ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ 10 ಕಂಪೆನಿಗಳ ಪೈಕಿ 8ರ ಮಾರುಕಟ್ಟೆ ಮೌಲ್ಯವು ಕಳೆದ ವಾರ 1,25,229.25 ಕೋಟಿ ರುಪಾಯಿ ಏರಿಕೆ ಆಗಿದೆ. ಎಚ್ ಡಿಎಫ್ ಸಿ, ಟಿಸಿಎಸ್ ಹಾಗೂ ಬಜಾಜ್ ಫೈನಾನ್ಸ್ ಕಂಪೆನಿಗಳು ಅತಿ ದೊಡ್ಡ ಗಳಿಕೆಯನ್ನು ಕಂಡಿವೆ. ಬಿಎಸ್ ಇ ಸೆನ್ಸೆಕ್ಸ್ 861.68 ಪಾಯಿಂಟ್ ಅಥವಾ 1.86 ಪರ್ಸೆಂಟ್ ಹೆಚ್ಚಳ ಆಗಿದೆ.
ಯಾವ ಕಂಪೆನಿಯ ಮಾರುಕಟ್ಟೆ ಮೌಲ್ಯ ಎಷ್ಟು ಹೆಚ್ಚಾಯಿತು?
ಎಚ್ ಡಿ ಎಫ್ ಸಿ 32,992.86 ಕೋಟಿ ರುಪಾಯಿ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 29,700.13 ಕೋಟಿ ರುಪಾಯಿ
ಬಜಾಜ್ ಫೈನಾನ್ಸ್ 24,642.81 ಕೋಟಿ ರುಪಾಯಿ
ಎಚ್ ಡಿಎಫ್ ಸಿ ಬ್ಯಾಂಕ್ 15,996.69 ಕೋಟಿ ರುಪಾಯಿ
ಇನ್ಫೋಸಿಸ್ 11,376.62 ಕೋಟಿ ರುಪಾಯಿ
ಕೊಟಕ್ ಮಹೀಂದ್ರಾ ಬ್ಯಾಂಕ್ 5,622.59 ಕೋಟಿ ರುಪಾಯಿ
ಭಾರ್ತಿ ಏರ್ ಟೆಲ್ 3,573.39 ಕೋಟಿ ರುಪಾಯಿ
ಐಸಿಐಸಿಐ ಬ್ಯಾಂಕ್ 1,324.16 ಕೋಟಿ ರುಪಾಯಿ

ಇನ್ನು ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯ ಮಾರುಕಟ್ಟೆ ಮೌಲ್ಯ 9868.14 ಕೋಟಿ ರುಪಾಯಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 8463.15 ಕೋಟಿ ರುಪಾಯಿ ಇಳಿಕೆ ಆಗಿದೆ.


Click it and Unblock the Notifications