For Quick Alerts
ALLOW NOTIFICATIONS  
For Daily Alerts

ಎಜಿಆರ್ ಬಾಕಿ ಪಾವತಿಗೆ ಟೆಲಿಕಾಂ ಕಂಪೆನಿಗಳಿಗೆ ಹತ್ತು ವರ್ಷದ ಕಾಲಾವಕಾಶ

|

ಎಜಿಆರ್ ಬಾಕಿ ಪಾವತಿಗೆ ಹತ್ತು ವರ್ಷದ ಅವಧಿ ನೀಡಿ, ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮಾರ್ಚ್ 31, 2021ರೊಳಗೆ 10% ಮೊತ್ತವನ್ನು ಪಾವತಿಸಬೇಕಿದೆ. ಪ್ರತಿ ವರ್ಷದ ಫೆಬ್ರವರಿ 7ರೊಳಗೆ ಹಣವನ್ನು ಪಾವತಿ ಮಾಡಬೇಕು ಎಂದು ಮಾಧ್ಯಮ ವರದಿಗಳು ಹೇಳಿವೆ. ಸ್ಪೆಕ್ಟ್ರಂ ಮಾರಾಟಕ್ಕೆ ಸಂಬಂಧಿಸಿದಂತೆ ಟೆಲಿಕಾಂ ಕಂಪೆನಿಗಳ ದಿವಾಳಿ ಕಲಾಪದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನಿಂದ ಎನ್ ಸಿಎಲ್ ಟಿಗೆ ಬಿಡಲಾಗಿದೆ.

ಟೆಲಿಕಾಂ ಕಂಪೆನಿಗಳ ಎಜಿಆರ್ ಬಾಕಿಯನ್ನು ಮರುಪಾವತಿಸಲು 20 ವರ್ಷಗಳ ಅವಧಿ ಕೇಳಿತ್ತು. ವೊಡಾಫೋನ್ ಐಡಿಯಾ 50,400 ಕೋಟಿ ರುಪಾಯಿಗೂ ಹೆಚ್ಚು, ಭಾರ್ತಿ 26,000 ಕೋಟಿಗೆ ಹತ್ತಿರ ಬಾಕಿ ಇದೆ. ಇವೆರಡೂ 15 ವರ್ಷಗಳ ಕಾಲ ಸಮಯವನ್ನು ಕೇಳಿದ್ದವು. ಒಂದು ವೇಳೆ ಒಂದೇ ಸಲಕ್ಕೆ ವೊಡಾಫೋನ್ ಐಡಿಯಾ ಎಜಿಆರ್ ಬಾಕಿ ಪಾವತಿಸಿದಲ್ಲಿ ಕಂಪೆನಿಯೇ ಮುಚ್ಚಬೇಕಾಗುತ್ತದೆ ಎಂದು ತಿಳಿಸಿತ್ತು.

ಮ್ಯಾನೇಜಿಂಗ್ ಡೈರೆಕ್ಟರ್ ಗಳು ಅಥವಾ ಸಿಇಒಗಳು ವೈಯಕ್ತಿಕ ಖಾತ್ರಿ

ಮ್ಯಾನೇಜಿಂಗ್ ಡೈರೆಕ್ಟರ್ ಗಳು ಅಥವಾ ಸಿಇಒಗಳು ವೈಯಕ್ತಿಕ ಖಾತ್ರಿ

ಟೆಲಿಕಾಂ ಕಂಪೆನಿಗಳ ಮ್ಯಾನೇಜಿಂಗ್ ಡೈರೆಕ್ಟರ್ ಗಳು ಅಥವಾ ಸಿಇಒಗಳು ಇನ್ನು ನಾಲ್ಕು ವಾರದೊಳಗೆ ವೈಯಕ್ತಿಕ ಖಾತ್ರಿ ನೀಡಬೇಕು ಎಂದು ಪೀಠವು ಸೂಚಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಒಂದು ವೇಳೆ ಕಂತಿನ ಮೊತ್ತ ಪಾವತಿಸದಿದ್ದರೆ ಅದಕ್ಕೆ ದಂಡ, ಬಡ್ಡಿ ಹಾಗೂ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಕೂಡ ಕೋರ್ಟ್ ತಿಳಿಸಿದೆ.

1.6 ಲಕ್ಷ ಕೋಟಿ ರುಪಾಯಿ ಬಾಕಿ

1.6 ಲಕ್ಷ ಕೋಟಿ ರುಪಾಯಿ ಬಾಕಿ

2019ರ ಅಕ್ಟೋಬರ್ ನಲ್ಲಿ ಇದೇ ಪೀಠ ನೀಡಿದ ತೀರ್ಪಿನಲ್ಲಿ ಟೆಲಿಕಾಂ ಇಲಾಖೆ ನಿಲುವನ್ನು ಬೆಂಬಲಿಸಿತ್ತು. ನಾನ್- ಕೋರ್ ಐಟಮ್ ಗಳಿಗೆ ವ್ಯಾಖ್ಯಾನವನ್ನು ವಿಸ್ತರಿಸಿತ್ತು. ಲೈಸೆನ್ಸ್ ಶುಲ್ಕ, ಸ್ಪೆಕ್ಟ್ರಮ್ ಬಳಕೆ ಶುಲ್ಕ, ಬಡ್ಡಿ ಹಾಗೂ ದಂಡ ಸೇರಿ 1.6 ಲಕ್ಷ ಕೋಟಿ ರುಪಾಯಿ ಬಾಕಿ ಪಾವತಿಸಬೇಕಿತ್ತು.

ಎನ್ ಸಿಎಲ್ ಟಿಗೆ ತೀರ್ಮಾನವನ್ನು ಬಿಡಲಾಗಿದೆ

ಎನ್ ಸಿಎಲ್ ಟಿಗೆ ತೀರ್ಮಾನವನ್ನು ಬಿಡಲಾಗಿದೆ

ವೊಡಾಫೋನ್ ಐಡಿಯಾ ಈ ತನಕ 7,854 ಕೋಟಿ ರುಪಾಯಿ, ಏರ್ ಟೆಲ್ 18 ಸಾವಿರ ಕೋಟಿ ರುಪಾಯಿ ಪಾವತಿಸಿದೆ. ರಿಲಯನ್ಸ್ ಜಿಯೋ 2016ರಿಂದ ಆರಂಭವಾಗಿದ್ದು, ಅದರ ಮೇಲೆ ಎಜಿಆರ್ ಬಾಕಿ ಪಾವತಿ ದೊಡ್ಡ ಪರಿಣಾಮ ಬೀರಿಲ್ಲ. ಅದು 195 ಕೋಟಿ ರುಪಾಯಿ ಬಾಕಿ ಪಾವತಿಸಿದೆ. ಇನ್ನು ಎಜಿಆರ್ ಬಾಕಿ ಪಾವತಿಸದ ಹೊರತು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ ದಿವಾಳಿ ಪ್ರಕ್ರಿಯೆಗೆ ಒಪ್ಪಿಗೆ ನೀಡಲು ಆಗಲ್ಲ ಎಂದು ಸರ್ಕಾರ ತಿಳಿಸಿದೆ. ಇನ್ನು ಸುಪ್ರೀಂ ಕೋರ್ಟ್ ನಿಂದ ತೀರ್ಮಾನವನ್ನು ಎನ್ ಸಿಎಲ್ ಟಿಗೆ ಬಿಡಲಾಗಿದೆ.

English summary

AGR Verdict : Supreme Court Orders Telecoms To Pay AGR Dues In 10 Years

Supreme Court orders that, telco companies to pay AGR dues in 10 years. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X