ಕಳೆದ ವಾರ (ಅಕ್ಟೋಬರ್ 5ರಿಂದ 9ರ ಮಧ್ಯೆ) ಭಾರತದ 10 ಮೌಲ್ಯಯುತ ಕಂಪೆನಿಗಳಲ್ಲಿ 9ರ ಮಾರುಕಟ್ಟೆ ಮೌಲ್ಯವು 3,01,145.36 ಕೋಟಿ ರುಪಾಯಿ ಏರಿಕೆ ಆಗಿದೆ. ಕಳೆದ ವಾರ ಬಿಎಸ್ ಇ ಸೆನ್ಸೆಕ್ಸ್ 1812.44 ಪಾಯಿಂಟ್ ಅಥವಾ 4.68% ಹೆಚ್ಚಳವಾಗಿದೆ. ಇದರಲ್ಲಿ ಟಿಸಿಎಸ್ ಅತಿ ದೊಡ್ಡ ಗೇಯ್ನರ್ ಆಗಿದೆ. ಮಾರುಕಟ್ಟೆ ಮೌಲ್ಯವು 1,09,644.68 ಕೋಟಿ ಏರಿಕೆಯಾಗಿ, 10,56,277.53 ಕೋಟಿ ರುಪಾಯಿ ಆಯಿತು.
ಇನ್ನು ಯಾವ ಕಂಪೆನಿಯ ಮಾರ್ಕೆಟ್ ಮೌಲ್ಯ ಎಷ್ಟು ಹೆಚ್ಚಾಗಿದೆ ಎಂಬ ವಿವರ ಹೀಗಿದೆ:
ಎಚ್ ಡಿಎಫ್ ಸಿ 69,952.08 ಕೋಟಿ ರುಪಾಯಿ
ಇನ್ಫೋಸಿಸ್ 38,270.81 ಕೋಟಿ ರುಪಾಯಿ
ಎಚ್ ಡಿಎಫ್ ಸಿ 30,052.75 ಕೋಟಿ ರುಪಾಯಿ
ಐಸಿಐಸಿಐ ಬ್ಯಾಂಕ್ 22,428.99 ಕೋಟಿ ರುಪಾಯಿ
ಎಚ್ ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ 11,736.6 ಕೋಟಿ ರುಪಾಯಿ
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 10,291.06 ಕೋಟಿ ರುಪಾಯಿ
ಕೊಟಕ್ ಮಹೀಂದ್ರಾ ಬ್ಯಾಂಕ್ 2,919.33 ಕೋಟಿ ರುಪಾಯಿ

ಇನ್ನು ಭಾರ್ತಿ ಏರ್ ಟೆಲ್ ಮೌಲ್ಯವು 3,928 ಕೋಟಿ ರುಪಾಯಿ ಇಳಿಕೆ ಆಗಿದೆ. ಅಂದ ಹಾಗೆ ಭಾರತದ ಅತ್ಯಂತ ಮೌಲ್ಯಯುತ ಟಾಪ್ ಟೆನ್ ಕಂಪೆನಿಗಳು ಹೀಗಿವೆ: ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಯುಎಲ್, ಇನ್ಫೋಸಿಸ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ, ಎಚ್ ಸಿಎಲ್ ಟೆಕ್ನಾಲಜೀಸ್ ಹಾಗೂ ಭಾರ್ತಿ ಏರ್ ಟೆಲ್.


Click it and Unblock the Notifications