ಅತಿ ದೊಡ್ಡ ಬ್ಯಾಂಕ್ ವಿಲೀನಕ್ಕೆ ಮಾರ್ಚ್ ಅಂತ್ಯದ ಗಡುವಿದ್ದು, ಸರ್ಕಾರಿ ಸ್ವಾಮ್ಯದ ಎಂಟು ಬ್ಯಾಂಕ್ ಗಳು ಗುರುವಾರ ಷೇರುದಾರರಿಗೆ ಪ್ರಸ್ತಾವಿತ ವಿಲೀನದ ನಂತರ ಎಷ್ಟು ಷೇರುಗಳು ದೊರೆಯಬಹುದು ಎಂಬ ಘೋಷಣೆ ಮಾಡಿವೆ.
ಬ್ಯಾಂಕ್ ಗಳ ವಿಲೀನದ ನಂತರ ಬ್ಯಾಂಕ್ ಷೇರುದಾರರಿಗೆ ಎಷ್ಟು ಷೇರು ದೊರೆಯುತ್ತದೆ ಎಂಬ ಕುತೂಹಲಕ್ಕೆ ಅಂತೂ ತೆರೆ ಬಿದ್ದಿದೆ. ಯಾವ ಬ್ಯಾಂಕ್ ನ ಷೇರುದಾರರಿಗೆ ಯಾವ ಬ್ಯಾಂಕ್ ನ ಎಷ್ಟು ಷೇರು ದೊರೆಯುತ್ತದೆ ಎಂಬ ವಿವರ ಹೀಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಸೇರುತ್ತದೆ.
ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನ 1,000 ಷೇರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 1,1150 ಷೇರು ಸಿಗುತ್ತದೆ.
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ 1,000 ಷೇರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 121 ಈಕ್ವಿಟಿ ಷೇರು ದೊರೆಯುತ್ತದೆ.
ಈ ಪ್ರಮಾಣದಲ್ಲಿ ಪಂಜಾಬ್ ನ್ಯಾಷನಲ್ ಷೇರು ವಿತರಣೆ ಮಾಡುವುದಕ್ಕೆ ಮಾರ್ಚ್ 25, 2020 ರೆಕಾರ್ಡ್ ದಿನಾಂಕ ಆಗಿದೆ.
ಆಂಧ್ರ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೇರುತ್ತಿವೆ.
ಆಂಧ್ರ ಬ್ಯಾಂಕ್ ನಲ್ಲಿ 1000 ಷೇರು ಹೊಂದಿದವರಿಗೆ ಯೂನಿಯನ್ ಬ್ಯಾಂಕ್ ನ 325 ಈಕ್ವಿಟಿ ಷೇರು ದೊರೆಯುತ್ತದೆ.
ಕಾರ್ಪೊರೇಷನ್ ಬ್ಯಾಂಕ್ ನಲ್ಲಿ 1000 ಷೇರು ಹೊಂದಿದವರಿಗೆ ಯೂನಿಯನ್ ಬ್ಯಾಂಕ್ ನ 330 ಷೇರುಗಳು ದೊರೆಯುತ್ತವೆ.
ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ನಲ್ಲಿ ಸೇರ್ಪಡೆ ಮಾಡಲಾಗುತ್ತಿದೆ.
ಸಿಂಡಿಕೇಟ್ ಬ್ಯಾಂಕ್ ನಲ್ಲಿ 1000 ಷೇರು ಹೊಂದಿದವರಿಗೆ ಕೆನರಾ ಬ್ಯಾಂಕ್ ನ 158 ಈಕ್ವಿಟಿ ಷೇರುಗಳು ದೊರೆಯುತ್ತವೆ.


Click it and Unblock the Notifications