ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಸುದ್ದಿಯೊಂದು ಪ್ರಕಟವಾಗಿದೆ. ಸರ್ಕಾರಿ ನೌಕರರಿಗೆ ಮುಂದಿನ ತಿಂಗಳು ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಶೀಘ್ರವೇ ಶೇಕಡ 4ರಷ್ಟು ಬಡ್ಡಿದರವನ್ನು ಏರಿಕೆ ಮಾಡುವ ನಿರೀಕ್ಷೆಯನ್ನು ಉದ್ಯೋಗಿಗಳು ಹೊಂದಿದ್ದಾರೆ.
2023-24 ರ ಹಣಕಾಸು ವರ್ಷದ ಕಳೆದ ಎರಡು ತಿಂಗಳುಗಳಲ್ಲಿ ಹಲವಾರು ರಾಜ್ಯಗಳಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದೆ. ಏಳನೇ ವೇತನ ಆಯೋಗದ ಅಡಿಯಲ್ಲಿ, ನೌಕರರಿಗೆ ವೇತನ ಹೆಚ್ಚಳವಾಗಲಿದೆ. ಇದರಿಂದಾಗಿ ಸರ್ಕಾರಿ ನೌಕರರಿಗೆ ಮಾತ್ರವಲ್ಲ ಪಿಂಚಣಿದಾರರಿಗೂ ಕೂಡಾ ಪಿಂಚಣಿ ಹೆಚ್ಚಳವಾಗಲಿದೆ.

ಇನ್ನು ತುಟ್ಟಿಭತ್ಯೆಯನ್ನು ನೌಕರರ ಮೂಲ ವೇತನಕ್ಕೆ ಸೇರಿಸಿ ನೀಡಲಾಗುತ್ತದೆ. ಇನ್ನು ಕಳೆದ ಎರಡು ತಿಂಗಳುಗಳಲ್ಲಿ ಒಟ್ಟು ಆರು ರಾಜ್ಯಗಳಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಈ ನಡುವೆ ಕೇಂದ್ರ ಸರ್ಕಾರವು ಶೀಘ್ರವೇ ಶೇಕಡ 4ರಷ್ಟು ಬಡ್ಡಿದರವನ್ನು ಏರಿಕೆ ಮಾಡುವ ನಿರೀಕ್ಷೆಯಿದೆ. ಈ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ ಮುಂದೆ ಓದಿ...
ಕರ್ನಾಟಕದಲ್ಲಿ ತುಟ್ಟಿಭತ್ಯೆ ಹೆಚ್ಚಳ
ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಜನವರಿ 1ರಿಂದ ಜಾರಿಗೆ ಬರುವಂತೆ ಕರ್ನಾಟಕದಲ್ಲಿ ಶೇಕಡ 4ರಷ್ಟು ಡಿಎ ಅನ್ನು ಏರಿಕೆ ಮಾಡಲಾಗಿದೆ. ರಾಜ್ಯ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡ 31ರಿಂದ ಶೇಕಡ 34ರಷ್ಟು ಏರಿಕೆ ಮಾಡಿದೆ. ಈ ತುಟ್ಟಿಭತ್ಯೆ ಏರಿಕೆಯು ಪಿಂಚಣಿದಾರರಿಗೂ ಕೂಡಾ ಅನ್ವಯವಾಗುತ್ತದೆ.
ಉತ್ತರ ಪ್ರದೇಶದಲ್ಲಿ ಡಿಎ ಏರಿಕೆ
ಉತ್ತರ ಪ್ರದೇಶದಲ್ಲಿಯೂ ಮೇ ತಿಂಗಳಿನಲ್ಲಿಯೇ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಉತ್ತರ ಪ್ರದೇಶ ಸರ್ಕಾರವು ಡಿಎ ಹಾಗೂ ಡಿಆರ್ ಎರಡನ್ನೂ ಶೇಕಡ 4ರಷ್ಟು ಏರಿಕೆ ಮಾಡಿದೆ. ಈ ಪರಿಷ್ಕರಣೆಯ ಬಳಿಕ ಉದ್ಯೋಗಿಗಳಿಗೆ ಶೇಕಡ 42ರಷ್ಟು ಡಿಎ ಮತ್ತು ಪಿಂಚಣಿದಾರರಿಗೆ ಶೇಕಡ 42ರಷ್ಟು ಡಿಆರ್ ಲಭ್ಯವಾಗುತ್ತದೆ.
ತಮಿಳುನಾಡಿನಲ್ಲಿ ತುಟ್ಟಿಭತ್ಯೆ ಏರಿಕೆ
ಏಳನೇ ವೇತನ ಆಯೋಗದ ಅಡಿಯಲ್ಲಿ ತಮಿಳುನಾಡು ರಾಜ್ಯ ಸರ್ಕಾರವು ಇತ್ತೀಚೆಗೆ ತುಟ್ಟಿಭತ್ಯೆಯನ್ನು ಏರಿಕೆ ಮಾಡಿದೆ. ತಮಿಳುನಾಡು ಸರ್ಕಾರವು ಏಪ್ರಿಲ್ 1, 2023ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯನ್ನು ಶೇಕಡ 4ರಷ್ಟು ಹೆಚ್ಚಳ ಮಾಡಿದೆ. ಈ ತುಟ್ಟಿಭತ್ಯೆ ಪರಿಷ್ಕರಣೆ ಮಾಡಿದ ಬಳಿಕ ಡಿಎ ಶೇಕಡ 38ರಿಂದ ಶೇಕಡ 42ರಷ್ಟು ಏರಿಕೆಯಾಗಿದೆ.
ಹರಿಯಾಣದಲ್ಲಿ ಡಿಎ ಹೆಚ್ಚಳ
ಏಪ್ರಿಲ್‌ನಲ್ಲಿ ಹರಿಯಾಣ ಸರ್ಕಾರವು ಕೂಡಾ ತುಟ್ಟಿಭತ್ಯೆಯನ್ನು ಏರಿಕೆ ಮಾಡಿದೆ. ಹರಿಯಾಣ ಸರ್ಕಾರವು ಡಿಎ ಅನ್ನು ಶೇಕಡ 4ರಷ್ಟು ಹೆಚ್ಚಳ ಮಾಡಿದೆ. ಉದ್ಯೋಗಿಗಳ ತಮ್ಮ ಸಂಬಳವನ್ನು 7ನೇ ವೇತನ ಆಯೋಗದ ಅಡಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಈ ಪರಿಷ್ಕೃಥ ಬಡ್ಡಿದರವು ಜನವರಿ 1, 2023 ರಿಂದ ಜಾರಿಗೆ ಬರಲಿದೆ. ಡಿಎ ಈಗ ಶೇಕಡ 42ರಷ್ಟಿದೆ.
ಜಾರ್ಖಾಂಡ್, ಹಿಮಾಚಲ ಪ್ರದೇಶದಲ್ಲಿ ತುಟ್ಟಿಭತ್ಯೆ ಏರಿಕೆ
ಜಾರ್ಖಾಂಡ್ ಸರ್ಕಾರವು ಕೂಡಾ ತುಟ್ಟಿಭತ್ಯೆಯನ್ನು ಏರಿಕೆ ಮಾಡಿದೆ. ಎಪ್ರಿಲ್ ತಿಂಗಳಿನಲ್ಲಿ ಜಾರ್ಖಾಂಡ್ ಸರ್ಕಾರವು ಶೇಕಡ 8ರಷ್ಟು ಡಿಎ ಏರಿಕೆಯನ್ನು ಘೋಷಣೆ ಮಾಡಿದೆ. ಇದರಿಂದಾಗಿ ತುಟ್ಟಿಭತ್ಯೆಯು ಶೇಕಡ 34ರಿಂದ ಶೇಕಡ 42ಕ್ಕೆ ಏರಿಕೆಯಾಗಿದೆ. ಹಿಮಾಚಲ ಪ್ರದೇಶದಲ್ಲಿಯೂ ಡಿಎ ಏರಿಕೆ ಮಾಡಲಾಗಿದೆ. ಸರ್ಕಾರವು ಶೇಕಡ 3ರಷ್ಟು ತುಟ್ಟಿಭತ್ಯೆ ಏರಿಕೆ ಮಾಡಿದ್ದು, ಡಿಎ ಶೇಕಡ 34ಕ್ಕೆ ತಲುಪಿದೆ. ಜನವರಿ 1, 2023ರಿಂದ ಈ ಡಿಎ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಏರಿಕೆ
ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ (ಡಿಆರ್) ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ. ಈ ಏರಿಕೆಯು ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ಬರುತ್ತದೆ. ಕಳೆದ ಬಾರಿಗೆ ಡಿಎಯನ್ನು ಮಾರ್ಚ್‌ನಲ್ಲಿ ಶೇಕಡ 4ರಷ್ಟು ಏರಿಕೆ ಮಾಡಲಾಗಿದೆ. ಇದು ಜನವರಿ 1, 2023 ರಿಂದ ಜಾರಿಗೆ ಬಂದಿದೆ. ಶೇಕಡ 4ರಷ್ಟು ಡಿಎ ಏರಿಕೆ ಬಳಿಕ ಡಿಎ 42ಕ್ಕೆ ಏರಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಮತ್ತೆ ಡಿಎ ಹೆಚ್ಚಳ ಮಾಡುವ ನಿರೀಕ್ಷೆಯಿದೆ.


Click it and Unblock the Notifications