For Quick Alerts
ALLOW NOTIFICATIONS  
For Daily Alerts

ಸಾವಿರಾರು ಕೋಟಿ ನಷ್ಟ ಅನುಭವಿಸಿದರೂ, ಷೇರುಪೇಟೆಯಲ್ಲಿ ಏರ್‌ಟೆಲ್‌ ಹವಾ

|

ಗುರುವಾರ(ನವೆಂಬರ್ 14) ಸಾವಿರಾರು ಕೋಟಿ ರುಪಾಯಿ ನಷ್ಟ ತೋರಿಸಿದ್ದ ದೇಶದ 2ನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್‌ ಶುಕ್ರವಾರ(ನವೆಂಬರ್ 15) ಷೇರುಪೇಟೆಯಲ್ಲಿ ತಲ್ಲಣವನ್ನೇ ಮೂಡಿಸಿದೆ. ಶೇಕಡಾ 9ರಷ್ಟು ಏರಿಕೆಯಾದ ಏರ್‌ಟೆಲ್‌ ಷೇರುಗಳು ದಿನದಲ್ಲಿ ಅತಿ ಹೆಚ್ಚು ಹಣ ಮರುಸಂಪಾದಿಸಿದ ಕಂಪನಿಯಾಗಿ ಹೊರಹೊಮ್ಮಿದೆ

 

74,000 ಕೋಟಿ ರುಪಾಯಿ ನಷ್ಟ ಅನುಭವಿಸಿದ ಏರ್‌ಟೆಲ್, ವೋಡಾಫೋನ್, ಐಡಿಯಾ74,000 ಕೋಟಿ ರುಪಾಯಿ ನಷ್ಟ ಅನುಭವಿಸಿದ ಏರ್‌ಟೆಲ್, ವೋಡಾಫೋನ್, ಐಡಿಯಾ

2019-20ರ 2ನೇ ತ್ರೈಮಾಸಿಕ ಅವಧಿಯಲ್ಲಿ ಏರ್‌ಟೆಲ್‌, ವೋಡಾಪೋನ್, ಐಡಿಯಾ ಒಟ್ಟಾರೆ 72,000 ಕೋಟಿ ರುಪಾಯಿ ನಿವ್ವಳ ನಷ್ಟ ಅನುಭವಿಸಿದ್ದಾಗಿ ಘೋಷಿಸಿದ್ದವು. ಅದರಲ್ಲಿ ಏರ್‌ಟೆಲ್ 23,045 ಕೋಟಿ ರುಪಾಯಿ ನಿವ್ವಳ ನಷ್ಟ ಅನುಭವಿಸಿದೆ. ಈ ಘೋಷಣೆ ಬೆನ್ನಲ್ಲೇ ಗುರುವಾರ ಚೀನಿಪೇಟೆಯಲ್ಲಿ ಏರ್‌ಟೆಲ್ ಕಂಪನಿಯ ಷೇರುಗಳು ಶೇಕಡಾ 1.59ರಷ್ಟು ಕುಸಿತ ಕಂಡು ಪ್ರತಿ ಷೇರಿನ ಬೆಲೆ 362.65 ರುಪಾಯಿಗೆ ತಲುಪಿತು.

 
ಸಾವಿರಾರು ಕೋಟಿ ನಷ್ಟ ಅನುಭವಿಸಿದರೂ, ಷೇರುಪೇಟೆಯಲ್ಲಿ ಏರ್‌ಟೆಲ್‌ ಹವಾ

ಆದರೆ ಶುಕ್ರವಾರ ಷೇರುಮಾರುಕಟ್ಟೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಏರಿಕೆ ದಾಖಲಿಸಿರುವ ಏರ್‌ಟೆಲ್ ಕಂಪನಿಯ ಷೇರುಗಳು, ಶೇಕಡಾ 9ರಷ್ಟು ಸಂಪತ್ತನ್ನು ಮರಳಿ ಸಂಪಾದಿಸಿವೆ. ದಿನದ ಆರಂಭದಲ್ಲಿ 362.65 ರುಪಾಯಿಗೆ ದಿನದ ವಹಿವಾಟು ಆರಂಭಿಸಿದ ಏರ್‌ಟೆಲ್ ಸುಮಾರು 30 ರುಪಾಯಿ ಏರಿಕೆಗೊಂಡು 391.80 ರುಪಾಯಿಗೆ ತಲುಪಿದೆ.

ಖ್ಯಾತ ದಲ್ಲಾಳಿ ಸಂಸ್ಥೆ ಯುಬಿಎಸ್ ಏರ್‌ಟೆಲ್ ಷೇರುಗಳ ಮೇಲೆ ಆಶಾದಾಯವನ್ನು ಹೊಂದುವುದರ ಮೂಲಕ ಖರೀದಿಸುವ ಕರೆಯನ್ನು ನೀಡಿತು. ಇದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರನ್ನು ಪ್ರೇರೇಪಿಸಲು ಕಾರಣವಾಗಿ, ಏರ್‌ಟೆಲ್ ಷೇರುಗಳನ್ನು ಖರೀದಿಸಲು ಮುಂದಾದರು. ಪರಿಣಾಮ ಕಂಪನಿಯ ಷೇರುಗಳು ಶೇಕಡಾ 9ರಷ್ಟು ಏರಿಕೆ ದಾಖಲಿಸಿವೆ.

English summary

Airtel Gains 9 Percent Even After Massive Loss

Bharati airtel in intra-day session on friday gained as much 9 pecent to record a day's high of Rs. 395.45 on BSE.
Story first published: Friday, November 15, 2019, 15:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X