Good News: ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳಕ್ಕೆ ಅನುಮೋದನೆ

ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿ ಭತ್ಯೆ (ಡಿಎ) ಯನ್ನು ಶೇ 17 ರಿಂದ 28 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಕಳೆದ ವರ್ಷ ತಡೆಹಿಡಿದ ನಂತರ ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ಖಚಿತಪಡಿಸಿವೆ.

ಸರ್ಕಾರಿ ನೌಕರರು ಬಹಳ ಸಮಯದಿಂದ ಈ ಪ್ರಕಟಣೆಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಈ ಘೋಷಣೆಯು ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಏಳನೇ ಕೇಂದ್ರ ವೇತನ ಆಯೋಗದ (7 ನೇ ಸಿಪಿಸಿ) ಅಡಿಯಲ್ಲಿ ತುಟ್ಟಿ ಭತ್ಯೆ ಪ್ರಯೋಜನಗಳನ್ನು ಜುಲೈನಲ್ಲಿ ನೀಡಲಾಗುವುದು ಎಂದು ಸುದ್ದಿ ಹರಿದಾಡಿದ ಬೆನ್ನಲ್ಲೇ ಈ ಘೋಷಣೆ ಹೊರಬಂದಿದೆ.

Good News: ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳಕ್ಕೆ ಅನುಮೋದನೆ

ಆದರೆ ಈ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದ್ದರೂ, ಸೆಪ್ಟೆಂಬರ್‌ನಿಂದ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿದ ಡಿಎ ಸೌಲಭ್ಯ ಸಿಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಹಲವಾರು ಅನುಮೋದನೆಗಳು ಅಗತ್ಯವಿರುವುದರಿಂದ ಉದ್ಯೋಗಿಗಳಿಗೆ ಹೆಚ್ಚಳವಾದ ಡಿಎ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹಿಂದಿನ ವರದಿಯು ಸೂಚಿಸಿದೆ. ಅಂತಹ ಯಾವುದೇ ವಿಳಂಬಕ್ಕೆ, ಕೇಂದ್ರ ಸರ್ಕಾರಿ ನೌಕರರು ಜುಲೈ 1, 2021 ರಿಂದ ಬಾಕಿ ಪಡೆಯುವ ಸಾಧ್ಯತೆಯಿದೆ.

ಇನ್ನು ಕ್ಯಾಬಿನೆಟ್‌ ಈ ಹೆಚ್ಚಳವನ್ನು ಅನುಮೋದಿಸುವ ಮೊದಲು ಕಳೆದ ಒಂದು ವರ್ಷದಿಂದ ಬಾಕಿ ಉಳಿದಿರುವ ಉಳಿದ ಎರಡು ಪಾವತಿಗಳು ಬರಬೇಕಿದ್ದು, ಒಟ್ಟಾರೆ ಶೇ 11 ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+