ಚೆನ್ನೈ, ಮಾರ್ಚ್ 28: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರುವೆನ್ನೆನಲ್ಲೂರಿನ ರಥಿನವೇಲ್ ಮುರುಗನ್ ದೇವಸ್ಥಾನದಲ್ಲಿ 9 ನಿಂಬೆಹಣ್ಣುಗಳನ್ನು 2.36 ಲಕ್ಷ ರೂಪಾಯಿಗೆ ಹರಾಜು ಮಾಡಿದ ಘಟನೆ ಸಾರ್ವಜನಿಕರನ್ನು ಹುಬ್ಬೇರುವಂತೆ ಮಾಡಿದೆ.
ವಿಲ್ಲುಪುರಂ ಜಿಲ್ಲೆಯ ಒಟ್ಟನಂದಾಲ್ ಗ್ರಾಮದಲ್ಲಿ ನಡೆದ ಹಬ್ಬದಲ್ಲಿ ರಥಿನವೇಲ್ ಮುರುಗನ್ ದೇವರ ಈಟಿಗೆ ಚುಚ್ಚಿದ್ದ ಪವಿತ್ರ ನಿಂಬೆಹಣ್ಣುಗಳು ಮಂಗಳವಾರ ಹರಾಜಿಗೆ ಹೋಗಿದ್ದವು. ಆ ಒಂಬತ್ತು ಪವಿತ್ರ ನಿಂಬೆಹಣ್ಣುಗಳು ಬಂಜೆತನವನ್ನು ನಿವಾರಿಸುತ್ತದೆ ಮತ್ತು ಅವರ ಮನೆಗಳಿಗೆ ಸಮೃದ್ಧಿಯನ್ನು ತರುತ್ತದೆ ಎಂದು ಜನರು ನಂಬಿದ್ದರಿಂದ ಹರಾಜಿನಲ್ಲಿ ನಿಂಬೆಹಣ್ಣ ಹರಾಜಿನಲ್ಲಿ 2.36 ಲಕ್ಷ ರೂ.ಗೆ ಮಾರಾಟವಾಯಿತು.

ಪೂರ್ವಜರ ಹಿಂದಿನ ಸಂಪ್ರದಾಯದಂತೆ ಜನರು ಈ ದೇವಾಲಯದ ಗರ್ಭಗುಡಿಯಲ್ಲಿ 5 ಅಡಿ ಎತ್ತರದಲ್ಲಿ ಮುರುಗನ ವೆಲ್ ಅನ್ನು ಪೂಜಿಸುತ್ತಾರೆ. ಹರಾಜು ಸಂಪ್ರದಾಯವು ಪ್ರತಿ ವರ್ಷ ಪಂಗುನಿ ಉಥಿರಂ ಹಬ್ಬದ ಸಮಯದಲ್ಲಿ ಒಂಬತ್ತು ದಿನಗಳವರೆಗೆ ನಡೆಯುತ್ತದೆ. ಅದರಂತೆ ಆ.15ರಂದು ಧ್ವಜ ಆರಂಭವಾಗಿ ಈ ವರ್ಷ ಮಾ.23ರವರೆಗೆ 9 ದಿನಗಳ ಕಾಲ ನಡೆಯಿತು.
ಈ 9 ದಿನಗಳಲ್ಲಿ ರಥಿನವೇಲ್ ಮುರುಗನ್ ದೇವರ ಈಟಿಯಲ್ಲಿ ಅಲಂಕರಿಸಿದ ನಿಂಬೆಹಣ್ಣುಗಳನ್ನು ಪೂಜೆ ಮುಗಿದ ನಂತರ ದಿನದ ಕೊನೆಯಲ್ಲಿ ಹರಾಜು ಮಾಡಲಾಗುತ್ತದೆ. 9 ದಿನಗಳ ಉತ್ಸವದಲ್ಲಿ ಪೂಜೆ ಸಲ್ಲಿಸಿದ 9 ನಿಂಬೆಹಣ್ಣುಗಳು ಒಂದೊಂದಾಗಿ ಇಲ್ಲಿ ಇಡಲಾಗುತ್ತದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಹರಾಜಿನಲ್ಲಿ ಪಾಲ್ಗೊಳ್ಳುತ್ತಾರೆ.
ಪ್ರತಿ ನಿಂಬೆಹಣ್ಣು 100 ರೂಪಾಯಿಗೆ ಶುರುವಾಗಿದ್ದು, ಹಲವರು 1000, 2000, 3000ಕ್ಕೆ ಬಿಡ್ ಮಾಡಿದರು. ಹರಾಜಿನಲ್ಲಿ ಹಬ್ಬದ ಮೊದಲ ದಿನ ಗರಿಷ್ಠ 50,500 ರೂ.ಗೆ ಮಾರಾಟವಾದ ನಿಂಬೆಹಣ್ಣು 2ನೇ ದಿನ 26,500 ರೂ. 3ನೇ ದಿನ 42,100 ರೂ., 4ನೇ ದಿನ 19,000 ರೂ., 5ನೇ ದಿನ 11,000 ರೂ., 6ನೇ ದಿನದ ನಿಂಬೆಹಣ್ಣು ರೂ.34,000, 7ನೇ ದಿನ ರೂ. 24,500, 8ನೇ ದಿನ ರೂ. 13,500, ಮತ್ತು 9ನೇ ದಿನ ರೂ. 15,000. ಇದರೊಂದಿಗೆ ಒಟ್ಟು 9 ನಿಂಬೆಹಣ್ಣು 2,36 ಲಕ್ಷ ರೂ.ಗೆ ಮಾರಾಟವಾದವು.


Click it and Unblock the Notifications