ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗ ಜಾಲಗಳಲ್ಲಿ 96-ಗಂಟೆಗಳ ಮಾರಾಟವನ್ನು ಆರಂಭ ಮಾಡಿದೆ. ದೇಶೀಯ ಮಾರ್ಗಗಳಲ್ಲಿ ಇಕಾನಮಿ ಕ್ಲಾಸ್‌ನಲ್ಲಿ ಕಡಿಮೆ ಎಂದರೆ 1,470 ರೂಪಾಯಿ, ಬ್ಯುಜಿನೆಸ್ ಕ್ಲಾಸ್‌ಗೆ 10,130 ರೂಪಾಯಿಯಿಂದ ಟಿಕೆಟ್ ದರ ಆರಂಭವಾಗುತ್ತದೆ. ಟಾಟಾ ಗ್ರೂಪ್-ಮಾಲೀಕತ್ವದ ಕಂಪನಿಯು ಆಯ್ದ ಅಂತಾರಾಷ್ಟ್ರೀಯ ಮಾರ್ಗಗಳಿಗೆ ಇದೇ ದರದಲ್ಲಿ ಟಿಕೆಟ್ ನೀಡುತ್ತಿದೆ.
ಏರ್ ಇಂಡಿಯಾ ವೆಬ್‌ಸೈಟ್ (airindia.com) ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಮಾರಾಟದ ಅಡಿಯಲ್ಲಿ ಮಾಡಿದ ಎಲ್ಲಾ ಬುಕಿಂಗ್‌ಗಳು ಕನ್‌ವಿನೆನ್ಸ್ ಶುಲ್ಕದಿಂದ ಮುಕ್ತವಾಗಿದೆ ಎಂಬುದನ್ನು ಪ್ರಯಾಣಿಕರು ಗಮನಿಸಬೇಕು. ಏರ್ ಇಂಡಿಯಾದ ಫ್ಲೈಯಿಂಗ್ ರಿಟರ್ನ್ಸ್ ಸದಸ್ಯರು ಎಲ್ಲಾ ಟಿಕೆಟ್‌ಗಳಲ್ಲಿ ಡಬಲ್ ಲಾಯಲ್ಟಿ ಬೋನಸ್ ಪಾಯಿಂಟ್ ಗಳಿಸಬಹುದು.

ಕೆಲವು ಪ್ರಮುಖ ವಿವರಗಳು ಇಲ್ಲಿವೆ:
* ಏರ್ ಇಂಡಿಯಾ ಆಯ್ದ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಲ್ಲಿ 96 ಗಂಟೆಗಳ ಟಿಕೆಟ್ ಸೇಲ್ಸ್ ಆಫರ್ ಪ್ರಾರಂಭಿಸಿದೆ
* ಏರ್‌ಲೈನ್ ಸೆಪ್ಟೆಂಬರ್ 1 ಮತ್ತು ಅಕ್ಟೋಬರ್ 31, 2023 ರ ನಡುವಿನ ಪ್ರಯಾಣಕ್ಕಾಗಿ ರಿಯಾಯಿತಿ ಟಿಕೆಟ್‌ಗಳನ್ನು ನೀಡುತ್ತಿದೆ.
* ದೇಶೀಯ ಮಾರ್ಗಗಳಲ್ಲಿ, ಏಕಮುಖ ಪ್ರಯಾಣದ ದರವು ಎಕಾನಮಿ ಕ್ಲಾಸ್‌ಗೆ 1,470 ರೂಪಾಯಿ ಮತ್ತು ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳಿಗೆ 10,130 ರೂಪಾಯಿಯಿಂದ ಪ್ರಾರಂಭವಾಗುತ್ತದೆ.
* ಆಯ್ದ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿಯೂ ರಿಯಾಯಿತಿ ದರಗಳು ಲಭ್ಯವಿರುತ್ತವೆ.
* ಏರ್ ಇಂಡಿಯಾ ವೆಬ್‌ಸೈಟ್ - airindia.com - ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಮಾರಾಟದ ಅವಧಿಯಲ್ಲಿ ಮಾಡಿದ ಎಲ್ಲಾ ಬುಕಿಂಗ್‌ಗಳು ಕನ್‌ವಿನಿಯನ್ಸ್ (convenience) ಶುಲ್ಕದಿಂದ ಮುಕ್ತವಾಗಿರುತ್ತವೆ.
* ಏರ್ ಇಂಡಿಯಾದ ಫ್ಲೈಯಿಂಗ್ ರಿಟರ್ನ್ಸ್ ಸದಸ್ಯರಿಗೆ ಅಂತಹ ಎಲ್ಲಾ ಟಿಕೆಟ್‌ಗಳಿಗೆ ಡಬಲ್ ಲಾಯಲ್ಟಿ ಬೋನಸ್ ಅಂಕಗಳನ್ನು ನೀಡಲಾಗುತ್ತದೆ.
* ಆಗಸ್ಟ್ 17 ರಂದು ಈ ಆಫರ್ ಬುಕ್ಕಿಂಗ್ ಆರಂಭವಾಗಿದ್ದು, ಒಟ್ಟಾಗಿ ನಾಲ್ಕು ದಿನಗಳು ಇರಲಿದೆ. ಸೆಪ್ಟೆಂಬರ್ 1, 2023 ಮತ್ತು ಅಕ್ಟೋಬರ್ 31, 2023 ರ ನಡುವಿನ ಪ್ರಯಾಣಕ್ಕಾಗಿ ಆಗಸ್ಟ್ 20, 2023 ರಂದು ರಾತ್ರಿ 11.59 ರವರೆಗೆ ಬುಕ್ಕಿಂಗ್ ಮಾಡಬಹುದು.
* ಪ್ರಯಾಣದ ಅವಧಿಯುದ್ದಕ್ಕೂ ಬ್ಲ್ಯಾಕ್‌ಔಟ್ ದಿನಾಂಕಗಳು ಅನ್ವಯಿಸುತ್ತವೆ.
ನೇರ ಚಾನೆಲ್ ಬುಕಿಂಗ್‌ಗೆ ಸಂಬಂಧಿಸಿದ ವಿಶೇಷ ಪ್ರಯೋಜನಗಳಿಲ್ಲದೆ ಅಧಿಕೃತ ಟ್ರಾವೆಲ್ ಏಜೆಂಟ್‌ಗಳು ಮತ್ತು ಆನ್‌ಲೈನ್ ಟ್ರಾವೆಲ್ ಏಜೆಂಟ್‌ಗಳ (OTAs) ಮೂಲಕ ಮಾಡಿದ ಬುಕಿಂಗ್ ಸಹ ರಿಯಾಯಿತಿ ಟಿಕೆಟ್‌ಗಳಿಗೆ ಅರ್ಹವಾಗಿರುತ್ತದೆ ಎಂದು ಏರ್‌ಲೈನ್ಸ್ ಸ್ಪಷ್ಟಪಡಿಸಿದೆ.


Click it and Unblock the Notifications