ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಏರಿಕೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರವು 7ನೇ ವೇತನ ಆಯೋಗದಡಿಯಲ್ಲಿ ತುಟ್ಟಿಭತ್ಯೆಯನ್ನು ಏರಿಕೆ ಮಾಡುವ ಸಾಧ್ಯತೆಯಿದೆ. ಒಂದು ಕೋಟಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಶೇಕಡ 4ರಷ್ಟು ಹೆಚ್ಚಳ ಮಾಡುವ ನಿರೀಕ್ಷೆಯಿದೆ.
ಈ ನಡುವೆ ಈ ರಾಜ್ಯದಲ್ಲಿ ತುಟ್ಟಿಭತ್ಯೆಯನ್ನು (ಡಿಎ) ಏರಿಕೆ ಮಾಡಲಾಗುತ್ತಿದೆ. ಹೌದು, ಪಶ್ಚಿಮ ಬಂಗಾರ ಸರ್ಕಾರವು ತನ್ನ ರಾಜ್ಯದಲ್ಲಿ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಏರಿಕೆ ಮಾಡಲು ನಿರ್ಧಾರ ಮಾಡಿದೆ. ಪಶ್ಚಿಮ ಬಂಗಾಳ ಸರ್ಕಾರವು ಶೇಕಡ 3ರಷ್ಟು ತುಟ್ಟಿಭತ್ಯೆಯನ್ನು ಏರಿಸಿದೆ.
ಪಶ್ಚಿಮ ಬಂಗಾಳ ಸರ್ಕಾರದ ಸಚಿವೆವವ ಚಂದ್ರಿಮಾ ಭಟ್ಟಾಚಾರ್ಯ ತುಟ್ಟಿಭತ್ಯೆ ಏರಿಕೆ ಮಾಡಲಾಗುವ ಘೋಷಣೆ ಮಾಡು ನಿರ್ಧಾರ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ನೌಕರರಿಗೆ ಡಿಎ ಅನ್ನು ಸರ್ಕಾರವು ಶೇಕಡ 3ರಷ್ಟು ಏರಿಸಿದ್ದು ನೂತನ ಡಿಎ ಮಾರ್ಚ್‌ನಿಂದ ಜಾರಿಗೆ ಬರುತ್ತದೆ.

ಬಜೆಟ್ ವೇಳೆ ಹಲವಾರು ಘೋಷಣೆ ಮಾಡಿದ ಸಚಿವೆ
ಪಶ್ಚಿಮ ಬಂಗಾಳ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಬುಧವಾರ ಹಣಕಾಸು ವರ್ಷ 2023-24ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಸ್ಥಳೀಯ ಪ್ರದೇಶ ಡೆವಲಪ್‌ಮೆಂಟ್‌ಗಾಗಿ ಶಾಸಕರುಗಳಿಗೆ ವಾರ್ಷಿಕ ಫಂಡ್ ಹಂಚಿಕೆಯನ್ನು ಕೂಡಾ ಘೋಷಣೆ ಮಾಡಿದ್ದಾರೆ. ವಿಧಾಯಕ ಎಲಾಕಾ ಉನ್ನಾಯನ್ ಪ್ರಕ್ಲಾಪ್ ಅಡಿಯಲ್ಲಿ ಘೋಷಣೆ ಮಾಡಲಾಗಿದೆ. ಹಣಕಾಸು ವರ್ಷದಲ್ಲಿ ನಿಧಿಯನ್ನು 60 ಲಕ್ಷ ರೂಪಾಯಿಯಿಂದ 70 ಲಕ್ಷ ರೂಪಾಯಿಗೆ ಏರಿಸಿದ್ದಾರೆ.
ನವೆಂಬರ್ 2022ರಲ್ಲಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಿ ನೌಕರರು ಪಶ್ಚಿಮ ಬಂಗಾಳ ವಿಧಾನಸಭೆಯ ಹೊರಗೆ ಪ್ರತಿಭಟನೆ ಮಾಡಿದ್ದಾರೆ. ಡಿಎ ಏರಿಕೆ ಮಾಡುವ ಆಗ್ರಹವನ್ನು ಸರ್ಕಾರಿ ನೌಕರರು ಮಾಡಿದ್ದಾರೆ. ಇದಾದ ಕೆಲವೇ ತಿಂಗಳುಗಳಲ್ಲಿ ಸರ್ಕಾರಿ ನೌಕರರು ಈ ನಿರ್ಧಾರವನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರವು ಡಿಎ ಏರಿಕೆ ಮಾಡಬೇಕು ಎಂಬುವುದು ಕೂಡಾ ಬೇಡಿಕೆಯಾಗಿದೆ. 7ನೇ ವೇತನ ಆಯೋಗ ಜಾರಿ ಮಾಡಲಾದ ಬಳಿಕ ಪಶ್ಚಿಮ ಬಂಗಾಳ ಸರ್ಕಾರವು ಈವರೆಗೆ ಪರಿಷ್ಕೃತ ತುಟ್ಟಿಭತ್ಯೆಯನ್ನು ಪಾವತಿ ಮಾಡಿಲ್ಲ ಎಂದು ಕೂಡಾ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಿ ನೌಕರರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಒಂದು ಕೋಟಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಶೇಕಡ 4ರಷ್ಟು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ತುಟ್ಟಿಭತ್ಯೆಯು ಶೇಕಡ 38ರಿಂದ ಶೇಕಡ 42ಕ್ಕೆ ಏರಿಸುವ ನಿರೀಕ್ಷೆಯಿದೆ. ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರವು ಹೆಚ್ಚಳ ಮಾಡಿದರೆ, ಜನವರಿ 1, 2023ರಿಂದ ಜಾರಿಗೆ ಬರಲಿದೆ. ಇನ್ನು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಡಿಯರೆನ್ಸ್ ರಿಲೀಫ್ ಅನ್ನು (ಡಿಆರ್) ಕೂಡಾ ಘೋಷಣೆ ಮಾಡುವ ನಿರೀಕ್ಷೆಯಿದೆ.


Click it and Unblock the Notifications