ಪ್ರಸ್ತುತ ಹಲವಾರು ತೆರಿಗೆದಾರರು ಆಧಾರ್ ಕಾರ್ಡ್ ಹಾಗೂ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ಕಾರ್ಡ್ ಅನ್ನು ಮಾರ್ಚ್ 31ಕ್ಕೂ ಮುನ್ನ ಲಿಂಕ್ ಮಾಡಿಸಿಬಿಡಬೇಕು ಎಂಬ ಗಡಿಬಿಡಿಯಲ್ಲಿ ಇದ್ದಾರೆ. ಈ ನಡುವೆ ಹಲವಾರು ತಾಂತ್ರಿಕ ಸಮಸ್ಯೆಗಳು ಕೂಡಾ ಉಂಟಾಗಿದೆ. ಈ ನಡುವೆ ಆಧಾರ್ ಹಾಗೂ ಪ್ಯಾನ್ ಹಣಕಾಸು ಸಚಿವಾಲಯವು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಮತ್ತೆ ವಿಸ್ತರಣೆ ಮಾಡಿದೆ. ಸಚಿವಾಲಯವು ಗಡುವನ್ನು ಮಾರ್ಚ್ 31ರಿಂದ ಮೂರು ತಿಂಗಳ ಅವಧಿಗೆ ಅಂದರೆ ಜೂನ್ 30, 2023ರವರೆಗೆ ವಿಸ್ತರಣೆ ಮಾಡಿದೆ.
ಜೂನ್ ಅಂತ್ಯದವರೆಗೆ ಯಾವುದೇ ಪರಿಣಾಮವನ್ನು ಎದುರಿಸದೆಯೇ ಜನರು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದಿನ ಆದೇಶದ ಪ್ರಕಾರ ಮಾರ್ಚ್ 31, 2023ರ ಒಳಗೆ ಈ ಎರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಬೇಕಾಗಿತ್ತು. ಗಡುವು ಮುಗಿದರೂ ಲಿಂಕ್ ಮಾಡಿದಿದ್ದರೆ ಹಲವಾರು ಸಮಸ್ಯೆಗಳನ್ನು ಪ್ಯಾನ್ ಹೊಂದಿರುವವರು ಅನುಭವಿಸಬೇಕಾಗಿತ್ತು. ಮುಖ್ಯವಾಗಿ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುವುದಾಗಿ ಇಲಾಖೆಯು ತಿಳಿಸಿತ್ತು. ಈಗ ನೂತನ ಗಡುವಿನ ಪ್ರಕಾರ ಜೂನ್‌ವರೆಗೆ ಆಧಾರ್ ಪ್ಯಾನ್ ಲಿಂಕ್‌ಗೆ ಅವಕಾಶವಿದೆ.

"ಜುಲೈ 1, 2023ರಿಂದ ಯಾವ ತೆರಿಗೆದಾರರು ಆಧಾರ್ ಕಾರ್ಡ್ ಅನ್ನು ತನ್ನ ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿರುವುದಿಲ್ಲವೋ ಅವರ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ," ಎಂದು ಗಡುವು ವಿಸ್ತರಣೆಯ ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ. ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಿದ ಬಳಿಕ ಪ್ಯಾನ್ ಕಾರ್ಡ್ 30 ದಿನಗಳಲ್ಲಿ ಮತ್ತೆ ಸಕ್ರಿಯವಾಗಲಿದೆ.
ಇನ್ನು ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದಕ್ಕೆ ಕೆಲವು ಜನರಿಗೆ ವಿನಾಯಿತಿಗಳು ಕೂಡಾ ಇದೆ. ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ ಈವರೆಗೆ 51 ಕೋಟಿ ಪ್ಯಾನ್ ಕಾರ್ಡ್‌ಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲಾಗಿದೆ. ಇನ್ನು ಆದಾಯ ತೆರಿಗೆ ವೆಬ್‌ಸೈಟ್ ಮೂಲಕ ನಾವು ನಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ತಿಳಿಯಬಹುದು ಮತ್ತು ಲಿಂಕ್ ಕೂಡಾ ಮಾಡಬಹುದು.
ಪ್ಯಾನ್-ಆಧಾರ್ ಹೀಗೆ ಲಿಂಕ್ ಮಾಡಿ
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ - https://incometaxindiaefiling.gov.in/
ಹಂತ 2: ನಿಮ್ಮ ವಿವರ ಹಾಕಿ, ಪ್ಯಾನ್ ಬಳಕೆದಾರರ ಐಡಿ ಆಗಿರುತ್ತದೆ
ಹಂತ 3: ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ
ಹಂತ 4: ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಯ್ಕೆ ಇರುತ್ತದೆ
ಹಂತ 5: ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ 'Profile Settings' ಗೆ ಹೋಗಿ, 'Link Aadhaar' ಕ್ಲಿಕ್ ಮಾಡಿ
ಹಂತ 6: ಆಧಾರ್‌ನಲ್ಲಿರುವ ಪ್ಯಾನ್ ವಿವರ ಪರಿಶೀಲಿಸಿ, link now ಬಟನ್ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ
ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಚೆಕ್ ಮಾಡಿಕೊಳ್ಳಿ
ಹಂತ 1: ಆಧಾಯ ತೆರಿಗೆ ಇಲಾಖೆ ಇ-ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/
ಹಂತ 2: ಎಡ ಭಾಗದಲ್ಲಿ ಕಾಣುವ Quick Linksನಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ 10 ಡಿಜಿಟ್‌ನ ಪ್ಯಾನ್ ಸಂಖ್ಯೆಯನ್ನು ನಮೂದಿಸಿ
ಹಂತ 4: ನಿಮ್ಮ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 5: View Link Aadhaar Status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿಯಲಿದೆ.
ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಈಗಾಗಲೇ ಲಿಂಕ್ ಆಗಿದ್ದರೆ ಸ್ಕ್ರೀನ್‌ನಲ್ಲಿ Your PAN xxxxxxxxxx is already linked to given Aadhaar xxxxxxxxxxxx (ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಈಗಾಗಲೇ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆ) ಎಂದು ಕಾಣಲಿದೆ. ಒಂದು ವೇಳೆ ಪ್ಯಾನ್‌ಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ಮುಂದಿನ ಹಂತವನ್ನು ಪಾಲಿಸಿ ಪ್ಯಾನ್ ಲಿಂಕ್ ಮಾಡಬೇಕಾಗುತ್ತದೆ.


Click it and Unblock the Notifications