ಕಳೆದ ವಾರ ಷೇರು ಮಾರುಕಟ್ಟೆಗೆ ಬಿದ್ದ ಹೊಡೆತ ಭೀಕರವಾಗಿತ್ತು. ಅತ್ಯಂತ ಮೌಲ್ಯಯುತ ಷೇರುಗಳು ಎಂದು ಮಾಡಿದ ಹತ್ತು ಕಂಪೆನಿಗಳ ಪೈಕಿ ಏಳು ಕಂಪೆನಿಗಳಿಗೆ ಆದ ನಷ್ಟವನ್ನು ಗಮನಿಸಿದರೆ, ಈ ಮೊತ್ತವು ಒಂದಿಡೀ ವರ್ಷದ ಕರ್ನಾಟಕ ರಾಜ್ಯದ ಬಜೆಟ್ ಗೆ ಸಮವಾಗುತ್ತದೆ. ಕಳೆದುಕೊಂಡ ಒಟ್ಟು ಬಂಡವಾಳ ಮೌಲ್ಯ 1.89 ಲಕ್ಷ ಕೋಟಿ ರುಪಾಯಿ. ಅದರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ 87,732.8 ಕೋಟಿ ರುಪಾಯಿ ಮೌಲ್ಯ ಕರಗಿ ಹೋಗಿದೆ.
ಬಿಎಸ್ ಇ ಸೆನ್ಸೆಕ್ಸ್ 30 ಷೇರುಗಳನ್ನು ಹೊಂದಿದ್ದು, 1,877.66 ಪಾಯಿಂಟ್ ಕುಸಿದು, 40 ಸಾವಿರದಿಂದ ಕೆಳಗಿಳಿದ ಸೂಚ್ಯಂಕವು 39,753.53 ಪಾಯಿಂಟ್ ನಲ್ಲಿ ವಾರಾಂತ್ಯದ ವಹಿವಾಟು ಮುಗಿಸಿದೆ. ಕೆಲ ಸಮಯದ ಹಿಂದೆ ಹತ್ತು ಲಕ್ಷ ಕೋಟಿ ಬಂಡವಾಳ ಮೌಲ್ಯ ಹೊಂದಿದ ದಾಖಲೆ ಮಾಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿ 87,732.8 ಕೋಟಿ ಬಂಡವಾಳ ಕಳೆದುಕೊಂಡು, ಮಾರುಕಟ್ಟೆ ಮೌಲ್ಯ 8,76,906.57 ಕೋಟಿಗೆ ಕುಸಿದಿದೆ.

ಯಾವ ಕಂಪೆನಿಗಳ ಬಂಡವಾಳ ಮೌಲ್ಯ ಎಷ್ಟು ಕರಗಿದೆ ಎಂಬ ವಿವರ ಹೀಗಿದೆ:
ಎಚ್ ಡಿಎಫ್ ಸಿ 31,148.4 ಕೋಟಿ
ಎಚ್ ಡಿಎಫ್ ಸಿ ಬ್ಯಾಂಕ್ 24,736 ಕೋಟಿ
ಐಸಿಐಸಿಐ ಬ್ಯಾಂಕ್ 19,044.7 ಕೋಟಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 18,652.4 ಕೋಟಿ
ಟಿಸಿಎಸ್ 7,317.15 ಕೋಟಿ
ಇನ್ಫೋಸಿಸ್ 1,149.83 ಕೋಟಿ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!



Click it and Unblock the Notifications