ನವದೆಹಲಿ, ಏಪ್ರಿಲ್ 9: ಭಾರತದಲ್ಲಿ ಕೈಗಾರಿಕೆಗಳ ಬೆಳವಣಿಗೆ ಅತಿ ವೇಗವಾಗಿ ನಡೆಯುತ್ತಿದ್ದು, ಹೀಗಾಗಿ ವಿದ್ಯುತ್ ಮತ್ತು ಇಂಧನದ ಅಗತ್ಯತೆ ಕೂಡ ಹೆಚ್ಚಾಗುತ್ತಿದೆ. ಬೆಳೆಯುತ್ತಿರುವ ಈ ಜನಸಂಖ್ಯೆಗೆ ಅನುಗುಣವಾಗಿ ಈಗಿನ ಪರಿಸ್ಥಿತಿಯಲ್ಲಿ ಇಂಧನ ಬೇಡಿಕೆ ಪೂರೈಕೆ ಮಾಡಲು, ನವೀಕರಿಸಬಹುದಾದ ಇಂಧನ ಕ್ಷೇತ್ರವೇ ಆಧಾರ. ಇದೇ ಕಾರಣಕ್ಕೆ ಅದಾನಿ ಸಮೂಹ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಭಾರತದಲ್ಲಿ ಈಗ ನವೀಕರಿಸಬಹುದಾದ ಇಂಧನ ಕ್ಷೇತ್ರದ ವಿಸ್ತರಣೆಗೆ ಅದಾನಿ ಸಮೂಹದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜೊತೆಗೆ ಅದಾನಿ ಸಮೂಹ ತನ್ನ ಒಡೆತನದ ಸೌರ & ಪವನ ವಿದ್ಯುತ್ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಿದೆ. ಇದೇ ಹಿನ್ನೆಲೆಯಲ್ಲಿ ಮುಂದಿನ 7 ವರ್ಷಗಳವರೆಗೆ ಒಟ್ಟು ₹2.3 ಲಕ್ಷ ಕೋಟಿ ಬಂಡವಾಳ ಹೂಡಲು ತೀರ್ಮಾನಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ವ್ಯಾಪಾರದ ನೆಲೆ ವೃದ್ಧಿಗೆ ಒತ್ತು ನೀಡುವುದೇ ಇದರ ಉದ್ದೇಶ ಎನ್ನಲಾಗಿದೆ.

30 ಗೀಗಾವಾಟ್ ಸಾಮರ್ಥ್ಯದ ಗುರಿ
ಅದಾನಿ ಸಮೂಹಕ್ಕೆ ಈ ವಿಚಾರದಲ್ಲಿ ಮತ್ತೊಂದು ಬಲ ಕೂಡ ಇದೆ. ಹೀಗೆ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿ ಆಗಿದ್ದು, ಗುಜರಾತ್‌ನ ಕಛ್ ಪ್ರದೇಶದ ಖಾವ್ಡಾದಲ್ಲಿ ಸೌರ & ಪವನ ವಿದ್ಯುತ್ ಘಟಕಗಳನ್ನು ಹೊಂದಿದೆ. ಇಲ್ಲಿ 2 ಗೀಗಾವಾಟ್ ವಿದ್ಯುತ್ ಉತ್ಪಾದನೆ ಕೂಡ ನಡೆಯುತ್ತಿರುವುದು ಗಮನಾರ್ಹ ಸಂಗತಿ. ಈಗಿನ ಸಾಮರ್ಥ್ಯವನ್ನು 30 ಗೀಗಾವಾಟ್ ಸಾಮರ್ಥ್ಯಕ್ಕೆ ಹೆಚ್ಚಿಗೆ ಮಾಡಲು ಈಗ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಕಾರ್ಯಕ್ಕೆ ಇದೀಗ ₹1.5 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆಯಂತೆ.
₹50 ಸಾವಿರ ಕೋಟಿ ಬಂಡವಾಳ
ಈ ಯೋಜನೆಗಳ ಜೊತೆಯಲ್ಲೇ ಭಾರತದ ಬೇರೆ ಸ್ಥಳದಲ್ಲಿ, ₹50 ಸಾವಿರ ಕೋಟಿ ಬಂಡವಾಳ ಹೂಡಿಕೆ ಮೂಲಕ 6 ರಿಂದ 7 ಗೀಗಾವಾಟ್ ಸಾಮರ್ಥ್ಯದ ಘಟಕದ ಸ್ಥಾಪನೆಗೂ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅದಾನಿ ನ್ಯೂ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದಾನಿ ಎಂಟರ್‌ಪ್ರೈಸಸ್‌ಗೆ ಸೇರಿದ ಘಟಕ ಇದಾಗಿದೆ. ಇದು ಗುಜರಾತ್‌ನ ಮುಂದ್ರಾದಲ್ಲಿ ಸೌರ ಫಲಕಗಳು ಹಾಗೂ ವಿಂಡ್ ಟರ್ಬೈನ್ ತಯಾರಿಸುತ್ತಿದೆ. ಇದರ ಸಾಮರ್ಥ್ಯ ವಿಸ್ತರಿಸಲು ₹30 ಸಾವಿರ ಕೋಟಿಯ ಹೂಡಿಕೆ ಮಾಡಲು ಈಗ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಭಾರತದ ಇಂಧನ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರನ್ನು ಗಳಿಸುತ್ತಿದೆ. ಈ ನಡುವೆ ದೇಶದಲ್ಲೂ ಇಂಧನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ನವೀಕರಿಸಬಹುದಾದ ಇಂಧನ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆ ಮಾಡಲಾಗುತ್ತಿದೆ. ಇದೀಗ ಅದಾನಿ ಸಮೂಹದ ಕಡೆಯಿಂದ ಕೂಡ ಮಹತ್ವದ ನಿರ್ಧಾರ ಕೈಗೊಂಡಿರುವುದು ಗಮನ ಸೆಳೆದಿದೆ.


Click it and Unblock the Notifications