ಬೆಂಗಳೂರು, ಸೆಪ್ಟೆಂಬರ್ 12: ಕನಸಿನ ಮನೆ ಕೊಂಡುಕೊಳ್ಳುವುದು ಒಂದು ಸವಾಲಿನ ಕೆಲಸ. ಬೆಂಗಳೂರಿನಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ನಾನಾ ಕಾರಣಗಳಿಗೆ ಬಹಳಷ್ಟು ಜನ ಪ್ಲ್ಯಾಟ್ ಖರೀದಿಯತ್ತ ಒಲವು ತೋರುತ್ತಾರೆ. ಪ್ಲ್ಯಾಟ್ ಒಟ್ಟು ಖರೀದಿ ಬೆಲೆಯ 90% ಕ್ಕಿಂತ ಹೆಚ್ಚು ಹಣವನ್ನು ಪಾವತಿಸಿದಾಗ, ಯಾವುದೇ ಬಿಲ್ಡರ್ ಮಾರಾಟದ ಒಪ್ಪಂದದಲ್ಲಿ ನಮೂದಿಸಲಾದ ಡೆಲಿವರಿ ಟೈಮ್‌ಲೈನ್ ಪ್ರಕಾರ ಮನೆ ಹಸ್ತಾಂತರಿಸಬೇಕು ಅಥವಾ ನಿಗದಿತ ಸಮಯದಲ್ಲಿ ಹಸ್ತಾಂತರ ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಮನೆ ಖರೀದಿದಾರರ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು.
ಬೆಂಗಳೂರಿನ ಖರೀದಿದಾರರೊಬ್ಬರು 2018 ರಲ್ಲಿ ಫ್ಯ್ಲಾಟ್ ಖರೀದಿಗಾಗಿ 90% ಹಣ ಪಾವತಿಸಿದ್ದರು. ಆದರೆ ನಿರ್ಮಾಣ ಹಂತದಲ್ಲಿರುವ ಫ್ಯ್ಲಾಟ್ ನ್ನು ಬಿಲ್ಡರ್ ಗಡುವಿನೊಳಗೆ ಖರೀದಿದಾರರ ಸ್ವಾಧೀನಕ್ಕೆ ನೀಡಿರಲಿಲ್ಲ, ಒಪ್ಪಿಗೆಯನ್ನು ಪಡೆದಿರಲಿಲ್ಲ. ಇದು ಇವರೊಬ್ಬರ ಸಮಸ್ಯೆಯಲ್ಲ ಇಂತಹ ಅನೇಕ ಖರೀದಿದಾರರು ಬೆಂಗಳೂರಿನಲ್ಲಿ ಬಿಲ್ಡರ್ ಗಳಿಂದ ಸಮಸ್ಯೆಯನ್ನು ಎದುರಿಸುತ್ತಿದ್ದು, ಗಡುವು ಕಳೆದು ೧-೨ ವರ್ಷವಾದರೂ ಮನೆ ಹಸ್ತಾಂತರಿಸದ ಉದಾಹರಣೆಗಳಿವೆ. ಆದರೆ ಬೆಂಗಳೂರಿನ ಖರೀದಿದಾರರು ಬಿಲ್ಡರ್ ನಿಂದ ತಮಗೆ ಆದ ಸಮಸ್ಯೆಯ ಅವರ ವಿರುದ್ದ ಕಾನೂನು ಸಮರ ಸಾರಿ 7.12 ಲಕ್ಷ ಪರಿಹಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ವಿವರ:
2018ರ ನವೆಂಬರ್ 17ರಂದು ಮನೆ ಖರೀದಿದಾರರು ಶ್ರೀರಾಮ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಡೆವಲಪ್‌ಮೆಂಟ್ ನ ' ಶ್ರೀರಾಮ್ ಬ್ಲೂ ' ನಲ್ಲಿ ಫ್ಲಾಟ್ ಅನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು. 77 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ ಮನೆ ಮಾರಾಟದ ಒಪ್ಪಂದದ ಪ್ರಕಾರ 2022ರ ಮಾರ್ಚ್ 14ರಂದು ಹಾಗೂ 6 ತಿಂಗಳ ಗ್ರೇಸ್ ಅವಧಿಯೊಂದಿಗೆ ಅಂದರೆ ಸೆಪ್ಟೆಂಬರ್ 14, 2022 ರೊಳಗೆ ಫ್ಯ್ಲಾಟ್ ವಿತರಣೆ ಮಾಡಬೇಕಿತ್ತು. ಇದಕ್ಕೆ ವಿಫಲಗೊಂಡು ಸ್ವಾಧೀನ ವಿಳಂಬವಾದ ಬಗ್ಗೆ ವಿಫಲದ ಬಗ್ಗೆಪ್ರಶ್ನಿಸಿದಾಗ 1.75 ಲಕ್ಷ ರೂ. ಪರಿಹಾರ ನೀಡಲು ಮುಂದೆ ಬಂದ ಬಿಲ್ಡರ್ ನೀಡಿದ ಆಫರ್ ನ್ನು ಅದನ್ನು ಮನೆ ಖರೀದಿದಾರರು ತಿರಸ್ಕರಿಸಿದರು. ಕೊನೆಗೆ ಗ್ರೇಸ್ ಅವಧಿ ಒಂದು ವರ್ಷದ ನಂತರ ಸೆಪ್ಟೆಂಬರ್ 22, 2023 ರಂದು ಮನೆ ಹಸ್ತಾಂತರಕ್ಕೆ ಬಿಲ್ಡರ್ ಮುಂದಾದರು.
ಫ್ಯ್ಲಾಟ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಮನೆ ಖರೀದಿದಾರರು ವಿಳಂಬ ಡೆಲಿವರಿಯ ಕಾರಣಕ್ಕಾಗಿ ಬಡ್ಡಿಯನ್ನು ಪಡೆಯಲು ಬಿಲ್ಡರ್ ವಿರುದ್ಧ ಪ್ರಕರಣವನ್ನು ದಾಖಲಿಸಲು ನಿರ್ಧರಿಸಿದರು. COVID-19 ತೊಂದರೆಗಳ ನಡುವೆಯೂ ಮನೆ ಖರೀದಿದಾರರು ಫ್ಲಾಟ್‌ನ ಪ್ರತಿ ಕಂತನ್ನು ಸಮಯಕ್ಕೆ ಪಾವತಿಸಿದ್ದಾರೆ. ಆದಾಗ್ಯೂ, ಬಿಲ್ಡರ್ COVID-19ನಿಂದ ಕಾರ್ಮಿಕರ ಕೊರತೆ ಸಹಿತ ಹಲವು ತೊಂದರೆಗಳನ್ನು ಉಲ್ಲೇಖಿಸಿ ಇದು ಫ್ಯ್ಲಾಟ್ ನಿರ್ಮಾಣವನ್ನು ವಿಳಂಬಗೊಳಿಸಿತು ಎಂದು ಬಿಲ್ಡರ್ ಆರೋಪಿಸಿದರು.ಕೋವಿಡ್-19 ಸಮಯದಲ್ಲಿ ಫ್ಯ್ಲಾಟ್ ಸಂಪೂರ್ಣ ಕಂತು ಪಡೆದ ಬಿಲ್ಡರ್, ತನ್ನ ಜವಾಬ್ದಾರಿಗಳಿಂದ ಜಾರಿಕೊಳ್ಳಲು ಯತ್ನಿಸಿದರು. ಹಸ್ತಾಂತರ ವಿಳಂಬವಾದಾಗ ಖರೀದಿದಾರ ಒಪ್ಪಿಗೆಯನ್ನೂ ಪಡೆದಿಲ್ಲ ಯಾಕೆ ಎಂದು ಮನೆ ಖರೀದಿದಾರರು ಪ್ರಶ್ನಿಸಿದ್ದಾರೆ.
ಪ್ರಕರಣದ ನಂತರದ ತೀರ್ಪಿನಲ್ಲಿ, ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ನ್ಯಾಯಾಧೀಶರು ಫ್ಲಾಟ್ ಅನ್ನು ಸ್ವಾಧೀನಪಡಿಸಿಕೊಂಡ ನಂತರವೂ ಸಹಿ ಮಾಡಲಾದ 'ಮಾರಾಟಕ್ಕೆ ಒಪ್ಪಂದ'ದ ಪ್ರತಿಯೊಂದು ಪದವೂ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.
ವಿಚಾರಣೆ ವೇಳೆ ಮನೆ ಖರೀದಿದಾರರು ಕರ್ನಾಟಕ ರೇರಾ ಮುಂದೆ, " ತಾವು ಖರೀದಿ ಯೋಜನೆಯಿಂದ ಹಿಂದೆ ಸರಿಯಲಿಲ್ಲ. ಬದಲಿಗೆ ವಿಳಂಬದ ಅವಧಿಗೆ ಬಡ್ಡಿಯನ್ನು ಕೋರಿದ್ದಾರೆ. ಆದರೆ ಪ್ರತಿವಾದಿಗಳು ಮಾರಾಟದ ಒಪ್ಪಂದದ ಕಲಂ 34.2 ರ ಪ್ರಕಾರ ಪರಿಹಾರವನ್ನು ನೀಡುವುದನ್ನು ನಿರಾಕರಿಸಿ ಬದಲಿಗೆ 1.75 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿದರು, ಅದನ್ನು ಸ್ವೀಕರಿಸಲಾಗಿಲ್ಲ."ಎಂದು ಕೋರ್ಟ್ ಗೆ ಮನವರಿಕೆ ಮಾಡಿದ್ದರು.
"ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ದೇಶಾದ್ಯಂತ ಲಾಕ್‌ಡೌನ್‌ಗಳನ್ನು ವಿಧಿಸಿದ್ದ ಕಾರಣ ಇದಾದ ನಂಡರ ಬಂಡೆ ದೊರಕಿ ಕೆಲಸ ನಿಧಾನಗತಿಯಲ್ಲಿ ಸಾಗಿದಅನಾನುಕೂಲತೆಗಳಿದ್ದರು ನಂತರ ಹೆಚ್ಚಿನ ಮಾನವಶಕ್ತಿಯನ್ನು ನೇಮಿಸಿಕೊಳ್ಳುವ ಮೂಲಕ ಬಹಳ ಕಷ್ಟದಿಂದ ನಿರ್ಮಾಣವನ್ನು ಪೂರ್ಣಗೊಳಿಸಿದ್ದಾರೆ. ಬಿಲ್ಡರ್ ಪರ ವಕೀಲರು ವಾದಿಸಿದ್ದರು. ಜೊತೆಗೆ ಸೆಪ್ಟೆಂಬರ್ 22, 2023 ರಂದು ಸ್ವಾಧೀನದ ಹೊಸ ಸೇಲ್ ಡೀಡ್ ಮಾಡಲಾಯಿತು. ಹೊಸ ಒಪ್ಪಂದವಾದ ಬಳಿಕ ನವೆಂಬರ್ 17, 2018 ರ ಮಾರಾಟದ ಮೂಲ ಒಪ್ಪಂದದಲ್ಲಿ ಉಲ್ಲೇಖಿಸಲಾದ ಷರತ್ತುಗಳು ಚಾಲ್ತಿಗೆ ಬರುವುದಿಲ್ಲ ಎಂದು ವಕೀಲರು ವಾದಿಸಿದ್ದರು.
ಕೊನೆಗೆ ಎಲ್ಲಾ ವಾದ- ಪ್ರತಿವಾದ ಅಲಿಸಿದ ರೇರಾ ಕೋರ್ಟ್ ಬೆಂಗಳೂರಿನಲ್ಲಿ ಶ್ರೀರಾಮ್ ಬ್ಲೂಗೆ ಮನೆ ಖರೀದಿದಾರರಿಗೆ ರೂ 7.12 ಲಕ್ಷ ಬಡ್ಡಿ ಪಾವತಿಸಲು ಆದೇಶಿಸಿತು.
ಈ ಪ್ರಕರಣದಿಂದ ಕಲಿಯಬಹುದಾದ ಅಂಶಗಳು:
ಮಾರಾಟ ಒಪ್ಪಂದವು ಫ್ಲಾಟ್ ವಶಕ್ಕೆ ನೀಡಿದ ನಂತರವೂ ಜಾರಿಗೆ ಬರುತ್ತದೆ.
ಖರೀದಿದಾರರು ವಿಳಂಬದ ಸಂದರ್ಭದಲ್ಲಿ ತಮ್ಮ ಹಕ್ಕುಗಳನ್ನು ತಿಳಿದಿರಬೇಕು.
ಕರ್ನಾಟಕ RERA ರ ಈ ಆದೇಶವು ಮಾರಾಟ ಒಪ್ಪಂದದ ಮಹತ್ವವನ್ನು ಒತ್ತಿಹೇಳುತ್ತದೆ.
ಮಾರಾಟ ಒಪ್ಪಂದವು ಪ್ರಮುಖವಾಗಿದ್ದು ಒಪ್ಪಂದದಲ್ಲಿನ ಎಲ್ಲಾ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.
ಒಪ್ಪಂದವು ಅಸ್ಪಷ್ಟವಾಗಿರಬಾರದು ಮತ್ತು ಸ್ಪಷ್ಟವಾಗಿ ರೂಪಿಸಲ್ಪಟ್ಟಿರಬೇಕು.
ಮಾರಾಟವಾದ ಬಳಿಕವೂ ಒಪ್ಪಂದದ ನಿಬಂಧನೆಗಳು ಮುಂದುವರಿಯುತ್ತವೆ.
ಮನೆ ವಶಕ್ಕೆ ನೀಡಿದ ನಂತರವೂ, ಖರೀದಿದಾರರು ವಿಳಂಬದ ಸಂದರ್ಭದಲ್ಲಿ ಬಡ್ಡಿಯನ್ನು ಪಡೆಯಲು ಅರ್ಹರಾಗುತ್ತಾರೆ.
ವಿಳಂಬದ ಸಂದರ್ಭದಲ್ಲಿ, ಖರೀದಿದಾರರು ಯೋಜನೆಯಿಂದ ಹಿಂದಕ್ಕೆ ಸರಿಯಲು, ಜೊತೆಗೆ ಪಾವತಿಸಿದ ಮೊತ್ತವನ್ನು ಬಡ್ಡಿಯೊಂದಿಗೆ ಪಡೆಯಲು ಅಥವಾ ಯೋಜನೆಯಲ್ಲಿ ಉಳಿದು ವಿಳಂಬದ ಅವಧಿಯ ಬಡ್ಡಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.


Click it and Unblock the Notifications