ಭಾರತದಲ್ಲಿ ಎರಡು ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಆಕ್ಸೆಂಚರ್ ಕಂಪೆನಿಯು ಕನಿಷ್ಠ 10,000 ಮಂದಿಯನ್ನು ಕೆಲಸದಿಂದ ತೆಗೆಯುವ ಬಗ್ಗೆ ತಿಳಿಸಿದೆ. ಜಾಗತಿಕವಾಗಿ ಆಕ್ಸೆಂಚರ್ ಗೆ ಐದು ಲಕ್ಷ ಮಂದಿ ಉದ್ಯೋಗಿಗಳು ಇದ್ದಾರೆ. ಈ ವರ್ಷದ ಅಪ್ರೈಸಲ್ ಪ್ರಕ್ರಿಯೆ ನಡೆಯುತ್ತಿದ್ದು, ಅದು ಮುಗಿದ ನಂತರ ಹಲವು ಸಾವಿರ ಮಂದಿಯನ್ನು ಕೆಲಸ ಬಿಡುವಂತೆ ಹೇಳುವ ಸೂಚನೆ ನೀಡಲಾಗಿದೆ.
ಆಕ್ಸೆಂಚರ್ ಸಿಇಒ ಜೂಲಿ ಸ್ವೀಟ್ ಮಂಗಳವಾರ ಮಾತನಾಡಿ, ಸಾಮಾನ್ಯವಾಗಿ ವರ್ಷಕ್ಕೆ ಐದು ಪರ್ಸೆಂಟ್ ಮಂದಿ ಬದಲಾವಣೆ ಮಾಡುತ್ತೇವೆ. ಆದರೆ ಬದಲಿಯಾಗಿ ನೇಮಕಾತಿ ಕೂಡ ಮಾಡಿಕೊಳ್ಳುತ್ತೇವೆ. ಆದರೆ ಈ ಬಾರಿ ಸನ್ನಿವೇಶ ಬೇರೆ ಇದೆ. ಆದ್ದರಿಂದ ಬೇಡಿಕೆ ಇಲ್ಲ. ಆದ್ದರಿಂದ ಅಷ್ಟೇ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ತೆಗೆಯುತ್ತೇವೆ. ಆದರೆ ಅದಕ್ಕೆ ಬದಲಿಯಾಗಿ ನೇಮಕಾತಿ ಮಾಡಿಕೊಳ್ಳಲ್ಲ ಎಂದು ಹೇಳಿದ್ದಾರೆ.
ಐದು ಪರ್ಸೆಂಟ್ ಎಂಬ ಲೆಕ್ಕಾಚಾರದಲ್ಲಿ ಹೇಳುವುದಾದರೆ ಭಾರತದಲ್ಲಿ ಹತ್ತು ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬಹುದು. ಈ ಬಗ್ಗೆ ಆಕ್ಸೆಂಚರ್ ವಕ್ತಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಇದು ಪ್ರತಿ ವರ್ಷದ ಪ್ರಕ್ರಿಯೆ. ಈ ವರ್ಷ ಕೂಡ ಪರ್ಫಾರ್ಮೆನ್ಸ್ ಇಲ್ಲದ 5% ಉದ್ಯೋಗಿಗಳನ್ನು ತೆಗೆಯುತ್ತೇವೆ. ಇದರ ಜತೆಗೆ ದೀರ್ಘಾವಧಿಗೆ ನಮ್ಮ ವ್ಯವಹಾರ ಮುನ್ನಡೆಸಲು ಬೇಕಾದ ವ್ಯವಸ್ಥೆ ಮಾಡುತ್ತೇವೆ. ನೇಮಕಾತಿ ಮಾಡುತ್ತೇವೆ. ಈಚೆಗೆ ಕೂಡ ನಮ್ಮಲ್ಲಿ ಹಲವರಿಗೆ ಬೋನಸ್ ಹಾಗೂ ಪ್ರಮೋಷನ್ ನೀಡಿದ್ದೇವೆ ಎಂದಿದ್ದಾರೆ.

ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಆಕ್ಸೆಂಚರ್ ಆದಾಯ ಕೂಡ ಹೊಡೆತ ಬಿದ್ದಿದೆ. ಆಕ್ಸೆಂಚರ್ ನಿಂದ ಐ.ಟಿ. ಸರ್ವೀಸ್, ಬಿಪಿಒ ಮತ್ತಿತರ ಸೇವೆಗಳನ್ನು ಒದಗಿಸಲಾಗುತ್ತಿದೆ. ಕಂಪೆನಿಯ ಆದಾಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ದೃಷ್ಟಿಯಲ್ಲಿ ವೆಚ್ಚವನ್ನು ಕಡಿತ ಮಾಡುವುದು ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.


Click it and Unblock the Notifications