ಭಾರತದ ಅತೀ ದೊಡ್ಡ ಖಾಸಗಿ ಪೋರ್ಟ್ ಸಂಸ್ಥೆಯಾದ ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಇಕಾನಮಿಕ್ ಜೋನ್ ಲಿಮಿಟೆಡ್ (ಎಪಿಎಸ್‌ಇಜೆಡ್), ಮಯನ್ಮಾರ್ ಪೋರ್ಟ್ಸ್ ಅನ್ನು ಮಾರಾಟ ಮಾಡಿದೆ. ಅದಾನಿ ಪೋರ್ಟ್ಸ್ ಮಯನ್ಮಾರ್ ಪೋರ್ಟ್‌ನ ತನ್ನ ಸಂಪೂರ್ಣ ಷೇರನ್ನು ಸುಮಾರು 30 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದೆ. 2022ರ ಮೇ ತಿಂಗಳಿನಲ್ಲೇ ಅದಾನಿ ಪೋರ್ಟ್ಸ್ ಮಯನ್ಮಾರ್ ಲಿಮಿಟೆಡ್‌ನ ಮಾರಾಟವನ್ನು ಮಾಡುವ ಘೋಷಣೆ ಮಾಡಿತ್ತು.
ಮಯನ್ಮಾರ್‌ನಲ್ಲಿನ ಮಿಲಿಟರಿ ದಂಗೆ ಮತ್ತು ಜಾಗತಿಕ ಖಂಡನೆ ಮತ್ತು ಯುಎಸ್ ನಿರ್ಬಂಧಗಳಿಗೆ ಕಾರಣವಾದ ಪ್ರತಿಭಟನೆಗಳ ನಡುವೆ ಕಳೆದ ವರ್ಷ ಅಂದರೆ 2022ರ ಮೇ ತಿಂಗಳಿನಲ್ಲೇ ಅದಾನಿ ಪೋರ್ಟ್ಸ್ ಮಯನ್ಮಾರ್ ಲಿಮಿಟೆಡ್ ಅನ್ನು ಮಾರಾಟ ಮಾಡಲಾಗುವುದು ಎಂದು ಘೋಷನೆ ಮಾಡಿತ್ತು. ಆದರೆ ಹಲವಾರು ಕಾರಣಗಳಿಂದ ಈ ಮಾರಾಟ ಪ್ರಕ್ರಿಯೆ ವಿಳಂಬವಾಗಿ ಒಂದು ವರ್ಷದ ಬಳಿಕ ಅಂದರೆ 2023ರ ಮೇ ತಿಂಗಳಿನಲ್ಲಿ ಸಂಪೂರ್ಣವಾಗಿದೆ.

ಮಯನ್ಮಾರ್‌ನಲ್ಲಿ ಮಿಲಿಟರಿ ದಂಗೆಯ ನಡುವೆ ಯೋಜನೆ ಸಂಪೂರ್ಣಗೊಳಿಸುವುದು ಮತ್ತು ಭೇಟಿಯಾಗಿ ಮಾತುಕತೆ ನಡೆಸಲು ಹಲವಾರು ಸವಾಲುಗಳು ಉಂಟಾಗಿದೆ. ಈ ನಡುವೆ ನಿರ್ಬಂಧಕ್ಕೆ ಒಳಗಾದ ಸಂಸ್ಥೆಗಳೊಂದಿಗೆ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಅದಾನಿ ಪೋರ್ಟ್ಸ್ ಪುನರುಚ್ಛರಿಸಿದೆ. ಪ್ರಮುಖ ಷೇರುದಾರರ ಒತ್ತಾಯದ ಬಳಿಕ ಮಯನ್ಮಾರ್ ಯೋಜನೆಯಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ಅದಾನಿ ಪೋರ್ಟ್ಸ್ ಮಾಡಿದೆ.
Adani Ports: ಸಾಲದ ಹೊರೆ ಕುಗ್ಗಿಸಲು ಕ್ರಮ, ಷೇರುಗಳ ಮರು ಖರೀದಿಗೆ ಅದಾನಿ ಸಂಸ್ಥೆ ಸಜ್ಜು
ಆರಂಭದಲ್ಲಿ ಅದಾನಿ ಪೋರ್ಟ್ಸ್ ಈ ಮಾರಾಟ ಪ್ರಕ್ರಿಯೆಯನ್ನು ಮಾರ್ಚ್ ಮತ್ತು ಜೂನ್‌ರ 2022ರ ನಡುವೆ ನಡೆಸುವ ಯೋಜನೆಯನ್ನು ರೂಪಿಸಿತ್ತು. ಹಲವಾರು ನಿರ್ಬಂಧಗಳ ಕಾರಣದಿಂದಾಗಿ ಸಭೆ ವಿಳಂಬವಾಗಿದೆ. ಸಂಸ್ಥೆಯು ಮಾರಾಟದ ದರದ ಬಗ್ಗೆ ಖರೀದಿದಾರರಾದ ಸೋಲರ್ ಎನರ್ಜಿ ಲಿಮಿಟೆಡ್ ಜೊತ್ತೆ ಮತ್ತೆ ಮರು ಸಂಧಾನ ಮಾಡಿದೆ. ಈ ಸಂಸ್ಥೆಯು ಅಂತಿಮವಾಗಿ 30 ಮಿಲಿಯನ್ ಡಾಲರ್‌ಗೆ ಒಪ್ಪಿಕೊಂಡಿದೆ ಎಂದು ರೆಗ್ಯೂಲೇಟರಿ ಫೈಲಿಂಗ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಈ ಮಾರಾಟ ಪ್ರಕ್ರಿಯೆ ಯಾವ ಸ್ಥಳದಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೇ 2021 ರಲ್ಲಿ, ಅದಾನಿ ಪೋರ್ಟ್ಸ್ ಕಂಪನಿಯು ಯೋಜನೆಯಲ್ಲಿ 127 ಮಿಲಿಯನ್ ಡಾಲರ್ ಹೂಡಿಕೆ ಮಾಡಿತು. ಇದರಲ್ಲಿ ಭೂಮಿಯನ್ನ ಗುತ್ತಿಗೆಗೆ ಪಡೆಯಲು 90 ಮಿಲಿಯನ್ ಡಾಲರ್ ಮುಂಗಡ ಪಾವತಿಯನ್ನು ಮಾಡಬೇಕಾಯಿತು.
ಅದಾನಿ ಪೋರ್ಟ್ಸ್ ಗ್ರೀನ್ ಫೀಲ್ಡ್ ಯೋಜನೆ ಮೇಲೆ 195 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಅದರ ಕಾರ್ಯನಿರ್ವಹಣೆ ಇನ್ನೂ ಕೂಡಾ ಆರಂಭವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅದಾನಿ ಪೋರ್ಟ್ ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನು ಅದಾನಿ ಪೋರ್ಟ್ಸ್ ಮಯನ್ಮಾರ್ ಪೋರ್ಟ್ಸ್ ಅನ್ನು 30 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡುತ್ತದೆ ಎಂಬ ಘೋಷಣೆ ಮಾಡಿದ ಬಳಿಕ ಅದಾನಿ ಪೋರ್ಟ್ಸ್ ಷೇರು ಶೇಕಡ 1.2ರಷ್ಟು ಏರಿಕೆಯಾಗಿದೆ.
ಹಿಂಡನ್‌ಬರ್ಗ್ ವರದಿ, ಸಾಲ ಮರುಪಾವತಿ
ಅದಾನಿ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ಆರೋಪ ಮಾಡಿದ ಬಳಿಕ ಸಂಸ್ಥೆಯ ಸ್ಟಾಕ್ ಮಾರುಕಟ್ಟೆಯಲ್ಲಿ ನಷ್ಟವನ್ನು ಕಾಣುತ್ತಾ ಬಂದಿದೆ. ಈ ನಷ್ಟವನ್ನು ಕಡಿಮೆ ಮಾಡಲು ಹೂಡಿಕೆದಾರರ ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅದಾನಿ ಸಂಸ್ಥೆಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಅದರಲ್ಲಿ ಸಾಲ ಪೂರ್ವಪಾವತಿ ಆಗಿದೆ.
ಈ ಹಿಂದೆ ಅದಾನಿ ಸಂಸ್ಥೆಯು ಸಾಲ ಮರುಪಾವತಿ ಮಾಡಲೆಂದು ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್‌ನ ಷೇರುಗಳನ್ನು ಮರುಖರೀದಿ ಮಾಡಲಾಗುವುದು ಎಂದು ಘೋಷಣೆ ಮಾಡಿದೆ. ಜುಲೈ 2024ರ ಒಳಗೆ ಕೆಲವೊಂದು ಸಾಲಗಳನ್ನು ಮರುಪಾವತಿ ಮಾಡಬೇಕಾಗಿದೆ. ಅದರ ಮರುಪಾವತಿಗಾಗಿ ಸಂಸ್ಥೆಯು ಈ ಕ್ರಮವನ್ನು ಕೈಗೊಂಡಿದೆ ಎಂದು ಹೇಳಿದೆ.


Click it and Unblock the Notifications