ಲಾಕ್‌ಡೌನ್ ನಡುವೆಯೂ ಮಲೈ ಮಹದೇಶ್ವರ ದೇವಸ್ಥಾನಕ್ಕೆ ಬಂದ ಆದಾಯವೆಷ್ಟು?

ಚಾಮರಾಜನಗರ: ಕೊರೊನಾವೈರಸ್ ಲಾಕ್‌ಡೌನ್ ನಡುವೆಯೂ ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಮಲೈ ಮಹದೇಶ್ವರ ದೇವಸ್ಥಾನಕ್ಕೆ ಕಳೆದ ನಾಲ್ಕು ತಿಂಗಳಲ್ಲಿ 96 ಲಕ್ಷ ರುಪಾಯಿ ಸಂಗ್ರಹವಾಗಿದೆ.

4 ತಿಂಗಳ ಬಳಿಕ ಹನೂರು ತಾಲೂಕಿನ ಮಲೈ ಮಹದೇಶ್ವರ ದೇವಸ್ಥಾನದ ಹುಂಡಿ ಹಣವನ್ನು ಶುಕ್ರವಾರ ಎಣಿಕೆ ಮಾಡಲಾಗಿದೆ.

ಈ ವೇಳೆ 96,27,988 ಲಕ್ಷ ರೂ. 19.3 ಗ್ರಾಂ ಚಿನ್ನ, 1.9 ಕೆಜಿ ಬೆಳ್ಳಿ ಸಂಗ್ರಹವಾಗಿರುವುದು ತಿಳಿದು ಬಂದಿದೆ. ಯುಗಾದಿ ಜಾತ್ರೆ ಬಳಿಕ ಹುಂಡಿ ಹಣ ಏಣಿಕೆಯಾಗಬೇಕಿತ್ತು. ಕೊರೊನಾ ಲಾಕ್‌ಡೌನ್‌ನಿಂದ ಜಾತ್ರೆ ರದ್ದಾಗಿ ದೇಗುಲವೇ ಬಂದ್ದಾಗಿದ್ದರಿಂದ ಹಣ ಏಣಿಕೆ ಕಾರ್ಯ ನಡೆದಿರಲಿಲ್ಲ. ಈಗ ಸಂಗ್ರಹವಾಗಿರುವ 96,27,988 ರೂ.ನಲ್ಲಿ ಶೇ. 90 ರಷ್ಟು ಮಾರ್ಚ್ ನಲ್ಲಿ ಬಂದ ಭಕ್ತರದ್ದು ಎಂದು ಮಲೈ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ಲಾಕ್‌ಡೌನ್ ನಡುವೆಯೂ ಮಲೈ ಮಹದೇಶ್ವರ ದೇವಸ್ಥಾನಕ್ಕೆ ಬಂದ ಆದಾಯವೆಷ್ಟು?

ಕಾಣಿಕೆ ರೂಪದಲ್ಲಿ 5 ಅಮೆರಿಕನ್ ಡಾಲರ್ ಕೂಡ ಮಾದಪ್ಪನಿಗೆ ಅರ್ಪಣೆಯಾಗಿದೆ. ಮೂರು ತಿಂಗಳು ದೇಗುಲ ಬಂದ್ದಾಗಿರುವುದರಿಂದ ಮಹದೇಶ್ವರನ ಆದಾಯದಲ್ಲಿ ಕೋಟ್ಯಾಂತರ ರು ನಷ್ಟ ಕೂಡ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+