ಬೆಂಗಳೂರು, ಸೆಪ್ಟೆಂಬರ್ 10: ಅವಿಷ್ಕಾರ ಮತ್ತು ತಂತ್ರಜ್ಞಾನದಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನದಲ್ಲಿರುವ ' ಬೆಂಗಳೂರು' ಸಿಲಿಕಾನ್ ಸಿಟಿ, ಎಲೆಕ್ಟ್ರಾನಿಕ್ ಸಿಟಿ ಆಫ್ ಇಂಡಿಯಾ, ಉದ್ಯಾನನಗರಿ ಮತ್ತು ವಿಜ್ಞಾನ ನಗರ ಹೀಗೆ ಅನೇಕ ಹೆಸರುಗಳಿಂದ ಖ್ಯಾತಿ ಗಳಿಸಿದೆ. ಬೆಂಗಳೂರು ಸಾಧಿಸಿದ ಪ್ರಗತಿ ಮತ್ತು ಅಭಿವೃದ್ಧಿ ಹೂಡಿಕೆದಾರರನ್ನು ಉದ್ಯಮಿಗಳು ಮತ್ತು ಟೆಕ್ ದೈತ್ಯರನ್ನು ಸಮಾನವಾಗಿ ಆಕರ್ಷಿಸುತ್ತದೆ. ಇದೇ ಕಾರಣಕ್ಕೆ ಇಲ್ಲಿನ ಭೂಮಿಗೂ ಚಿನ್ನದ ಬೆಲೆ. ಹೀಗಾಗಿ ಜನಸಾಮಾನ್ಯರು ಭೂಮಿ ಅಥವಾ ಫ್ಲ್ಯಾಟ್ ಖರೀದಿಸುವುದೆಂದರೆ ನಮ್ಮ ಕೈಸುಡುವುದರ ಜತೆಗೆ ಕಿಸೆಯೂ ಖಾಲಿಯಾಗುತ್ತದೆ.
ಹೆಚ್ಚುತ್ತಿರುವ ಬೇಡಿಕೆ ಮತ್ತು ಜಾಗದ ಕೊರತೆಯಿಂದ ಬೆಂಗಳೂರಿನ ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಗಮನಾರ್ಹವಾಗಿ ಬೆಲೆ ಏರಿಕೆಯತ್ತ ಸಾಗುತ್ತಿದೆ. ಖರೀದಿದಾರರು ಮತ್ತು ಹೂಡಿಕೆದಾರರು ಹೆಚ್ಚಾಗಿ ಬೆಂಗಳೂರು ಉತ್ತರದ ಕಡೆಗೆ ದೃಷ್ಟಿ ಹರಿಸಿರುವುದರಿಂದ, ಬಾಗಲೂರು ಮತ್ತು ಹೆಣ್ಣೂರಿನಂತಹ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬೇಡಿಕೆಯಲ್ಲಿ ಏರಿಕೆ ಕಾಣುತ್ತಿವೆ. ಇದರೊಂದಿಗೆ ಬೆಂಗಳೂರು ಹೊರವಲಯದ ವೈಟ್‌ಫೀಲ್ಡ್ ಮತ್ತು ವರ್ತೂರು-ಸರ್ಜಾಪುರದಂತಹ ಪ್ರದೇಶಗಳು ಗಣನೀಯ ಬೆಲೆ ಏರಿಕೆಗೆ ಸಾಕ್ಷಿಯಾಗುತ್ತಿವೆ.

ರಿಯಲ್ ಎಸ್ಟೇಟ್ ಮಧ್ಯ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ 94 ಪ್ರತಿಶತದಷ್ಟು ಹೊಸ ಯೋಜನೆಗಳು ಹಾಗೂ ಸಾಂಕ್ರಾಮಿಕ ಕಾಲಘಟ್ಟದ ನಂತರ ಹೆಚ್ಚಿದ ಬೇಡಿಕೆಯೂ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇದಲ್ಲದೇ ರೆಡಿ-ಟು-ಮೂವ್-ಇನ್ ಪ್ರಾಜೆಕ್ಟ್ ಗಳ ಕೊರತೆಯು ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಿದೆ. ಈ ಬಗ್ಗೆ ಸತ್ವ ಗ್ರೂಪ್ನ ಕಾರ್ಯತಂತ್ರದ ಬೆಳವಣಿಗೆಯ ಉಪಾಧ್ಯಕ್ಷ ಶಿವಂ ಅಗರ್ವಾಲ್ ವಿವರಿಸಿ ಮಾತನಾಡಿ, " ಪ್ರಮುಖ ಮೈಕ್ರೋಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಸಿದ್ದಗೊಂಡಿರುವ ಪ್ರಾಜೆಕ್ಟ್ ಗಳ ಕೊರತೆಯು ಬೇಡಿಕೆಯ ಹೆಚ್ಚಳಕ್ಕೆ ಒಂದು ಕಾರಣವಾಗಿದೆ" ಎಂದು ಹೇಳಿದ್ದಾರೆ.
"ಹೆಚ್ಚಿನ ಬೇಡಿಕೆಯ ಪ್ರದೇಶಗಳಾದ ವೈಟ್‌ಫೀಲ್ಡ್, ವರ್ತೂರು-ಸರ್ಜಾಪುರ ಪ್ರದೇಶಗಳು, ಉತ್ತರ ಬೆಂಗಳೂರಿನ ಪ್ರದೇಶ ಸೇರಿ ಹಲವೆಡೆ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿವೆ" ಎಂದು ರೆಸಿಡೆನ್ಶಿಯಲ್, ಬ್ರಿಗೇಡ್ ಗ್ರೂಪ್‌ನ ಸಿಒಒ ವಿಶ್ವ ಪ್ರತಾಪ್ ದೇಸು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ANAROCK ನ ಇತ್ತೀಚಿನ ಸಮೀಕ್ಷಾ ವರದಿ ಪ್ರಕಾರ ಉತ್ತರ ಬೆಂಗಳೂರಿನಲ್ಲಿ ಬಾಗಲೂರು ಅತೀ ಹೆಚ್ಚಾಗಿ ಬೆಲೆ ಏರಿಕೆಯನ್ನು ಅನುಭವಿಸಿದೆ. 2019 ರಲ್ಲಿ ಚದರ ಅಡಿಗೆ 4,300 ರೂ. ಇದ್ದು, ಇದು 2024 ರ ಮೊದಲಾರ್ಧದಲ್ಲಿ 8,151 ರೂ. ಆಗಿದ್ದು ವಸತಿ ಪ್ರಾಪರ್ಟಿ ಮೌಲ್ಯಗಳು 90 ಪ್ರತಿಶತದಷ್ಟು ಗಗನಕ್ಕೇರಿವೆ.
ಸರ್ಜಾಪುರ ರಸ್ತೆಯು ಸರಿಸುಮಾರು 36,150 ಯುನಿಟ್‌ಗಳ ಹೊಸ ಪೂರೈಕೆಯೊಂದಿಗೆ ಬೆಲೆಗಳಲ್ಲಿ 58 ಪ್ರತಿಶತದಷ್ಟು ಜಿಗಿತವನ್ನು ದಾಖಲಿಸಿದೆ. ಅದರಲ್ಲಿ 74 ಪ್ರತಿಶತ ಮಧ್ಯಮ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ ಹಾಗೂ ಶೇಕಡಾ 18 ಐಷಾರಾಮಿ ವಿಭಾಗದಲ್ಲಿದೆ. ಸರಾಸರಿ ಬೆಲೆಗಳು 2019 ರಲ್ಲಿ ಪ್ರತಿ ಚದರ ಅಡಿಗೆ ₹5,870 ರಿಂದ 2024 ರ ಮೊದಲಾರ್ಧದಲ್ಲಿ ಪ್ರತಿ ಚದರ ಅಡಿಗೆ ₹9,300 ಕ್ಕೆ ಏರಿಕೆ ಕಂಡಿದೆ.ಇನ್ನು ವೈಟ್‌ಫೀಲ್ಡ್ ಏರಿಯಾದಲ್ಲಿ ಈ ವರ್ಷ ಬಿಡುಗಡೆಯಾದ 18,600 ಯುನಿಟ್ ಗಳ ಪೈಕಿ ಮಧ್ಯಮ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ 66 ಪ್ರತಿಶತ ಮತ್ತು ಐಷಾರಾಮಿ ವಿಭಾಗದಲ್ಲಿ 34 ಪ್ರತಿಶತ ಇದೆ.
ಕೈಗೆಟುಕುವ ಸವಾಲುಗಳು:
ರಿಯಲ್ ಎಸ್ಟೇಟ್ ಮಾರುಕಟ್ಟೆ ಹೆಚ್ಚುತ್ತಿರುವ ಪ್ರಾಪರ್ಟಿ ಬೆಲೆಗಳೊಂದಿಗೆ, ಕೈಗೆಟುಕುವಿಕೆ ಬೆಲೆ ಒಂದು ಪ್ರಮುಖ ಕಾಳಜಿಯ ವಿಚಾರವಾಗಿದೆ. ಅದರಲ್ಲೂ ಮೊದಲ ಬಾರಿಗೆ ಖರೀದಿಸುವವರಿಗೆ ಬೆಂಗಳೂರು ಪ್ರಾಪರ್ಟ್ ಗಗನ ಕುಸುಮವಾಗಿದೆ. ಈ ವರ್ಷ, ವೈಟ್‌ಫೀಲ್ಡ್ 18,600 ಯುನಿಟ್ ಗಳಿದ್ದರೂ ಯಾವುದೇ ಹೊಸ ಕೈಗೆಟುಕುವ ವಸತಿ ಘಟಕಗಳನ್ನು ಪರಿಚಯಿಸಲಾಗಿಲ್ಲ. ಸರ್ಜಾಪುರದಲ್ಲಿ 36,150 ಹೊಸ ಘಟಕಗಳಲ್ಲಿ ಕೇವಲ 8 ಪ್ರತಿಶತ ಮಾತ್ರ ಕೈಗೆಟುಕುವ ವಸತಿ ಎಂದು ವರ್ಗೀಕರಿಸಲಾಗಿದೆ.
"ಮೊದಲ ಬಾರಿಗೆ ಖರೀದಿದಾರರು ನಗರ ಕೇಂದ್ರದಿಂದ ಹೊರವಲಯದಲ್ಲಿರುವ ಸಣ್ಣ ಮನೆಗಳು ಅಥವಾ ಪ್ರಾಪರ್ಟಿಗಳನ್ನು ಆಯ್ಕೆ ಮಾಡಬಹುದು, ಅಲ್ಲಿ ಬೆಲೆಗಳು ಹೆಚ್ಚು ಕೈಗೆಟುಕುವಂತಿದೆ" ಎನ್ನುತ್ತಾರೆ ಜೆನಿಕಾ ವೆಂಚರ್ಸ್ ನ ಸ್ಥಾಪಕ ಸಿಈಒ ಅಭಿಷೇಕ್ ರಾಜ್.
ಬಾಡಿಗೆ ಹೆಚ್ಚಳ:
ಕಳೆದ ವರ್ಷದಿಂದ ಬಾಡಿಗೆ ಬೆಲೆಗಳು ಸರಿಸುಮಾರು 5-8 ಪ್ರತಿಶತದಷ್ಟು ಹೆಚ್ಚಾಗುವುದರೊಂದಿಗೆ ಬೆಂಗಳೂರಿನಲ್ಲಿ ಬಾಡಿಗೆಗೆ ಹೆಚ್ಚು ದುಬಾರಿಯಾಗುತ್ತಿದೆ. ಬೆಂಗಳೂರಿನ ಸದೃಢ ಐಟಿ ಉದ್ಯಮವು ವೃತ್ತಿಪರರನ್ನು ಆಕರ್ಷಿಸುತ್ತಿದ್ದು ಇದು ವಸತಿ ಯುನಿಟ್‌ಗಳ ಬೇಡಿಕೆ ಹೆಚ್ಚಿಸಿದೆ. ಇದರೊಂದಿಗೆ ಮನೆ ಮಾಲಿಕತ್ವದ ವೆಚ್ಚಗಳು ಹೆಚ್ಚುತ್ತಿರುವುದರಿಂದ ಬಾಡಿಗೆಯೂ ಏರಿಕೆಯಾಗುತ್ತಿದೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಭರವಸೆಯ ಭವಿಷ್ಯವನ್ನು ಹೊಂದಿದೆ. ಬೆಳೆಯುತ್ತಿರುವ ಐಟಿ ವಲಯ, ಮೆಟ್ರೋ ಮಾರ್ಗ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ದಿ ಯೋಜನೆಗಳಿಂದ ವಸತಿ ಮತ್ತು ವಾಣಿಜ್ಯ ಸ್ಥಳಗಳಿಂದ ಬೆಂಗಳೂರು ರಿಯಲ್ ಎಸ್ಟೇಟ್ ಪ್ರಬಲವಾಗಿ ಬೆಳೆಯುವ ನಿರೀಕ್ಷೆಯಿದೆ.
More From GoodReturns

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ



Click it and Unblock the Notifications