ದೇಶದ 10 ಮೌಲ್ಯಯುತ ಕಂಪೆನಿಗಳ ಪೈಕಿ 7 ಕಂಪೆನಿಗಳು ಕಳೆದ ವಾರ ಮಾರುಕಟ್ಟೆ ಮೌಲ್ಯಕ್ಕೆ 67,622.08 ಕೋಟಿ ರುಪಾಯಿ ಸೇರ್ಪಡೆ ಆಗುವಂತೆ ಮಾಡಿವೆ. ಆ ಪೈಕಿ ಅತಿ ಹೆಚ್ಚು ಲಾಭ ಗಳಿಸಿರುವುದು ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಕಂಪೆನಿಯ ಷೇರುಗಳು.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಎಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ (ಎಚ್ ಯುಎಲ್), ಎಚ್ ಡಿಎಫ್ ಸಿ, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಏರಿಕೆ ದಾಖಲಿಸಿದವು. ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಹಾಗೂ ಭಾರ್ತಿ ಏರ್ ಟೆಲ್ ಮಾರುಕಟ್ಟೆ ಮೌಲ್ಯ ಕಡಿಮೆ ಆಯಿತು.
ಯಾವ ಕಂಪೆನಿ ಮಾರುಕಟ್ಟೆ ಮೌಲ್ಯ ಎಷ್ಟು ಹೆಚ್ಚಾಯಿತು?
ಎಚ್ ಡಿಎಫ್ ಸಿ ಬ್ಯಾಂಕ್ 28,183.55 ಕೋಟಿ
ಐಸಿಐಸಿಐ ಬ್ಯಾಂಕ್ 21,839.67 ಕೋಟಿ
ಹಿಂದೂಸ್ಥಾನ್ ಯುನಿಲಿವರ್ 6,848.94 ಕೋಟಿ
ಕೊಟಕ್ ಮಹೀಂದ್ರಾ ಬ್ಯಾಂಕ್ 6,241.25 ಕೋಟಿ
ಎಚ್ ಡಿಎಫ್ ಸಿ 1,857.87 ಕೋಟಿ
ಟಿಸಿಎಸ್ 2,157.62 ಕೋಟಿ
ಐಟಿಸಿ 492.18 ಕೋಟಿ

ಮಾರುಕಟ್ಟೆ ಮೌಲ್ಯ ಇಳಿಕೆಯಾದ ಕಂಪೆನಿಗಳು ಹಾಗೂ ಮೊತ್ತ
ರಿಲಯನ್ಸ್ ಇಂಡಸ್ಟ್ರೀಸ್ 20,507.97 ಕೋಟಿ
ಭಾರ್ತಿ ಏರ್ ಟೆಲ್ 4,855.45 ಕೋಟಿ
ಇನ್ಫೋಸಿಸ್ 1972.11 ಕೋಟಿ


Click it and Unblock the Notifications