ಒಂದೇ ವಾರದಲ್ಲಿ 1,76,489.28 ಕೋಟಿ ಏರಿಕೆ ಕಂಡ 8 ಕಂಪೆನಿಗಳು
ಜೂನ್ 15ರಿಂದ 19ರ ಮಧ್ಯೆ ಭಾರತದ ಷೇರು ಮಾರುಕಟ್ಟೆಯ 10 ಅತಿ ಮೌಲ್ಯಯುತ ಕಂಪೆನಿಯಲ್ಲಿ 8ರ ಮೌಲ್ಯವು 1,76,489.28 ಕೋಟಿ ರುಪಾಯಿ ಹೆಚ್ಚಳವಾಗಿದೆ. ಈ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಪಾಲು ಹೆಚ್ಚಿದೆ. ಐದು ಟ್ರೇಡಿಂಗ್ ಸೆಷನ್ ಗಳಲ್ಲಿ ಸೆನ್ಸೆಕ್ಸ್ 950.85 ಪಾಯಿಂಟ್ ಗಳ ಏರಿಕೆ ಕಂಡಿದೆ.
ಇದರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಒಂದರ ಮಾರುಕಟ್ಟೆ ಮೌಲ್ಯವೇ 1,08,213.62 ಕೋಟಿ ರುಪಾಯಿ ಹೆಚ್ಚಳವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಸಾಲದಿಂದ ಸಂಪೂರ್ಣ ಮುಕ್ತವಾಗಿದೆ ಎಂದು ಘೋಷಿಸಿದ ಮೇಲೆ ಭಾರತದ ಕಂಪೆನಿಯೊಂದು 11 ಲಕ್ಷ ಕೋಟಿ ರುಪಾಯಿ ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿರುವುದು ಇದೇ ಮೊದಲು ಎಂಬ ದಾಖಲೆ ಸಹ ಬರೆದಿದೆ.

ಏರಿಕೆ ದಾಖಲಿಸಿದ ಇತರ ಪ್ರಮುಖ ಕಂಪೆನಿಗಳ ವಿವರ ಹೀಗಿದೆ:
ಎಚ್ ಡಿಎಫ್ ಸಿ ಬ್ಯಾಂಕ್ 27,288.22 ಕೋಟಿ
ಐಸಿಐಸಿಐ ಬ್ಯಾಂಕ್ 12,729.16 ಕೋಟಿ
ಎಚ್ ಡಿಎಫ್ ಸಿ 8,110.36 ಕೋಟಿ
ಭಾರ್ತಿ ಏರ್ ಟೆಲ್ 6301.17 ಕೋಟಿ
ಇನ್ಫೋಸಿಸ್ 5771.09 ಕೋಟಿ
ಮಹೀಂದ್ರಾ ಅಂಡ್ ಮಹೀಂದ್ರಾ 4,442.42 ಕೋಟಿ
ಟಿಸಿಎಸ್ 3,133.24 ಕೋಟಿ


Click it and Unblock the Notifications