ಗುಜರಾತ್‌ನ ಅಹಮದಾಬಾದ್‌ನಲ್ಲಿ ದೇಶವನ್ನೇ ಬೆಚ್ಚಿಬೀಳಿಸುವ ವಿಮಾನ ಅಪಘಾತ ಸಂಭವಿಸಿದೆ. ಅಹಮದಾಬಾದ್‌ನಲ್ಲಿ 247 ಪ್ರಯಾಣಿಕರುನ್ನು ಹೊತ್ತು ಹೋದ ಏರ್ ಇಂಡಿಯಾ ವಿಮಾನ ಅಪಘಾತವು ದೇಶಾದ್ಯಂತ ತೀವ್ರ ದುಃಖವನ್ನುಂಟು ಮಾಡಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಈ ಸಂದರ್ಭದಲ್ಲಿ ವಿಮಾನ ಪ್ರಯಾಣ ವಿಮೆ ನಿಮ್ಮ ಕಷ್ಟಕ್ಕೆ ಬರುತ್ತದೆ. ಹಾಗಿದ್ದರೆ ಪ್ರಯಾಣ ವಿಮೆ ಏಕೆ ಅಗತ್ಯ? ವಿಮೆಯ ಪ್ರಯೋಜನಗಳೇನು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಏರ್ ಇಂಡಿಯಾ ವಿಮಾನ ಅಪಘಾತ
ತೆರಳಬೇಕಿದ್ದ, ಏರ್ ಇಂಡಿಯಾ ವಿಮಾನವು ಏರ್‍ಪೋರ್ಟ್ ಬಳಿಯಲ್ಲಿಯೇ ಅಪಘಾತಕ್ಕೀಡಾಗಿದೆ. ಈ ವಿಮಾನ ಮಧ್ಯಾಹ್ನ 1.39 ಕ್ಕೆ ಪತನಗೊಂಡಿತು. ವಿಮಾನದಲ್ಲಿ 242 ಪ್ರಯಾಣಿಕರು, 2 ಪೈಲಟ್‌ಗಳು ಮತ್ತು 10 ವಿಮಾನ ಸಿಬ್ಬಂದಿ ಇದ್ದರು ಎಂದು ವರದಿಗಳು ಆಗಿವೆ. ವಿಮಾನಯಾನ ಸಂಸ್ಥೆಗಳು ಬಹಳ ಎಚ್ಚರಿಕೆಯಿಂದ ವಿಮಾನಗಳನ್ನು ನಿರ್ವಹಿಸುತ್ತವೆ. ಎಲ್ಲಾ ಸುರಕ್ಷತಾ ಪರಿಶೀಲನೆಗಳು ಪೂರ್ಣಗೊಂಡ ನಂತರವೇ ವಿಮಾನವು ಟೇಕ್ ಆಫ್ ಆಗುತ್ತದೆ. ಆದರೂ ಸಹ ದುರಂತ ನಡೆದೆ ಹೋಗಿದೆ.

ಪ್ರಯಾಣ ವಿಮೆ
ಅನಿರೀಕ್ಷಿತ ವಿಮಾನ ಅಪಘಾತಗಳು ಸಂಭವಿಸಿದಾಗ ನಿಮ್ಮಗೆ ಪ್ರಯಾಣ ವಿಮಾ ಯೋಜನೆಗಳು ಸೂಕ್ತವಾಗಿ ಬರುತ್ತವೆ. ವಿಮಾನ ಅಪಘಾತಗಳು ಸಂಭವಿಸುವುದು ಅತಿ ವಿರಳ ಅದರೆ ಅದರಿಂದಾಗುವ ನಷ್ಟಗಳು ದೊಡ್ಡದಾಗಿರಬಹುದು. ಆದ್ದರಿಂದ, ವಿಮಾನದಲ್ಲಿ ಪ್ರಯಾಣಿಸುವವರು ಪ್ರಯಾಣ ವಿಮೆಯನ್ನು ತೆಗೆದುಕೊಳ್ಳವುದು ಬಹಳ ಮುಖ್ಯ.
ಪ್ರಯಾಣ ವಿಮೆ ಏಕೆ ಅಗತ್ಯ..?
ನಾವು ವಿಮಾನ ಪ್ರಯಾಣವನ್ನು ಮಾಡುವಾಗ ಸಾಮಾನ್ಯವಾಗಿ ಟಿಕೆಟ್ ಬುಕ್ ಮಾಡುವಾಗ, ವಿಮೆಯನ್ನು ಸೇರಿಸಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ, ಆದರೆ ಅದು ಅನಗತ್ಯ ಎಂದು ನಾವು ಅದನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ಆ ಸಮಯದಲ್ಲಿ ನಾವು ವಿಮೆಗಾಗಿ ಪಾವತಿಸುವ ಸಣ್ಣ ಮೊತ್ತವು ಅಂತಹ ಅಪಘಾತಗಳಲ್ಲಿ ನಮಗೆ ಹೆಚ್ಚಿನ ಸಹಾಯ ಮಾಡುತ್ತದೆ. ವಿಮಾನದಲ್ಲಿ ಆಗಾಗ್ಗೆ ಪ್ರಯಾಣಿಸುವವರು ಖಂಡಿತವಾಗಿಯೂ ಪ್ರಯಾಣ ವಿಮೆಯನ್ನು ತೆಗೆದುಕೊಳ್ಳುವುದಂತೂ ಬಹಳ ಮುಖ್ಯ
ವಿಮಾನಯಾನ ಸಂಸ್ಥೆಗಳು ಏನು ಮಾಡುತ್ತವೆ?
ಭಾರತದಲ್ಲಿ, ಮಾಂಟ್ರಿಯಲ್ ಕನ್ವೆನ್ಷನ್ 1999 ರ ಪ್ರಕಾರ ವಿಮಾನ ಅಪಘಾತಗಳಿಂದ ಉಂಟಾಗುವ ಸಾವು ಅಥವಾ ಗಾಯಗಳಿಗೆ ವಿಮಾನಯಾನ ಸಂಸ್ಥೆಗಳು ಪರಿಹಾರವನ್ನು ನೀಡಬೇಕಾಗುತ್ತದೆ. ವಿಶೇಷ ಹಕ್ಕುಗಳ ಆಧಾರದ ಮೇಲೆ ವಿಮಾನಯಾನ ಸಂಸ್ಥೆಯು ಸಾವು ಅಥವಾ ಗಾಯಕ್ಕಾಗಿ ಪ್ರತಿ ಪ್ರಯಾಣಿಕರಿಗೆ 1.4 ಕೋಟಿ ರೂ.ಗಳನ್ನು ಪಾವತಿಸುತ್ತದೆ. ವಿಮಾನಯಾನ ಸಂಸ್ಥೆಯ ದೋಷದಿಂದ ಅಪಘಾತ ಸಂಭವಾದ್ದರೆ ಪರಿಹಾರದ ಮೊತ್ತ ಇನ್ನೂ ಹೆಚ್ಚಾಗುತ್ತದೆ. ಇದು ಅಂತರರಾಷ್ಟ್ರೀಯ ವಿಮಾನಗಳಿಗೆ ಅನ್ವಯವಾಗುತ್ತದೆ.ದೇಶೀಯ ವಿಮಾನಗಳು ಭಾರತೀಯ ನಾಗರಿಕ ವಿಮಾನಯಾನ ಪ್ರಾಧಿಕಾರದ ನಿಯಮಗಳ ಪ್ರಕಾರ ಪರಿಹಾರವನ್ನು ಬದಲಾಯಿಸಬಹುದು.
ವಿಮಾ ಯೋಜನೆಗಳು ನಮಗೆ ಈ ಕೆಳಗಿನವುಗಳಿಗೆ ಪರಿಹಾರವನ್ನು ಒದಗಿಸುತ್ತವೆ. ಪ್ರಯಾಣ ವಿಮೆಯು ಸಾಮಾನ್ಯವಾಗಿ ಒದಗಿಸುವ ಪರಿಹಾರಗಳು:
ಅಪಘಾತ ಸಾವು: 25 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳವರೆಗೆ ಪರಿಹಾರವನ್ನು ನೀಡುತ್ತದೆ.
ಶಾಶ್ವತ ದೈಹಿಕ ಅಂಗವೈಕಲ್ಯ: 5 ಲಕ್ಷದಿಂದ 10 ಲಕ್ಷ
ಆಸ್ಪತ್ರೆ ಚಿಕಿತ್ಸಾ ವೆಚ್ಚಗಳು ತನ್ನ ವಹಿಸಿಕೊಳ್ಳತ್ತದೆ.
ಈ ಪರಿಹಾರ ಮೊತ್ತಗಳು ನಾವು ತೆಗೆದುಕೊಳ್ಳುವ ಪ್ರಯಾಣ ವಿಮೆ ಮತ್ತು ಅದಕ್ಕೆ ನಾವು ಪಾವತಿಸುವ ಪ್ರೀಮಿಯಂ ಮೊತ್ತದ ಮೇಲೆ ಅವಲಂಭನೆಯಾಗಿರುತ್ತದೆ.
ಆರ್ಥಿಕ ರಕ್ಷಣೆ:
ಪ್ರಯಾಣ ವಿಮೆ ಹೊಂದಿರುವ ವ್ಯಕ್ತಿಯು ವಿಮಾನ ಅಪಘಾತದಲ್ಲಿ ಮರಣಹೊಂದಿದರೆ, ವಿಮೆಯ ಮೂಲಕ ಅವರ ಕುಟುಂಬಕ್ಕೆ ಒಂದು ಮೊತ್ತದ ಹಣ ಹೋಗುತ್ತದೆ. ಅವರು ಕೆಲಸ ಮಾಡಲು ಸಾಧ್ಯವಾಗದಷ್ಟು ದೈಹಿಕವಾಗಿ ಅಂಗವಿಕಲರಾಗಿದ್ದರೂ ಸಹ, ಗಣನೀಯ ಮೊತ್ತವು ಸೂಕ್ತವಾಗಿ ಬರುತ್ತದೆ. ಆ ಸಮಯದಲ್ಲಿ, ಆರ್ಥಿಕ ಒತ್ತಡವನ್ನು ಎದುರಿಸದೆ ನಾವು ಚಿಕಿತ್ಸೆಯತ್ತ ಗಮನಕೊಡಬೇಕಾಗುತ್ತದೆ.
ಸರ್ಕಾರಿ ಪರಿಹಾರ
ವಿಮಾನ ಅಪಘಾತಗಳಲ್ಲಿ, ಸರ್ಕಾರ ಮತ್ತು ವಿಮಾನಯಾನ ಸಂಸ್ಥೆಗಳು ಪರಿಹಾರವನ್ನು ಒದಗಿಸುತ್ತವೆ. ಆದರೆ ಇದು ಒಂದು ನಿರ್ದಿಷ್ಟ ಮೊತ್ತಕ್ಕೆ ಸೀಮಿತವಾಗಿರುತ್ತದೆ. ಆದ್ದರಿಂದ, ಆಗಾಗ್ಗೆ ವಿಮಾನ ಹಾರಾಟ ನಡೆಸುವವರಿಗೆ ಪ್ರಯಾಣ ವಿಮೆಯನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಇದು ಅವರಿಗೆ ಆರ್ಥಿಕ ಸಹಾಯವನ್ನು ನೀಡುತ್ತದೆ.
ವಿಮಾನ ವಿಮೆಯಲ್ಲಿ ಏನನ್ನು ಪರಿಗಣಿಸಬೇಕು..?
ನೀವು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರಯಾಣ ವಿಮೆಯನ್ನು ತೆಗೆದುಕೊಳ್ಳುವುದು ಉತ್ತಮ.ವಿಮಾನ ಪ್ರಯಾಣ ವಿಮೆ ಪಡೆಯುವ ಮೊದಲು, ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ವಿಮೆಯನ್ನು ತೆಗೆದುಕೊಳ್ಳುವಾಗ, ಪರಿಗಣಿಸಬೇಕಾದ ಕೆಲವು ವಿಷಯಗಳು ಹೀಗೆ ಇವೆ.. ನಿಮಗೆ ಎಷ್ಟು ಕವರೇಜ್ ಸಿಗುತ್ತದೆ ಎಂಬುದನ್ನು ನೀವು ನೋಡಬೇಕು. ನಂತರ ಮರಣ ಮತ್ತು ವೈದ್ಯಕೀಯ ವೆಚ್ಚಗಳಿಗೆ ವಿಮೆಯನ್ನು ಒದಗಿಸುವ ಯೋಜನೆಯನ್ನು ಆಯ್ಕೆ ಮಾಡುವುದು ಉತ್ತಮ. ನಾಮಿನಿ ವಿವರಗಳನ್ನು ಸ್ಪಷ್ಟವಾಗಿ ತಿಳಿಸಿರಬೇಕು. ಪಾಲಿಸಿ ದಾಖಲೆಗಳನ್ನು ನಮ್ಮ ಕುಟುಂಬಕ್ಕೆ ಡಿಜಿಟಲ್ ರೂಪದಲ್ಲಿ ಕಳಿಸಬೇಕು.
ಈ ಎಲ್ಲಾ ಅಂಶಗಳನ್ನು ವಿಮೆ ಮಾಡಿಸುವಾಗ ಗಮನಿಸಬೇಕು.
ವಿಮಾನ ಪ್ರಯಾಣ ವಿಮೆಯ ಪ್ರಯೋಜನಗಳು
ವಿಮಾನ ಪ್ರಯಾಣ ವಿಮೆಯು ಪ್ರಯಾಣಿಕರಿಗೆ ಹಲವಾರು ವಿಧಗಳಲ್ಲಿ ಉಪಯುಕ್ತವಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳು ಇಲ್ಲಿವೆ
ವಿಮಾನ ವಿಳಂಬ ಮತ್ತು ರದ್ದತಿ: ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ಕಾರಣಗಳಿಂದ ವಿಮಾನ ವಿಳಂಬವಾದರೆ ಅಥವಾ ರದ್ದಾದರೆ, ವಿಮಾ ಕಂಪೆನಿಯು ಹೋಟೆಲ್ ವೆಚ್ಚ ಮತ್ತು ಊಟೋಪಚಾರದಂತಹ ಹೆಚ್ಚುವರಿ ಖರ್ಚುಗಳನ್ನು ಬೀಡುತ್ತದೆ
ಲಗೇಜ್ ಕಳೆದು ಹೋದರೆ: ಪ್ರಯಾಣದ ವೇಳೆ ಲಗೇಜ್ ಕಳೆದು ಹೋದರೆ ಅಥವಾ ಹಾನಿಯಾದರೆ, ವಿಮೆಯು ಅದರ ಮೌಲ್ಯವನ್ನು ಭರಿಸುತ್ತದೆ. ಇದರಿಂದ ಪ್ರಯಾಣಿಕರಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ಕಡಿಮೆಯಾಗುತ್ತದೆ.
ವೈದ್ಯಕೀಯ ನೆರವು: ವಿದೇಶದಲ್ಲಿ ಪ್ರಯಾಣಿಸುವಾಗ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ, ವಿಮಾ ಕಂಪೆನಿಯು ಆಸ್ಪತ್ರೆಗೆ ದಾಖಲಾಗುವ ವೆಚ್ಚ ಮತ್ತು ವೈದ್ಯಕೀಯ ಚಿಕಿತ್ಸೆಯ ಖರ್ಚನ್ನು ನೀಡುತ್ತದೆ.
ಪಾಸ್‌ಪೋರ್ಟ್ ಕಳೆದು ಹೋದರೆ: ಒಂದು ವೇಳೆ ವಿದೇಶದಲ್ಲಿ ಪಾಸ್‌ಪೋರ್ಟ್ ಕಳೆದು ಹೋದರೆ, ಹೊಸ ಪಾಸ್‌ಪೋರ್ಟ್ ಪಡೆಯಲು ತಗಲುವ ವೆಚ್ಚವನ್ನು ಸಹ ನೀಡುತ್ತದೆ.
ವೈಯಕ್ತಿಕ ಅಪಘಾತಗಳು: ಪ್ರಯಾಣದ ಸಮಯದಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ, ವಿಮೆಯು ಆರ್ಥಿಕ ಸಹಾಯವನ್ನು ನೀಡುತ್ತದೆ. ಗಂಭೀರ ಗಾಯಗಳು ಅಥವಾ ಅಂಗವೈಕಲ್ಯ ಉಂಟಾದ ಸಂದರ್ಭದಲ್ಲಿ ಬಹಳ ಆರ್ಥಿರ ನೆರವು ಒದಗಿಸುತ್ತದೆ.


Click it and Unblock the Notifications