For Quick Alerts
ALLOW NOTIFICATIONS  
For Daily Alerts

ಟಾಪ್ 10 ಕಂಪನಿಗಳ ಮೌಲ್ಯ: ಟಿಸಿಎಸ್, ರಿಲಯನ್ಸ್ ಇನ್ಫಿಗೆ ಭಾರಿ ಲಾಭ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ(ಸೆ. 11ರ ತನಕ) 3 ಕಂಪನಿಗಳ ಮೌಲ್ಯ ಭಾರಿ ಬದಲಾಗಿದ್ದು, 7 ಕಂಪನಿಗಳು ಮೌಲ್ಯ ಹೆಚ್ಚಿಸಿಕೊಂಡು 1,33,746.87 ಕೋಟಿ ರು ಹೆಚ್ಚಿಸಿಕೊಂಡಿವೆ.

ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳ ಪೈಕಿ ದೇಶದ ಅತಿದೊಡ್ಡ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್, ಅತಿ ದೊಡ್ಡ ಐಟಿ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಇನ್ಫೋಸಿಸ್ ಟೆಕ್ನಾಲಜೀಸ್ ಭಾರಿ ಲಾಭ ಗಳಿಸಿವೆ.

ಎಸ್‌ಬಿಐ ಎಸ್ಎಂಎಸ್ ಸೇವೆ ಮೂಲಕ FASTag ಬ್ಯಾಲೆನ್ಸ್ ಚೆಕ್ ಹೇಗೆ?ಎಸ್‌ಬಿಐ ಎಸ್ಎಂಎಸ್ ಸೇವೆ ಮೂಲಕ FASTag ಬ್ಯಾಲೆನ್ಸ್ ಚೆಕ್ ಹೇಗೆ?

ಕಳೆದ ವಾರ, ಬೆಂಚ್‌ಮಾರ್ಕ್ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 989.81 ಪಾಯಿಂಟ್‌ಗಳು ಅಥವಾ ಶೇಕಡಾ 1.68 ಏರಿಕೆ ಕಂಡಿದೆ. ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದರು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಯಾವ ಕಂಪನಿಗಳಿಗೆ ನಷ್ಟ

ಯಾವ ಕಂಪನಿಗಳಿಗೆ ನಷ್ಟ

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ, ಆಮದು -ರಫ್ತು ನಿರ್ಬಂಧ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಹಿಂದೂಸ್ತಾನ್ ಯೂನಿಲಿವರ್,ಎಚ್ ಡಿ ಎಫ್ ಸಿ ಹಾಗೂ ಬಜಾಜ್ ಫೈನಾನ್ಸ್ ನಷ್ಟ ಅನುಭವಿಸಿವೆ. ಅದಾನಿ ಸಂಸ್ಥೆ ಟಾಪ್ 10ರಲ್ಲಿ ಉಳಿದುಕೊಂಡಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 26,249.1 ಕೋಟಿ ರು ಏರಿಕೆ ಕಂಡು 17,37,717.68 ಕೋಟಿ ರು ತಲುಪಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 32,071.59 ಕೋಟಿ ರು ಹೆಚ್ಚಳ ಕಂಡು 11,77,226.60 ಕೋಟಿ ರು ಮೌಲ್ಯಕ್ಕೆ ತಲುಪಿದೆ. ಇನ್ಫೋಸಿಸ್ ಸಂಸ್ಥೆ 24,804.5 ಕೋಟಿ ರು ಏರಿಕೆ ಕಂಡು 6,36,143.85 ಕೋಟಿ ರು ಮೌಲ್ಯಕ್ಕೇರಿದೆ.

ಎಚ್ ಡಿ ಎಫ್ ಸಿ

ಎಚ್ ಡಿ ಎಫ್ ಸಿ

ಎಚ್ ಡಿ ಎಫ್ ಸಿ ಬ್ಯಾಂಕ್ 7,248.44 ರು ಹೆಚ್ಚಳ ಕಂಡು 8,33,854.18 ಕೋಟಿ ರು ತಲುಪಿದೆ. ಎಚ್ ಡಿ ಎಫ್ ಸಿ ಮೌಲ್ಯ 2,551.25 ಕೋಟಿ ರು ಕುಗ್ಗಿ 4,41,501.59 ಕೋಟಿ ರು ಆಗಿದೆ.

ಅದಾನಿ ಕಂಪನಿ

ಅದಾನಿ ಕಂಪನಿ

ಕಳೆದ ಮಂಗಳವಾರ ಆಗಸ್ಟ್ 30ರಂದು ಷೇರುಪೇಟೆಗೆ ಎಂಟ್ರಿ ಕೊಟ್ಟ ಅದಾನಿ ಟ್ರಾನ್ಸ್ ಮಿಷನ್ ಟಾಪ್ 10 ಅತಿ ಹೆಚ್ಚು ಮೌಲ್ಯಯುತ ಕಂಪನಿಗಳ ಪಟ್ಟಿಯಲ್ಲಿ ಉಳಿದುಕೊಂಡಿದೆ. ಕಳೆದ ವಾರ ಅದಾನಿ ಕಂಪನಿ 7,730.36 ಕೋಟಿ ರು ಹೆಚ್ಚಳ ಕಂಡು 4,38,572.68 ಕೋಟಿ ರು ತಲುಪಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಇದೇ ವೇಳೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 15,171.84 ಕೋಟಿ ರು ವ್ಯತ್ಯಾಸ ಕಂಡು 4,93,932.64 ಕೋಟಿ ರು ತಲುಪಿದೆ.

ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 3,618.37 ಕೋಟಿ ರು ಇಳಿಕೆ ಕಂಡು 6,08,074.22 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ ಸಂಸ್ಥೆ 432.88 ಕೋಟಿ ರು ಇಳಿಕೆ ಕಂಡು 4,34,913.12 ಕೋಟಿ ರು ಮುಟ್ಟಿದೆ.

ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್ ಇಂಡಸ್ಟ್ರೀಸ್

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿ ಎಫ್ ಸಿ, ಅದಾನಿ ಟ್ರಾನ್ಸ್ ಮಿಷನ್ ಹಾಗೂ ಬಜಾಜ್ ಫೈನಾನ್ಸ್.

English summary

7 Of Top 10 Most Valued Firms' Market Value Reaches ₹ 1.33 Lakh Crore

The combined market valuation of seven of the top 10 most-valued firms climbed ₹ 1,33,746.87 crore last week amid a firm trend in equities, with Tata Consultancy Services (TCS), Reliance Industries and Infosys leading the pack of gainers.
Story first published: Sunday, September 11, 2022, 13:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X