For Quick Alerts
ALLOW NOTIFICATIONS  
For Daily Alerts

ಜೂನ್ 30ರ ತನಕ ಭಾರತ- ಚೀನಾ ಮಧ್ಯೆ ಏರ್ ಇಂಡಿಯಾ ವಿಮಾನ ಇಲ್ಲ

|

ಈ ವರ್ಷದ ಜೂನ್ 30ನೇ ತಾರೀಕಿನ ತನಕ ಚೀನಾ ದೇಶಕ್ಕೆ ಯಾವುದೇ ವಿಮಾನ ಹಾರಾಟ ನಡೆಸದಿರುವುದಕ್ಕೆ ಏರ್ ಇಂಡಿಯಾ ತೀರ್ಮಾನಿಸಿದೆ. ಈ ಬಗ್ಗೆ ಗುರುವಾರ ಘೋಷಣೆ ಕೂಡ ಮಾಡಿದೆ. ಚೀನಾದಲ್ಲಿ ಕೊರೊನೊ ವೈರಾಣು ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದು, ಚೀನಿ ಅಧಿಕಾರಿಗಳು ರೋಗವನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಜನವರಿ 31ರಿಂದ ಫೆಬ್ರವರಿ 14ರ ತನಕ ದೆಹಲಿ- ಶಾಂಘೈ ಮಧ್ಯದ ಎಲ್ಲ ವಿಮಾನ ಹಾರಾಟವನ್ನು ಏರ್ ಇಂಡಿಯಾ ರದ್ದು ಮಾಡಿತ್ತು. ಆದರೆ ಫೆಬ್ರವರಿ 15ನೇ ತಾರೀಕಿನಿಂದ ಕೂಡ ಸೇವೆ ಪುನರಾರಂಭ ಮಾಡಲಿಲ್ಲ. ಅಷ್ಟೇ ಅಲ್ಲ, ಕೊರೊನಾ ಭೀತಿಯಿಂದಲೇ ದೆಹಲಿ- ಹಾಂಕಾಂಗ್ ಮಧ್ಯದ ವಿಮಾನ ಹಾರಾಟವನ್ನೂ ರದ್ದು ಮಾಡಿತು.

ಕೊರೊನಾ ವೈರಸ್ ಎಫೆಕ್ಟ್; 3 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು ತೈಲ ಬೆಲೆಕೊರೊನಾ ವೈರಸ್ ಎಫೆಕ್ಟ್; 3 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು ತೈಲ ಬೆಲೆ

ಅಂದ ಹಾಗೆ, ದೆಹಲಿ- ಶಾಂಘೈ ಮಧ್ಯೆ ವಾರದಲ್ಲಿ ಆರು ವಿಮಾನಗಳು ಹಾರಾಟ ಬಡೆಸುತ್ತಿದ್ದವು. ಆದರೆ ಯಾವಾಗ ಮಾರಕ ಸಾಂಕ್ರಾಮಿಕ ರೋಗ ಕೊರೊನಾಗೆ ಚೀನಾದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾದರೋ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಜೂನ್ 30ರ ತನಕ ಭಾರತ- ಚೀನಾ ಮಧ್ಯೆ ಏರ್ ಇಂಡಿಯಾ ವಿಮಾನ ಇಲ್ಲ

"ದೆಹಲಿ- ಶಾಂಘೈ, ದೆಹಲಿ- ಹಾಂಕಾಂಗ್ ಮಧ್ಯ ವಿಮಾನ ಹಾರಾಟವನ್ನು ಜೂನ್ 30ನೇ ತಾರೀಕಿನ ತನಕ ರದ್ದು ಮಾಡಲಾಗಿದೆ" ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಇಂಡಿಗೋ ಮತ್ತು ಸ್ಪೈಸ್ ಜೆಟ್ ನಿಂದ ಭಾರತ ಹಾಗೂ ಚೀನಾ ಮಧ್ಯದ ವಿಮಾನ ಹಾರಾಟ ನಿಲ್ಲಿಸಲಾಗಿತ್ತು.

English summary

Air India Suspended Flights Between Delhi- China Till June 30th

Corona virus effect: Air India suspended all flights between Delhi- China, Delhi- Shanghai till June 30th.
Story first published: Thursday, February 20, 2020, 20:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X