For Quick Alerts
ALLOW NOTIFICATIONS  
For Daily Alerts

ಅಬುಧಾಬಿಯ ಮುಬಡಾಲಾ ಇನ್ವೆಸ್ಟ್‌ಮೆಂಟ್ ಕಂಪನಿ ಜಿಯೋದಲ್ಲಿ 7,568 ಕೋಟಿ ಹೂಡಿಕೆ ಮಾಡಲು ಮಾತುಕತೆ

|

ರಿಲಯನ್ಸ್ ಜಿಯೋ ಕಂಪನಿಗೆ ವಿಶ್ವದ ಎಲ್ಲಾ ಸಂಸ್ಥೆಗಳು ಹಣ ಹೂಡಿಕೆ ಮಾಡಲು ಎದುರು ನೋಡುತ್ತಿವೆ. ಒಂದರ ಹಿಂದೆ ಮತ್ತೊಂದರಂತ ಬೃಹತ್ ಕಂಪನಿಗಳು ಜಿಯೋ ಪಾಲು ಪಡೆಯಲು ಸ್ಪರ್ಧೆಗಿಳಿದಿವೆ. ಈಗ ಅಬುಧಾಭಿಯ ರಾಜ್ಯ ನಿಧಿ ಮುಬಡಾಲಾ ಇನ್ವೆಸ್ಟ್‌ಮೆಂಟ್ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಡಿಜಿಟಲ್ ಯುನಿಟ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಂಗೀತ ಮತ್ತು ಚಲನಚಿತ್ರ ಅಪ್ಲಿಕೇಶನ್‌ಗಳು ಮತ್ತು ರಿಲಯನ್ಸ್‌ನ ಟೆಲಿಕಾಂ ಉದ್ಯಮವಾದ ಜಿಯೋ ಇನ್ಫೋಕಾಮ್ ಅನ್ನು ಹೊಂದಿರುವ ಜಿಯೋ ಪ್ಲಾಟ್‌ಫಾರ್ಮ್‌ಗಳು, ಒಂದು ತಿಂಗಳಲ್ಲಿ ಫೇಸ್‌ಬುಕ್ ಇಂಕ್ ಸೇರಿದಂತೆ ಹೂಡಿಕೆದಾರರಿಂದ 10 ಬಿಲಿಯನ್ ಡಾಲರ್ ಮೊತ್ತವನ್ನು ಪಡೆದುಕೊಂಡಿದೆ.

ಮುಬಡಾಲಾ ಇನ್ವೆಸ್ಟ್‌ಮೆಂಟ್ ಕಂಪನಿ ಜಿಯೋದಲ್ಲಿ 7,568 ಕೋಟಿ ಹೂಡಿಕೆ?

"ಸ್ಪಷ್ಟವಾಗಿ, ಜಿಯೋ ಪ್ಲಾಟ್‌ಫಾರ್ಮ್ ವಿಶ್ವದರ್ಜೆಯ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ, ಇದು ವಿಶ್ವದ ಅತಿದೊಡ್ಡ ಮಾರುಕಟ್ಟೆ ಸ್ಥಳಗಳಲ್ಲಿ ಒಂದನ್ನು ಪೂರೈಸುವ ಅಗಾಧ ಸಾಮರ್ಥ್ಯವನ್ನು ಹೊಂದಿದೆ" ಎಂದು ಮುಬಡಾಲಾ ರಾಯಿಟರ್ಸ್‌ಗೆ ನೀಡಿದ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳಿಂದ ಈಚೆಗೆ ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ಟಾ, ಜನರಲ್ ಅಟ್ಲಾಂಟಿಕ್ ಹಾಗೂ ಕೆಕೆಆರ್ ಸೇರಿ ಸರಾಸರಿ 78,562 ಕೋಟಿ ರುಪಾಯಿಯನ್ನು ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿವೆ. ಈಗ ಇದರ ಜೊತೆಗೆ ಈ ಹೊಸ ಮಾತುಕತೆ ಕುರಿತು ರಿಲಯನ್ಸ್ ಸಂಸ್ಥೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary

Abu Dhabi Mubadala Investment Company Is In Talks To Invest 1 Billion In RIL

Abu Dhabi state fund Mubadala Investment Company is in talks to invest about $1 billion in Reliance Industries' digital unit Jio platforms, three sources said on May 27
Story first published: Thursday, May 28, 2020, 19:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X