For Quick Alerts
ALLOW NOTIFICATIONS  
For Daily Alerts

ಏರ್ ಟೆಲ್ ನಿಂದ ಹೊಸ ಡೇಟಾ ಪ್ಲಾನ್; ಇಲ್ಲಿದೆ ಫುಲ್ ಡೀಟೇಲ್ಸ್

|

ಏರ್ ಟೆಲ್ ನಿಂದ 401 ರುಪಾಯಿಗಳ ಹೊಸ ಪ್ರೀಪೇಯ್ಡ್ ಡೇಟಾ ಪ್ಯಾಕ್ ಬಿಡುಗಡೆ ಮಾಡಲಾಗಿದೆ. ಈ ಪ್ಲ್ಯಾನ್ ನಲ್ಲಿ ಕೇವಲ ಇಂಟರ್ ನೆಟ್ ಡೇಟಾ ಮಾತ್ರ ಒದಗಿಸಲಾಗುತ್ತದೆ. ಜತೆಗೆ ಬಳಕೆದಾರರು ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ವಿಐಪಿ ಚಂದಾದಾರರು ಕೂಡ ಆಗುತ್ತಾರೆ. 3GB ಪ್ರೀಪೇಯ್ಡ್ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ.

ಇನ್ನು ಏರ್ ಟೆಲ್ ನಿಂದ 349 ರುಪಾಯಿಯ ಪ್ಲ್ಯಾನ್ ಕೂಡ ನೀಡುತ್ತಿದ್ದು, ಅದರಲ್ಲಿ ದಿನಕ್ಕೆ 2GB ಡೇಟಾ ನೀಡಲಾಗುತ್ತದೆ. ಮತ್ತು 28 ದಿನಗಳ ಕಾಲ ಅಮೆಜಾನ್ ಪ್ರೈಮ್ ಸದಸ್ಯತ್ವ ಸಿಗುತ್ತದೆ. ಇದರ ಜತೆಗೆ 349 ರುಪಾಯಿಯ ಪ್ಲ್ಯಾನ್ ನಲ್ಲಿ Zee5 ಪ್ರೀಮಿಯಂ ಹಾಗೂ ಏರ್ ಟೆಲ್ xStream ಚಂದಾದಾರರು ಕೂಡ ಆಗುತ್ತಾರೆ.

ವ್ಯಾಲಿಡಿಟಿ ಮುಗಿದಿದ್ದರೂ ಇನ್ ಕಮಿಂಗ್ ಕಾಲ್

ವ್ಯಾಲಿಡಿಟಿ ಮುಗಿದಿದ್ದರೂ ಇನ್ ಕಮಿಂಗ್ ಕಾಲ್

ಈಚೆಗಷ್ಟೇ ಏರ್ ಟೆಲ್ ಘೋಷಣೆ ಮಾಡಿರುವಂತೆ, ಯಾರಿಗೆ ವ್ಯಾಲಿಡಿಟಿ ವಿಸ್ತರಣೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲವೋ ಅಂಥವರಿಗೆ ಲಾಕ್ ಡೌನ್ ಮುಗಿಯುವ ತನಕ ವಿಸ್ತರಣೆ ಆಗುತ್ತದೆ ಮತ್ತು ಇನ್ ಕಮಿಂಗ್ ಕಾಲ್ ಮುಂದುವರಿಯಲಿದೆ. ಇನ್ನು ಗ್ರಾಹಕರು ಬೇರೆಯವರ ಮೊಬೈಲ್ ನಂಬರ್ ರೀಚಾರ್ಜ್ ಮಾಡಿಕೊಡುವುದನ್ನು ಉತ್ತೇಜಿಸುವ ಯೋಜನೆಯನ್ನು ಕೂಡ ಪರಿಚಯಿಸಲಾಗಿದೆ.

ಎಟಿಎಂ, ಮೆಡಿಕಲ್ ಶಾಪ್ ನಲ್ಲೂ ರೀಚಾರ್ಜ್

ಎಟಿಎಂ, ಮೆಡಿಕಲ್ ಶಾಪ್ ನಲ್ಲೂ ರೀಚಾರ್ಜ್

ಎಟಿಎಮ್, ಪೋಸ್ಟ್ ಆಫೀಸ್, ದಿನಸಿ ಅಂಗಡಿ, ಮೆಡಿಕಲ್ ಶಾಪ್ ಜತೆಗೆ ಡಿಜಿಟಲ್ ಚಾನೆಲ್ ಗಳ ಮೂಲಕ ಕೂಡ ಏರ್ ಟೆಲ್ ರೀಚಾರ್ಜ್ ಮಾಡಿಸಬಹುದು. ಆದರೂ ಮೂರು ಕೋಟಿಯಷ್ಟು ಗ್ರಾಹಕರಿಗೆ ಈಗಲೂ ತಮ್ಮ ಪ್ರೀಪೇಯ್ಡ್ ಮೊಬೈಲ್ ಖಾತೆಗಳನ್ನು ರೀಚಾರ್ಜ್ ಮಾಡಿಸಿಕೊಳ್ಳಲು ಆಗಿಲ್ಲ ಎಂದು ಏರ್ ಟೆಲ್ ತಿಳಿಸಿದೆ.

ರಿಲಯನ್ಸ್ ಜಿಯೋದಿಂದ ಕಮಿಷನ್ ಆಫರ್

ರಿಲಯನ್ಸ್ ಜಿಯೋದಿಂದ ಕಮಿಷನ್ ಆಫರ್

ಯಾರಿಗೆ ತಮ್ಮ ಖಾತೆಯನ್ನು ರೀಚಾರ್ಜ್ ಮಾಡಿಸಿಕೊಳ್ಳಲು ಆಗಿಲ್ಲವೋ ಅಂಥವರಿಗೆ ಉಳಿದ ನೆಟ್ ವರ್ಕ್ ಗಳು ಸಹ ವ್ಯಾಲಿಡಿಟಿಯನ್ನು ವಿಸ್ತರಿಸಿವೆ. ಇತರರ ಮೊಬೈಲ್ ನಂಬರ್ ಗೆ JioPOS ಮೂಲಕ ರೀಚಾರ್ಜ್ ಮಾಡಿಕೊಡುವಂಥ ಗ್ರಾಹರಿಗೆ 4% ಕಮಿಷನ್ ನೀಡುವುದಾಗಿ ರಿಲಯನ್ಸ್ ಜಿಯೋ ಈಗಾಗಲೇ ಘೋಷಿಸಿದೆ.

ರೀಚಾರ್ಜ್ ಮಳಿಗೆ ತೆರೆಯಲು ಮನವಿ

ರೀಚಾರ್ಜ್ ಮಳಿಗೆ ತೆರೆಯಲು ಮನವಿ

ಸಾರ್ವಜನಿಕರಿಗೆ ಮೊಬೈಲ್ ಸೇವೆಗೆ ಯಾವುದೇ ಸಮಸ್ಯೆ ಆಗದಂತೆ 'ಮೊಬೈಲ್ ರೀಚಾರ್ಜಿಂಗ್ ರೀಟೇಲರ್ ಗಳು' ಮಳಿಗೆಗಳನ್ನು ತೆಗೆಯಲು ಸೂಚಿಸಬೇಕು ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಳಿಕೊಳ್ಳಲಾಗಿದೆ.

English summary

Airtel Has Introduced New Data Plan Of 401 Rupees

Bharti Airtel introduced new data plan of 3 GB for 401 rupees. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X