರದ ಬಲಿಪಶುಗಳಾಗದಿರಿ!
ಸೇಫ್ ಮತ್ತು ಸೆಕ್ಯೂರ್ ಎಂಬ ಒಂದೇ ಒಂದು ಕಾರಣಕ್ಕೆ ಹಿರಿಯ ನಾಗರೀಕರು ಇಷ್ಟು ದೊಡ್ಡ ಪ್ರಮಾಣದ ರಾಜಿ ಮಾಡಿಕೊಳ್ಳುವುದು ಸೂಕ್ತವಲ್ಲ. ವರ್ಷಗಳು ಕಳೆದ ಹಾಗೇ, ಹಣ ದುಬ್ಬರ ಹೆಚ್ಚಾದಂತೆಲ್ಲಾ , ನೀವು ನಷ್ಟದಲ್ಲಿರುತ್ತೀರಿ ಮಾತ್ರವಲ್ಲದೇ , ನಿಮಗೆ ಸಿಗುವ ಬಡ್ಡಿ ದೈನಂದಿನ ಜೀವನ ಮತ್ತು ಆರೋಗ್ಯವೆಚ್ಚಗಳಿಗೂ ಸರಿಹೊಂದದೇ ಇರಬಹುದು - ಜಾಗ್ರತೆ !
ಹಾಗಿದ್ರೆ ಹಿರಿಯ ನಾಗರಿಕರು ಏನು ಮಾಡಬೇಕು?
ಹಣದುಬ್ಬರದಿಂದಾಗಿ ನಿಮಗೆ ಆಗುವ ನಷ್ಟವನ್ನ ತಡೆಯಬೇಕು ಅಂದ್ರೆ ಕೇವಲ ಎಫ್ಡಿ ಮೇಲೆ ಮಾತ್ರ ಅವಲಂಬಿತರಾಗದೇ ಮ್ಯೂಚುಯಲ್ ಫಂಡ್‌ಗಳು, ಷೇರುಗಳು, ಆರ್‌ಇಐಟಿಗಳು, ಚಿನ್ನ ಮತ್ತು ಬಾಂಡ್‌ಗಳಂತಹ ಸ್ವತ್ತುಗಳ ಹೂಡಿಕೆ ಮಾಡಬೇಕು, ಇದು ಎಫ್ಡಿಗಳಿಗೆ ಹೋಲಿಸಿದರೆ ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ.
ಮ್ಯೂಚುವಲ್ ಫಂಡ್‌ಗಳಲ್ಲಿ ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಗಳು SWP ಗಳು ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಮತ್ತು ಸ್ಥಿರ ಮೊತ್ತವನ್ನು ವ್ಯವಸ್ಥಿತವಾಗಿ ಹಿಂಪಡೆಯಲು ಉಪಯುಕ್ತಕಾರಿಯಾಗಿದೆ . ಮತ್ತೊಂದು ಹಣದುಬ್ಬರಕ್ಕೆ ಅಸಲು ಮತ್ತು ಬಡ್ಡಿ ಪಾವತಿ ದರಗಳನ್ನ ಸರಿಹೊಂದಿಸುವ ಹಣದುಬ್ಬರ ಸೂಚ್ಯಂಕ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಮುಂದಾಗಿ, ಇದರಿಂದಾಗಿ ಹಣದ ಸವೆತದಿಂದ ತಪ್ಪಿಸಿಕೊಳ್ಳಬಹುದು.ಹೀಗೆ ಅನುಭವಿ ಹಣಕಾಸು ತಜ್ಞರ ಅಭಿಪ್ರಾಯ ಪಡೆದು ನಿಮಗೆ ಹಣದುಬ್ಬರದಿಂದ ಉಂಟಾಗುವ ನಷ್ಟವನ್ನ ತಪ್ಪಿಸುವ ದಾರಿಗಳನ್ನ ಕಂಡುಕೊಂಡರೆ ನಿಮ್ಮ ಜೀವನಶೈಲಿ ಮತ್ತಷ್ಟು ಉತ್ತಮವಾಗಲಿದೆ.


Click it and Unblock the Notifications