ಸಮಾಜದಲ್ಲಿ ಹಣ ಮಾಡುವುದಕ್ಕೆ ಅನೇಕ ಮಾರ್ಗಗಳಿವೆ. ಸ್ವಲ್ಪ ತಲೆಗೆ ಕೆಲಸ ಕೊಟ್ಟರೆ ಕಷ್ಟದ ಕೆಲಸ ಸುಲಭವಾಗಿಬಿಡುತ್ತೆ. ದಿನ ಕಳೆದಂತೆ ತಂತ್ರಜ್ಙಾನ ಬೆಳೆಯುತ್ತಾ ಸಾಗುತ್ತಿದೆ. ಈ ತಂತ್ರಜ್ಙಾನದ ಬೆಳವಣಿಗೆ ಜೊತೆಗೆ ನಮ್ಮ ಜೇಬಿಗೂ ಹಣ ಇಳಿಸುವುದು ಒಂದು ಕಲೆ.
ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೇ ದಿನನಿತ್ಯ ಸಾವಿರಾರು ರುಪಾಯಿ ಸಂಪಾದಿಸುವ ಲೆಕ್ಕವಿಲ್ಲದಷ್ಟು ಜನರು ಇದ್ದಾರೆ. ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಎಣಿಸುವ ಜನರೇನು ಕಮ್ಮಿ ಇಲ್ಲ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮೂಲಕವೇ ಚೆನ್ನಾಗಿ ಹಣ ಮಾಡುವವರು ಇದ್ದಾರೆ. ಹಾಗೆಯೇ ಯೂಟ್ಯೂಬ್ ಮೂಲಕ ಪ್ರತಿ ತಿಂಗಳು ತಮ್ಮ ಅಕೌಂಟ್‌ನಲ್ಲಿ ಹಣ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಜಗತ್ತಿನಲ್ಲಿ ಯೂಟ್ಯೂಬ್ ಮೂಲಕವೇ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿರುವ ಟಾಪ್ 10 ಜನರ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ.
1. ವ್ಯಾನೊಸಾಮಿಂಗ್ (ಇವಾನ್ ಫಾಂಗ್) : ಆದಾಯಗಳಿಕೆ 81 ಕೋಟಿ ರುಪಾಯಿ
ಕೆನಡಾ ಮೂಲದ ವಿಡಿಯೋ ಗೇಮ್ ಕಮೆಂಟೇಟರ್ ಆಗಿರುವ ಇವಾನ್ ಫಾಂಗ್ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಕೋಟಿ ಕೋಟಿ ಹಣವನ್ನು ಜೇಬಿಗೆ ಇಳಿಸುವ ಟಾಪ್ 10 ಜನರಲ್ಲಿ ಒಬ್ಬರು. ಕೆನಡಾ ದೇಶದ ಟೊರೊಂಟೊದ 27 ವರ್ಷದ ಈತ ಆನ್‌ಲೈನ್‌ನಲ್ಲಿ ವ್ಯಾನೊಸಾಮಿಂಗ್ ಎಂದೇ ಫೇಮಸ್. ಗ್ರ್ಯಾಂಡ್ ಥೆಫ್ಟ್ ಆಟೋ ವಿ ಮತ್ತು ಮಿನೆಕ್ರಾಫ್ಟ್ ವಿಡಿಯೋ ಗೇಮ್ ಈತನ ನಿರೂಪಣೆಯು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಒಂದೇ ವಿಡಿಯೋ 1.5 ಬಿಲಿಯನ್ ವೀಕ್ಷಣೆಗಳಿಸಿತ್ತು.
ಈತನ ಯೂಟ್ಯೂಬ್ ಚಾನೆಲ್ 24.5 ಮಿಲಿಯನ್ ಸಬ್‌ಸ್ಕ್ರೈಬರ್ಸ್‌ಗಳನ್ನು ಒಳಗೊಂಡಿದೆ. ಈತನ ವಾರ್ಷಿಕ ಆದಾಯ 11.5 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 81.66 ಕೋಟಿ)ನಷ್ಟಿದೆ.
2. ಡ್ಯಾನ್‌ಟಿಡಿಎಂ : ಆದಾಯಗಳಿಕೆ 85 ಕೋಟಿ ರುಪಾಯಿ
ಇಂಗ್ಲೆಂಡ್‌ನ ಯೂಟ್ಯೂಬರ್ ಆಗಿರುವ ಡೇನಿಯಲ್ ರಾಬರ್ಟ್ ಮಿಡಲ್‌ಟನ್ ಆನ್‌ಲೈನ್‌ನಲ್ಲಿ ಡ್ಯಾನ್‌ಟಿಡಿಎಂ ಎಂದೇ ಫೇಮಸ್. 28 ವರ್ಷ ವಯಸ್ಸಿನ ಈ ಹುಡುಗ ವೃತ್ತಿಪರ ಗೇಮರ್ ಮತ್ತು ಲೇಖಕ. ಈತನ ಡ್ಯಾನ್‌ಟಿಡಿಎಂ ಯೂಟ್ಯೂಬ್ ಚಾನೆಲ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿಡಿಯೋ ಗೇಮ್ ಕುರಿತಾದ ವಿಡಿಯೋಗಳೇ ಹೆಚ್ಚಿವೆ. ಅದರಲ್ಲೂ ಮಿನಿಕ್ರಾಫ್ಟ್ ಬಲು ಫೇಮಸ್.
ಇಂಗ್ಲೆಂಡ್‌ನ ಟಾಪ್ ಯೂಟ್ಯೂಬ್ ಚಾನೆಲ್‌ಗಳಲ್ಲಿ ಒಂದಾಗಿರುವ ಈತನ ಚಾನೆಲ್‌ಗೆ 22.3 ಮಿಲಿಯನ್ ಫಾಲೋವರ್ಸ್‌ಗಳಿದ್ದಾರೆ. ಈತನ ಆದಾಯ 12 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 85.21 ಕೋಟಿ)
3. ಮಾರ್ಕಿಪ್ಲಿಯರ್ : ಆದಾಯಗಳಿಕೆ 92 ಕೋಟಿ ರುಪಾಯಿ
ಅಮೆರಿಕಾದ ಮಾರ್ಕ್ ಫಿಶ್‌ಬಾಚ್ ಇಂಟರ್ನೆಟ್‌ನಲ್ಲಿ ಮಾರ್ಕಿಪ್ಲಿಯರ್ ಎಂದೇ ಹೆಸರುವಾಸಿ. 30 ವರ್ಷ ವಯಸ್ಸಿನ ಈತ ಅಮೆರಿಕಾದ ಖ್ಯಾತ ಯೂಟ್ಯೂಬರ್, ನಟ ಮತ್ತು ಕಾಮಿಡಿಯನ್ ಆಗಿದ್ದಾರೆ. ಈತನ ಯೂಟ್ಯೂಬ್ ಚಾನೆಲ್ ಫಾಲೋವರ್ಸ್ ಭರ್ಜರಿ 24.8 ಮಿಲಿಯನ್ ನಷ್ಟಿದ್ದಾರೆ. ಈತನ ಯೂಟ್ಯೂಬ್ ಚಾನೆಲ್ ವೀಕ್ಷಣೆ 12.2 ಬಿಲಿಯನ್ ತಲುಪಿದ್ದು, ಆನ್‌ಲೈನ್ ಮೂಲಕವೇ 92.31 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 92 ಕೋಟಿ) ಆದಾಯಗಳಿಸ್ತಿದ್ದಾನೆ.
4. ಪುಡಿಪಿಯಿ : ಆದಾಯಗಳಿಕೆ 92 ಕೋಟಿ ರುಪಾಯಿ
ಸ್ವೀಡನ್ ಮೂಲದ ಫೆಲಿಕ್ಸ್ ಅರ್ವಿಡ್ ಉಲ್ಫ್ ಕೆಜೆಲ್ಬರ್ಗ್ ಇಂಟರ್‌ನೆಟ್‌ನಲ್ಲಿ ಪುಡಿಪಿಯಿ ಎಂದೇ ಖ್ಯಾತಿ. 2013 ರಿಂದ 2019 ರವರೆಗೆ ಅತಿ ಹೆಚ್ಚು ಸಬ್‌ಸ್ಕ್ರೈಬರ್ ಹೊಂದಿದ ಯೂಟ್ಯೂಬ್ ಚಾನೆಲ್ ಈತನದ್ದಾಗಿದ್ದು 102 ಮಿಲಿಯನ್ ಸಬ್‌ಸ್ಕ್ರೈಬರ್ಸ್ ಹೊಂದಿದೆ. ಈತನ ಲೆಟ್ಸ್ ಪ್ಲೇ ವಿಡಿಯೋಗಳು ಮತ್ತು ಹಾಸ್ಯರೂಪದ ವಿಡಿಯೋಗಳು ಹೆಚ್ಚು ವೀಕ್ಷಣೆಯಾಗಿವೆ. ಈತನ ಆದಾಯವು 92.31 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 92 ಕೋಟಿ)ನಷ್ಟಿದೆ.
5. ಪ್ರೆಸ್ಟನ್ : ಆದಾಯಗಳಿಕೆ 99 ಕೋಟಿ ರುಪಾಯಿ
ಪ್ರೆಸ್ಟನ್ ಅರ್ಸಮೆಂಟ್, ಅತಿ ಚಿಕ್ಕ ವಯಸ್ಸಿನಲ್ಲೇ ಮಿಲಿನಿಯೇರ್ ಆದ ಯೂಟ್ಯೂಬರ್. ಇಂಟರ್‌ನೆಟ್‌ನಲ್ಲಿ ಪ್ರೆಸ್ಟನ್ ಎಂದೇ ಖ್ಯಾತಿ ಪಡೆದಿರುವ ಈತ ಹೆಸರು ಮಾಡಿದ್ದು ಕಾಲ್ ಆಫ್ ಡ್ಯೂಟಿ ಗೇಮ್ ಆಡುವ ಮೂಲಕ. ಗೇಮ್ ಕುರಿತು ಹೆಚ್ಚಿನ ಮಾಹಿತಿ ನೀಡುವುದರ ಜೊತೆಗೆ ಪ್ರಾಂಕ್‌ಗಳನ್ನು ಮಾಡಿ ಹೆಚ್ಚು ಜನರನ್ನು ತನ್ನತ್ತ ಸೆಳೆದನು. ಮಿನಿಕ್ರಾಫ್ಟ್ ಗೇಮ್ ಕೂಡ ಈತನ ಹೆಚ್ಚು ವೀಕ್ಷಣೆ ಗಳಿಸಿದ ವಿಡಿಯೋಗಳಾಗಿವೆ. ಈತನ ಆದಾಯ 14 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 99.42 ಕೋಟಿ)
6. ಜೆಫ್ರಿ ಸ್ಟಾರ್ : ಆದಾಯಗಳಿಕೆ 120 ಕೋಟಿ ರುಪಾಯಿ
ಅಮೆರಿಕಾದ ಮೇಕಪ್ ಆರ್ಟಿಸ್ಟ್ ಆಗಿರುವ ಜೆಫ್ರಿ ಸ್ಟಾರ್ ಯೂಟ್ಯೂಬರ್ ಅಷ್ಟೇ ಅಲ್ಲ ಸಿಂಗರ್, ಉದ್ಯಮಿಯು ಹೌದು. ಡಿಜೆ ಕೂಡ ಆಗಿರುವ ಈ ಮಾಡೆಲ್ ಅನೇಕ ಅಲ್ಬಂ ಸಾಂಗ್ ಕೂಡ ಮಾಡಿದ್ದಾರೆ. ಜಗತ್ತಿನಾದ್ಯಂತ ತನ್ನ ಫಾಲೋವರ್ಸ್ ಹೊಂದಿರುವ ಈಕೆ ತಮ್ಮದೇ ಆದ ಮೇಕಪ್ ಲೈನ್ ಹೊಂದಿದ್ದಾರೆ. ತನ್ನ ಮ್ಯೂಸಿಕ್‌ಗಳನ್ನೇ ಯೂಟ್ಯೂಬ್ ಮೂಲಕ ಪ್ರಮೋಟ್ ಮಾಡುತ್ತಿರುವ ಈಕೆಯ ಆದಾಯವು 17 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 120.74 ಕೋಟಿ)
7. ರೆಟ್ ಮತ್ತು ಲಿಂಕ್ : ಆದಾಯಗಳಿಕೆ 124 ಕೋಟಿ ರುಪಾಯಿ
ರೆಟ್ ಮತ್ತು ಲಿಂಕ್ ಅಮೆರಿಕಾದ ಕಾಮಿಡಿ ಶೋ ನಡೆಸುವ ಜೋಡಿಯಾಗಿದೆ. ರೆಟ್ ಮೆಕ್ಲಾಫಿನ್ ಮತ್ತು ಲಿಂಕ್ ನೀಲ್ ರ ಹೆಸರನ್ನು ರೆಟ್ ಮತ್ತು ಲಿಂಕ್ ಎಂದು ಇಡಲಾಗಿದೆ. ಯೂಟ್ಯೂಬ್ ಶೋ ನಡೆಸುತ್ತಿರುವ ವಿವಿಧ ರೀತಿಯ ಆಹಾರ ತಿನಿಸುಗಳನ್ನು ಟೇಸ್ಟ್ ಮಾಡುತ್ತಾ ಕಾಮಿಡಿ ಮಾಡುತ್ತಾರೆ. ತಮ್ಮದೇ ಆದ ಸ್ಟೈಲ್‌ನಲ್ಲಿ ಕಾಮಿಡಿ ಮಾಡುವ ಈ ಜೋಡಿಯು ನಾಲ್ಕು ಚಾನೆಲ್‌ಗಳನ್ನು ಹೊಂದಿದೆ . ಇವರ ಒಟ್ಟು ಆದಾಯವು 17.5 ಮಿಲಿಯನ್ ಅಮೆರಿಕನ್ ಡಾಲರ್ ( ಭಾರತದ ರುಪಾಯಿಗಳಲ್ಲಿ 124.30 ಕೋಟಿ)
8. ಅನಸ್ತಾನಿಯಾ ರಾಡ್ಜಿನ್ಸ್ಕಯಾ : ಆದಾಯಗಳಿಕೆ 128 ಕೋಟಿ ರುಪಾಯಿ
ರಷ್ಯಾ ಮೂಲದ ಈ ಐದು ವರ್ಷದ ಬಾಲಕಿ ಯೂಟ್ಯೂಬ್‌ನಲ್ಲಿ ಬೂಮರಿಂಗ್ ವಿಡಿಯೋಗಳನ್ನು ಮಾಡುತ್ತಾ ಸಖತ್ ಖ್ಯಾತಿಗಳಿಸಿದೆ. ತನ್ನ ತಂದೆಯೊಂದಿಗೆ ಯೂಟ್ಯೂಬ್ ಚಾನೆಲ್ ನಡೆಸ್ತಿರುವ ಈ ಬಾಲಕಿಯು ಲೈಕ್ ನಾಸ್ತ್ಯ, ಲೈಕ್ ನಾಸ್ತ್ಯ ವ್ಲಾಗ್, ಸ್ಟೇಸಿ ಟಾಯ್ಸ್, ಸ್ಟೇಸಿ ಶೋ, ಫನ್ನಿ ಸ್ಟೇಸಿ ಚಾನೆಲ್‌ಗಳ ಮೂಲಕ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಸದ್ಯ ಈ ಬಾಲಕಿಯ ಚಾನೆಲ್ ಸಬ್‌ಸ್ಕ್ರೈಬರ್ಸ್ ಬರೋಬ್ಬರಿ 44.3 ಮಿಲಿಯನ್ ಹೊಂದಿದ್ದಾರೆ. ಯೂಟ್ಯೂಬ್ ಮೂಲಕ ಈ ಬಾಲಕಿಯ ಆದಾಯವು 18 ಮಿಲಿಯನ್ ಡಾಲರ್ ನಷ್ಟಿದೆ. ಅಂದರೆ ಭಾರತದ ರುಪಾಯಿಗಳಲ್ಲಿ ಭರ್ಜರಿ 127.86 ಕೋಟಿ ಆಗಿದೆ.
9. ಡ್ಯೂಡ್ ಪರ್ಫೆಕ್ಟ್ : ಆದಾಯಗಳಿಕೆ 142 ಕೋಟಿ ರುಪಾಯಿ
ಅಮೆರಿಕಾದ ಕ್ರೀಡಾ ಮನೋರಂಜನಾ ತೆರಿಗೆ ಗ್ರೂಪ್ ಆಗಿರುವ ಡ್ಯೂಡ್ ಪರ್ಫೆಕ್ಟ್ ನಿರಂತರವಾಗಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಈ ಚಾನೆಲ್‌ನಲ್ಲಿ ಐವರು ಕ್ರಿಯೆಟರ್ಸ್ ಇದ್ದು ಕಾಬಿ ಕಾಟನ್, ಕೊರಿ ಕಾರ್ಟನ್, ಗ್ಯಾರೆಟ್ ಹಿಲ್ಬರ್ಟ್, ಕೊಡಿ ಜೋನ್ಸ್, ಟೇಲರ್ ಟೋನಿ ಸ್ನೇಹಿತರು ಸೇರಿಕೊಂಡು ಸೃಷ್ಟಿಸಿದ ಯೂಟ್ಯೂಬ್ ಚಾನೆಲ್ ಆಗಿದೆ.
ಈ ಐವರು ಸ್ನೇಹಿತರು ಮಾಡಿರುವ ಸ್ಟಂಟ್ಸ್ ಗಿನ್ನಿಸ್ ರೆಕಾರ್ಡ್ ಕೂಡ ಆಗಿದೆ. 'ಬಬಲ್ ರ್ಯಾಪ್ ಬ್ಯಾಟಲ್' ಮತ್ತು 'ಬೌಲಿಂಗ್ ಟ್ರಿಕ್ ಶಾಟ್ಸ್' ವಿಡಿಯೋಗಳು ಸಾಕಷ್ಟು ಖ್ಯಾತಿಯ ಜೊತೆಗೆ ಅತಿ ಹೆಚ್ಚಿನ ವೀಕ್ಷಣೆಗಳಿಸಿವೆ. ಟಿವಿ ಒಪ್ಪಂದಕ್ಕೆ ಸಹಿ ಮಾಡಿರುವ ಈ ತಂಡ ತನ್ನದೇ ಆದ ' ದ ಡ್ಯೂಡ್ ಪರ್ಫೆಕ್ಟ್ ಶೋ' ನಡೆಸುತ್ತಿದೆ. ಇವರ ಚಾನೆಲ್‌ನ ಸಬ್‌ಸ್ಕ್ರೈಬರ್ಸ್ 48.4 ನಷ್ಟಿದ್ದು, ಈ ಗ್ರೂಪ್ ನ ಆದಾಯವು 20 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ. (ಭಾರತದ ರುಪಾಯಿಗಳಲ್ಲಿ 142 ಕೋಟಿ)
10.ರಿಯಾನ್ ಕಾಜಿ : ಆದಾಯಗಳಿಕೆ 185 ಕೋಟಿ ರುಪಾಯಿ
ಜಗತ್ತಿನಲ್ಲಿ ಯೂಟ್ಯೂಬ್ ಮೂಲಕ ಅತಿ ಹೆಚ್ಚು ಸಂಪಾದಿಸುತ್ತಿರುವುದು ಈ ಎಂಟು ವರ್ಷದ ಬಾಲಕ ರಿಯಾನ್ ಕಾಜಿ. ಅಮೆರಿಕಾದ ಟೆಕ್ಸಸ್ ಮೂಲದ ಈ 8 ವರ್ಷದ ಬಾಲಕ ರಿಯಾನ್ಸ್ ವರ್ಲ್ಡ್ ಎಂಬ ತನ್ನದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದಾನೆ.
ತನ್ನ ಮೂರನೇ ವಯಸ್ಸಿನಲ್ಲೇ ಯೂಟ್ಯೂಬ್ ಚಾನೆಲ್ ವಿಡಿಯೋಗಳನ್ನು ಶುರು ಮಾಡಿದ ರಿಯಾನ್ ಚಾನೆಲ್‌ನ ಸಬ್‌ಸ್ಕ್ರೈಬರ್ಸ್ ಸದ್ಯ 23.1 ಮಿಲಿಯನ್‌ನಷ್ಟಿದ್ದಾರೆ. ಈತ ಯೂಟ್ಯೂಬ್ ಮೂಲಕವೇ ಅತಿ ಹೆಚ್ಚು ಆದಾಯಗಳಿಸುತ್ತಿರುವ ಬಾಲಕನಾಗಿದ್ದು, ಈತನ ಆದಾಯ 26 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ. ಅಂದರೆ ಭಾರತದ ರುಪಾಯಿಗಳಲ್ಲಿ ಬರೋಬ್ಬರಿ 185 ಕೋಟಿ.
ಈ ಬಾಲಕನ ಯೂಟ್ಯೂಬ್ ಚಾನೆಲ್ ಹೆಚ್ಚು ಖ್ಯಾತಿಗಳಿಸಲು ಕಾರಣ ವಿವಿಧ ರೀತಿಯ ಸೈನ್ಸ್ ಪ್ರಾಜೆಕ್ಟ್‌ಗಳು, ಆಟಿಕೆ ವಿಡಿಯೋಗಳನ್ನು ಅನ್‌ಬಾಕ್ಸ್ ಮಾಡುವುದು ಹಾಗೂ ಮಕ್ಕಳಿಗೆ ಇಷ್ಟವಾಗುವಂತಹ ವಿಡಿಯೋಗಳನ್ನೇ ಹೆಚ್ಚು ಸೃಷ್ಠಿಸುವುದು ಈತನ ಯಶಸ್ಸಿಗೆ ಕಾರಣವಾಗಿದೆ.


Click it and Unblock the Notifications