ಕಚ್ಚಾ ತೈಲ 1 ಡಾಲರ್ ಇಳಿದರೂ ಭಾರತಕ್ಕೆ ಎಷ್ಟು ಸಾವಿರ ಕೋಟಿ ಲಾಭ ಗೊತ್ತಾ?

ಕಚ್ಚಾ ತೈಲ ದರದಲ್ಲಿ ಭಾರೀ ಇಳಿಕೆ ಕಾಣುತ್ತಿದ್ದಂತೆ ಭಾರತದ ಹಣದುಬ್ಬರದಲ್ಲಿ ಸುಧಾರಣೆ ಕಾಣುವ ಸಾಧ್ಯತೆ ಗೋಚರಿಸುತ್ತಿದೆ. ಕ‌ಚ್ಚಾ ತೈಲ ದರದಲ್ಲಿ ಅದೆಂಥ ಕನಿಷ್ಠ ಪ್ರಮಾಣದ ಇಳಿಕೆಯಾದರೂ ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಹಣದುಬ್ಬರದ ಸಂಖ್ಯೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದರೆ ಇದರ ಪರಿಣಾಮ ಗ್ರಾಹಕ ದರ ಸೂಚ್ಯಂಕದ ಮೇಲೂ ಆಗುತ್ತದೆ.

ಏಕೆಂದರೆ, ಸಾಗಾಣಿಕೆ ವೆಚ್ಚ ಕಡಿಮೆಯಾಗುತ್ತಿದ್ದಂತೆ ಅಗತ್ಯ ವಸ್ತುಗಳ ದರದಲ್ಲಿ ಇಳಿಕೆ ಆಗುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ, ಒಟ್ಟು ದರದಲ್ಲಿ ಸಾಗಾಣಿಕೆ ವೆಚ್ಚ ಪ್ರಮಾಣವು ಕೇವಲ 2.39% ಮಾತ್ರ ಇರುತ್ತದೆ. ಆದ್ದರಿಂದ ಸಗಟು ದರ ಸೂಚ್ಯಂಕದ ಮೇಲೆ 10.36% ಪಾಲು ಹೊಂದಿರುವ ಕಚ್ಚಾ ತೈಲವು ಡಬ್ಲ್ಯುಪಿಐ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಭಾರತವು 2019ರ ಏಪ್ರಿಲ್ ನಿಂದ 2020ರ ಜನವರಿ ಮಧ್ಯೆ ದಿನಕ್ಕೆ 4.5 ಮಿಲಿಯನ್ ಬ್ಯಾರಲ್ಸ್ ನಂತೆ ಕಚ್ಚಾ ತೈಲ ಆಮದು ಮಾಡಿಕೊಂಡಿದೆ. ವರ್ಷದ ಹಿಂದೆ ಆಮದು ಪ್ರಮಾಣ 83.5% ಇದ್ದದ್ದು ಈಗ 85%ಗೆ ಏರಿಕೆಯಾಗಿದೆ. ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆ, ಒಂದು ಡಾಲರ್ ನಷ್ಟು ಬೆಲೆ ಶಾಶ್ವತವಾಗಿ ಇಳಿಕೆಯಾದರೂ ವರ್ಷಕ್ಕೆ 11,300 ಕೋಟಿ ರುಪಾಯಿಗೂ ಹೆಚ್ಚು ಉಳಿತಾಯ ಆಗುತ್ತದೆ.

ಕಚ್ಚಾ ತೈಲ 1 ಡಾಲರ್ ಇಳಿದರೂ ಎಷ್ಟು ಸಾವಿರ ಕೋಟಿ ಲಾಭ ಗೊತ್ತಾ?

2019ರ ಆರ್ಥಿಕ ವರ್ಷದಲ್ಲಿ ಕಚ್ಚಾ ತೈಲದ ಬಿಲ್ 112 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜನವರಿ ತನಕ 87.7 ಬಿಲಿಯನ್ ಡಾಲರ್ ಆಗಿದೆ. ಕಚ್ಚಾ ತೈಲ ದರ ಇಳಿಕೆ ಆಗುವುದರಿಂದ ವಿತ್ತೀಯ ಕೊರತೆ ಪ್ರಮಾಣ ಇಳಿಯಲು ಅನುಕೂಲ ಆಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+