For Quick Alerts
ALLOW NOTIFICATIONS  
For Daily Alerts

"ಏರ್ ಇಂಡಿಯಾ ಖರೀದಿಗೆ AI ಸಿಬ್ಬಂದಿಯಿಂದಲೇ ಬಿಡ್ಡಿಂಗ್"

|

90,000 ಕೋಟಿ ರುಪಾಯಿ ಸಾಲದಲ್ಲಿ ಸಿಲುಕಿರುವ ಏರ್ ಇಂಡಿಯಾ ಖರೀದಿಗೆ ಏರ್ ಇಂಡಿಯಾದ ಕೆಲವು ಸಿಬ್ಬಂದಿಯೇ ಹಣಕಾಸು ಸಹಭಾಗಿಗಳ ಜತೆಗೆ ಸೇರಿಕೊಂಡು, ಎದುರು ನೋಡುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಂದ ಹಾಗೆ ಏರ್ ಇಂಡಿಯಾದಲ್ಲಿನ ಬಂಡವಾಳ ಹಿಂತೆಗೆತಕ್ಕೆ ಸರ್ಕಾರ ಮುಂದಾಗಿದ್ದು, ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಇದು ಮುಂದಕ್ಕೆ ಹೋಗಿದೆ.

 

ಯೋಜನೆ ಪ್ರಕಾರ, 51 ಪರ್ಸೆಂಟ್ ಷೇರು ಖರೀದಿಗಾಗಿ ಯಾವೊಬ್ಬ ಸಿಬ್ಬಂದಿಯೂ 1 ಲಕ್ಷ ರುಪಾಯಿಗಿಂತ ಹೆಚ್ಚು ಹಣ ಹಾಕುವ ಅಗತ್ಯ ಇಲ್ಲ. ಇನ್ನು ಹೂಡಿಕೆದಾರರದು 49 ಪರ್ಸೆಂಟ್ ಇರುತ್ತದೆ ಎಂದು ವರದಿ ಆಗಿದೆ.

 

ಸಂಬಳ ಕಡಿತ ತಾರತಮ್ಯ: ಏರ್ ಇಂಡಿಯಾ ಎಂಡಿಗೆ ಪೈಲಟ್‌ಗಳ ಪತ್ರಸಂಬಳ ಕಡಿತ ತಾರತಮ್ಯ: ಏರ್ ಇಂಡಿಯಾ ಎಂಡಿಗೆ ಪೈಲಟ್‌ಗಳ ಪತ್ರ

ಆಂತರಿಕವಾಗಿ ಹರಿದಾಡುತ್ತಿರುವ ಮಾಹಿತಿಯಂತೆ, ಸಿಬ್ಬಂದಿ ಗುಂಪಿನಿಂದ ಖಾಸಗಿ ಈಕ್ವಿಟಿ (PE) ಫಂಡ್ ಅನ್ನು ಹೂಡಿಕೆಗಾಗಿ ಕೇಳಲಾಗಿದೆ (51 ಪರ್ಸೆಂಟ್ ಸಿಬ್ಬಂದಿ ಮತ್ತು 49 ಪರ್ಸೆಂಟ್ ಹೂಡಿಕೆದಾರರು). ಏಕೆಂದರೆ, ಈ ಬಿಡ್ ನಲ್ಲಿ ಭಾಗವಹಿಸುವುದಕ್ಕೆ ಪ್ರತ್ಯೇಕವಾಗಿ ಹಣ ಇಲ್ಲ ಎಂಬ ಕಾರಣಕ್ಕೆ ಈ ಹೆಜ್ಜೆ ಇಡಲಾಗಿದೆ.

ಇನ್ನು ಇದೇ ವೇಳೆ, ಸಿಬ್ಬಂದಿಗೆ ಆಸಕ್ತಿ ವ್ಯಕ್ತಪಡಿಸುವಿಕೆ (EoI) ಪ್ರಕ್ರಿಯೆ ತನಕ ಹಣದ ಅಗತ್ಯ ಇದೆ. " ಮೊದಲ ಹಂತ ಪೂರ್ತಿಯಾದ ಮೇಲೆ, ಯಾವುದೇ ಒಬ್ಬ ಸಿಬ್ಬಂದಿ 1 ಲಕ್ಷ ರುಪಾಯಿಗಿಂತ ಹೆಚ್ಚು ಹಣ ಹಾಕುವ ಅಗತ್ಯ ಇರಬಾರದು ಎಂಬಂತೆ ಯೋಜನೆ ರೂಪಿಸಲಾಗುತ್ತಿದೆ," ಎಂದು ತಿಳಿದುಬಂದಿದೆ.

ಇತರ ಬಿಡ್ಡರ್ ಗಳ ಪೈಕಿ ಮಹಾರಾಜ ಸ್ಥಾಪಕರು, ಟಾಟಾ ಗ್ರೂಪ್ ಸಹ ಇವೆ. ಬಿಡ್ ಸಲ್ಲಿಸುವುದಕ್ಕೆ ಡಿಸೆಂಬರ್ 14 ಕೊನೆ ದಿನ. ಅರ್ಹತೆ ಪಡೆದ ಬಿಡ್ಡರ್ ಗಳಿಗೆ ಅವರ ಆಫರ್ ಬಗ್ಗೆ ಡಿಸೆಂಬರ್ 28ರೊಳಗೆ ಮಾಹಿತಿ ದೊರೆಯುತ್ತದೆ. ಕೊರೊನಾ ಬಿಕ್ಕಟ್ಟು ಅನ್ನೋ ಕಾರಣಕ್ಕೆ ಇನ್ನಷ್ಟು ತಡ ಅಥವಾ ಕಾಲಾವಧಿ ವಿಸ್ತರಣೆ ಆಗುವುದಿಲ್ಲ.

English summary

Air India Employees Planning To Bid For National Carrier: Report

Employees of Air India planning to bid for national carrier with financial partnership, according to report.
Story first published: Thursday, December 3, 2020, 9:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X