ಬೆಂಗಳೂರು ಹೊರವಲಯದ ಆನೇಕಲ್‌ನ (Anekal) ಎಲೆಕ್ಟ್ರಾನಿಕ್ ಸಿಟಿಯ (Electronic City) ಮೊದಲನೇ ಹಂತದಲ್ಲಿರುವ ಬಯೋಇನ್ನೊವೇಟಿವ್ ಸೆಂಟರ್‌ನಲ್ಲಿ(Bio Innovative Centre) ಬೆಂಕಿ ಅವಘಡ ಜ. 14 ರಂದು ಸಂಭವಿಸಿದ್ದು, ಯಾವುದೇ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಐಟಿ-ಬಿಟಿ ಇಲಾಖೆ ಮಾಹಿತಿ ತಿಳಿಸಿದೆ.
ಹೌದು, ಸಂಕ್ರಾಂತಿ ಹಬ್ಬದ ನಸುಗಿನ ಜಾವ 4.40ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಬಯೋಇನ್ನೋವೇಟಿವ್ ರಿಸರ್ಚ್ ಸೆಂಟರ್ ಜಿ+2 ಕಟ್ಟಡದ 2ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಉದ್ಯೋಗಿಗಳು ಹೊರಗೆ ಓಡಿ ಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿಯಲ್ಲಿ ತಿಳಿಸಲಾಗಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಅಗ್ನಿ ಅವಘಡದಲ್ಲಿ ಸ್ಟಾರ್ಟ್‌ಅಪ್‌ಗಳಿಂದ ಉಂಟಾದ ನಷ್ಟವು 80 ಕೋಟಿಯಿಂದ 110 ಕೋಟಿ ರೂ.ವರೆಗೆ ಇದೆ. ಆದರೆ ಆಸ್ತಿಗಳಿಗೆ ಹಾನಿ ಸುಮಾರು 42 ಕೋಟಿ ಎಂದು ಅಂದಾಜಿಸಲಾಗಿದೆ.
ಯಾವುದೇ ಪ್ರಾಣ ಹಾನಿಯಾಗಿಲ್ಲ
ಅಗ್ನಿ ಅವಘಡ ನಡೆದ ಘಟನಾ ಸ್ಥಳಕ್ಕೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಲ್ಯಾಬ್‌ನಲ್ಲಿ ಸುಡುವ ದ್ರಾವಕಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಎರಡನೇ ಮಹಡಿಯಲ್ಲಿರುವ ಗಲೋರ್ ಟಿಎಕ್ಸ್ ಸ್ಟಾರ್ಟ್ಅಪ್ ಲ್ಯಾಬ್‌ನಲ್ಲಿ (ರೂಮ್ ಇಎಸ್‌ಎಫ್ 07) ನಸುಕಿನ ಜಾವ 4.35 ರ ಸುಮಾರಿಗೆ ಬೆಂಕಿ ಪ್ರಾರಂಭವಾಯಿತು ಎಂದು ವರದಿಗಳಲ್ಲಿ ಮಾಹಿತಿ ತಿಳಿದು ಬಂದಿದೆ.
ಎಲ್ಲಾ ಬಿಬಿಸಿ ಸ್ಟಾರ್ಟ್‌ಅಪ್‌ಗಳಿಗೆ ತಮ್ಮ ಲ್ಯಾಬ್‌ಗಳಲ್ಲಿ ದೊಡ್ಡ ಪ್ರಮಾಣದ ದಹಿಸುವ ರಾಸಾಯನಿಕಗಳನ್ನು ಸಂಗ್ರಹಿಸದಂತೆ ಅಥವಾ ಬಳಸದಂತೆ ಈ ಹಿಂದೆ ಸೂಚಿಸಲಾಗಿತ್ತು.ಈ ಉದ್ದೇಶಕ್ಕಾಗಿ ಪ್ರತ್ಯೇಕ ತೆರೆದ ಶೇಖರಣಾ ಪ್ರದೇಶವನ್ನು ಸಹ ಒದಗಿಸಲಾಗಿದೆ.ಅದರೆ ಹೆಚ್ಚಿನ ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ ಕಲ್ಪಿಸಲು ಇತ್ತೀಚೆಗೆ ನವೀಕರಿಸಲಾದ ಎರಡನೇ ಮಹಡಿಯಲ್ಲಿ ಈ ಘಟನೆ ನಡೆದಿದೆ ಎಂದು ಐಟಿ ಬಿಟಿ ಇಲಾಖೆಯ ಹೇಳಿಕೆಯಲ್ಲಿ ತಿಳಿಸಿದೆ.
ಎರಡನೇ ಮಹಡಿ ಸಂಪೂರ್ಣವಾಗಿ ದಹಿಸಲ್ಪಟ್ಟಿದೆ, ಆದರೆ ಮೊದಲ ಮತ್ತು ನೆಲದ ಮಹಡಿಗಳು ಪರಸ್ಪರ ಸಂಪರ್ಕ ಹೊಂದಿದ HVAC ಲೈನ್‌ಗಳಿಂದಾಗಿ ವ್ಯಾಪಕ ಹಾನಿಯನ್ನುಂಟು ಮಾಡಿದವು.ಬೆಂಗಳೂರು ಬಯೋ ಬ್ಯಾಂಕ್, ಕ್ಲೀನ್‌ರೂಮ್ ಸೌಲಭ್ಯಗಳು, ಫ್ಲೋ ಸೈಟೋಮೆಟ್ರಿ ಉಪಕರಣಗಳು, HVAC ಘಟಕಗಳು, ಹವಾನಿಯಂತ್ರಣ ಘಟಕಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ BBC ಯಲ್ಲಿನ ಸಾಮಾನ್ಯ ಮೂಲಸೌಕರ್ಯಗಳು ಹಾನಿಯಾಗಿದೆ.
ಅಗ್ನಿ ಅವಘಡದಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳು ತಮ್ಮ ಉಪಕರಣಗಳು,ವಸ್ತುಗಳು ಮತ್ತು ಆಸ್ತಿಗೆ ತೀವ್ರ ನಷ್ಟವನ್ನು ವರದಿ ಮಾಡಿದೆ. ಫರ್ಮ್‌ಬಾಕ್ಸ್ (3 ಲ್ಯಾಬ್‌ಗಳು), ಫಿಕ್ಸ್‌ಎಕ್ಸ್ 44 (3 ಲ್ಯಾಬ್‌ಗಳು), ಅಜಿತಾ ಪ್ರೊಡ್ರಗ್ (1 ಲ್ಯಾಬ್), ಗಲೋರ್ ಟಿಎಕ್ಸ್ (1 ಲ್ಯಾಬ್), ಇಕೆಸಿಯಾ (1 ಲ್ಯಾಬ್), ಇಮ್ಯುನಿಟಾಸ್ (2 ಲ್ಯಾಬ್‌ಗಳು), ಮತ್ತು ಯೊಕೊಗಾವಾ (1 ಲ್ಯಾಬ್) ಸೇರಿದಂತೆ ಸ್ಟಾರ್ಟ್‌ಅಪ್‌ಗಳು ತೀವ್ರವಾಗಿ ಪರಿಣಾಮ ಬೀರಿವೆ.
ಇತರೆ ಸ್ಟಾರ್ಟ್‌ಅಪ್‌ಗಳಲ್ಲಿ ಅಟ್ರಿಮೆಡ್ ಫಾರ್ಮಾ, 4ಬೇಸ್‌ಕೇರ್, ಅನಾಬಿಯೊ, ಅನವಾ ಬಯೋ, ಪಂಡೋರಿಯಮ್, ಆಕ್ಸೋನೆಕ್ಸ್, ಪ್ರಿಸ್ಯೂಡ್ ಲೈಫ್‌ಸೈನ್ಸ್, ಝಿಚು ಸೇರಿವೆ ಎಂದು ಹೇಳಿಯಲ್ಲಿ ಇಲಾಖೆ ಮಾಹಿಯನ್ನು ತಿಳಿಸಿದೆ.
ಘಟನೆ ನಡೆದಿದ್ದು ಹೇಗೆ?
ಜ. 14 ರಂದು ಮುಂಜಾನೆ 4.40ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಜಿ+2 ಬಯೋಇನೋವೇಶನ್ ರಿಸರ್ಚ್ ಸೆಂಟರ್ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಉದ್ಯೋಗಿಗಳು ಹೊರಗೆ ಓಡಿ ಬಂದಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Click it and Unblock the Notifications