ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ವರದಿಯು ಭಾರೀ ಚರ್ಚೆಗೆ ಕಾರಣವಾಗಿದೆ. ಈಗ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅದಾನಿ ಗ್ರೂಪ್ ವಿರುದ್ಧ ತನಿಖೆ ನಡೆಸುತ್ತಿರುವ ಸೆಬಿ ಮುಂದೆ ಪ್ರಶ್ನೆ ಇಟ್ಟಿದ್ದಾರೆ. "ಅದಾನಿ ಗ್ರೂಪ್ ಸ್ಟಾಕ್‌ನಲ್ಲಿ ಶೇಕಡ 90ರಷ್ಟು ಅಂದರೆ 6.9 ಬಿಲಿಯನ್ ಡಾಲರ್‌ನಷ್ಟು ಹೂಡಿಕೆಯ ಮಾರಿಷಸ್ ಫಂಡ್ ಬಗ್ಗೆ ಸೆಬಿ ಯಾಕಿನ್ನು ಆಳವಾದ ತನಿಖೆಗೆ ಇಳಿದಿಲ್ಲ. ಇದಕ್ಕೂ ಕೂಡಾ ಮಾರುಕಟ್ಟೆ ನಿಯಂತ್ರಕರಿಗೆ ಯಾವುದೇ ತನಿಖಾ ಸಂಸ್ಥೆಯ ಸಹಾಯ ಬೇಕೇ?," ಎಂದು ಪ್ರಶ್ನಿಸಿದ್ದಾರೆ.
ಎಲಾರಾ ಇಂಡಿಯ ಆಪೋರ್ಚಿನಿಟೀಸ್ ಫಂಡ್, ಕ್ರೆಸ್ಟಾ ಫಂಡ್, ಅಲ್ಬುಲಾ ಇನ್‌ವೆಸ್ಟ್‌ಮೆಂಟ್ ಫಂಡ್ ಮತ್ತು ಎಪಿಎಂಎಸ್ ಇನ್‌ವೆಸ್ಟ್‌ಮೆಂಟ್ ಫಂಡ್ ಸಂಸ್ಥೆಗಳು ಶೆಲ್ ಸಂಸ್ಥೆಗಳು ಎಂಬ ಆರೋಪದ ಬಳಿಕ ಫಂಡ್‌ಗಳು ನಿಗೂಢವಾಗಿದೆ. ಶೆಲ್ ಸಂಸ್ಥೆಯಿಂದರೆ ಬರೀ ಹೆಸರಿಗಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಗಳು ಹಿಂಡನ್‌ಬರ್ಗ್ ವರದಿಯ ಬಳಿಕ ಮತ್ತೆ ಗಮನಕ್ಕೆ ಬಂದಿದೆ. ಇದು ಸ್ಟಾಕ್ ದರದ ಮೇಲೆ ಪ್ರಭಾವ ಬೀರಿದೆ ಎಂದು ಆರೋಪವಿದೆ. ಆದರೆ ಅದಾನಿ ಗ್ರೂಪ್ ಎಲ್ಲ ಆರೋಪ ತಳ್ಳಿಹಾಕಿದೆ.

"ಸರ್ಕಾರ ಮತ್ತು ವ್ಯಾಪಾರದ ನಡುವೆ ಇಲ್ಲದ ಅಪಾರದರ್ಶಕವಾದ ಲಿಂಕ್ ಅನ್ನು ಕಡಿತಗೊಳಿಸುವುದು (ಪಾರದರ್ಶಕತೆ ಹೆಚ್ಚಿಸುವುದು) ಮತ್ತು ನಿಯಂತ್ರಕರು ತಮ್ಮ ಕಾರ್ಯಮಾಡಲು ಬಿಟ್ಟುಬಿಡುವುದು. ಮಾರಿಷಸ್ ಫಂಡ್ ಮಾಲೀಕತ್ವದ ಆಳಕ್ಕೆ ಇನ್ನು ಸೆಬಿ ಯಾಕೆ ಇಳಿದಿಲ್ಲ. ಯಾವುದೇ ತನಿಖಾ ಸಂಸ್ಥೆಯ ಸಹಾಯ ಬೇಕಾಗಿದೆಯೇ?," ಎಂದು ರಾಜನ್ ಪ್ರಶ್ನಿಸಿದ್ದಾರೆ. ಫಂಡ್‌ಗಳು ಮಾರಿಷಸ್ ಸಂಸ್ಥೆಗಳ ಹೆಸರಲ್ಲಿದೆ. ಹಾಗೆಯೇ ಮಾಲೀಕತ್ವವು ನಿಗೂಢವಾಗಿದೆ. ಈ ಬಗ್ಗೆ ರಾಜನ್ ಧನಿ ಎತ್ತಿದ್ದಾರೆ.
"ಇಂತಹ ಕುಟುಂಬಗಳು ದೇಶದ ಆಡಳಿತಕ್ಕೆ ನೇರವಾಗಿ ಕೈಹಾಕುವ ಅವಕಾಶವಿದ್ದಾಗ ದೇಶಕ್ಕೆ ಸರಿಯಾದ ಸೇವೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ವ್ಯಾಪಾರ ಎಂದಿಗೂ ಅದರ ನೆಲೆಯಲ್ಲೇ ಇರಲಿ, ಆಡಳಿತದ ಸಂಪರ್ಕದಲ್ಲಿ ಅಲ್ಲ," ಎಂದು ಕಟುವಾದ ಮಾತುಗಳನ್ನು ಮಾಜಿ ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಇನ್ನು ಈಗಾಗಲೇ ದೇಶದ ಉನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಅದಾನಿ ಗ್ರೂಪ್ ವಿರುದ್ಧ ಸೆಬಿ ತನಿಖೆಯನ್ನು ಘೋಷಣೆ ಮಾಡಿದೆ.
ಹಿಂಡನ್‌ಬರ್ಗ್ ಆರೋಪ, ಇತರೆ ತಿರುವುಗಳು
ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.
ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.
ಆದರೆ ಅದಾನಿ ಗ್ರೂಪ್ ಮಾತ್ರ ಇದು ಭಾರತದ ಮೇಲೆ ನಡೆಸುತ್ತಿರುವ ದಾಳಿ ಎಂದು ತನ್ನ 413 ಪುಟಗಳ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದೆ. ಹಾಗೆಯೇ ಎಲ್ಲ ಆರೋಪಗಳನ್ನು ಅದಾನಿ ಗ್ರೂಪ್ ಅಲ್ಲಗಳೆದಿದೆ. ಅದಾದ ಬಳಿಕ ಸ್ಟಾಕ್ ಮಾರುಕಟ್ಟೆಯಲ್ಲಿ ಉಂಟಾದ ಕುಸಿತವನ್ನು ಸರಿದೂಗಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಕೊಂಚ ಸುಧಾರಿಸುತ್ತಿದೆ. ಆದರೂ ಹಲವಾರು ಡೀಲ್ ಅದಾನಿ ಗ್ರೂಪ್ ಕೈಜಾರಿದೆ.


Click it and Unblock the Notifications