ಏರ್ ಟೆಲ್ ನಿಂದ ಹೊಸದಾಗಿ 251 ರುಪಾಯಿಗೆ 50 GB ಹೆಚ್ಚುವರಿ ಡೇಟಾ ಒದಗಿಸುವ ಆಫರ್ ಆರಂಭಿಸಲಾಗಿದೆ. ಈ ವೋಚರ್ ಗೆ ಅದರ ಯಾವ ವ್ಯಾಲಿಡಿಟಿಯೂ ಇಲ್ಲ. ಸದ್ಯಕ್ಕೆ ಗ್ರಾಹಕರು ಬಳಕೆ ಮಾಡುತ್ತಿರುವ ಪ್ಲ್ಯಾನ್ ಜತೆಗೆ ಇದನ್ನು ಸೇರಿಸಬಹುದು. ಒಂದು ವೇಳೆ ಬಳಕೆದಾರರು ತಿಂಗಳ ಪ್ಲ್ಯಾನ್ ಬಳಸುತ್ತಿದ್ದಲ್ಲಿ ಒಂದು ತಿಂಗಳಲ್ಲಿ ಆ 50 GB ವೋಚರ್ ಒಂದು ತಿಂಗಳ ಅವಧಿಗೆ ಮುಕ್ತಾಯ ಆಗುತ್ತದೆ.
ಒಂದು ವೇಳೆ ಬಳಕೆದಾರರು ವಾರ್ಷಿಕ ಪ್ಲ್ಯಾನ್ ಅನ್ನು ಬಳಸುತ್ತಿದ್ದಲ್ಲಿ 50 GB ಡೇಟಾವನ್ನು ಇಡೀ ವರ್ಷ ಬಳಸಬಹುದು. ಯಾರು ದೀರ್ಘಾವಧಿ ಪ್ಲ್ಯಾನ್ ನಲ್ಲಿ ಇರುವುದಿಲ್ಲವೋ ಅಂಥವರಿಗಾಗಿಯೇ 98 ರುಪಾಯಿಗಳ ವೋಚರ್ ಅನ್ನು ನೀಡಲಾಗುತ್ತಿದೆ. ಇದರಲ್ಲಿ ಹೆಚ್ಚುವರಿಯಾಗಿ 12 ಜಿಬಿ ಡೇಟಾ ದೊರೆಯುತ್ತದೆ. ಆದರೆ ಇದರಿಂದ ಈಗಿರುವ ಪ್ಲ್ಯಾನ್ ವ್ಯಾಲಿಡಿಟಿಗೆ ಸೇರ್ಪಡೆ ಆಗಲ್ಲ.
ಇನ್ನು ಏರ್ ಟೆಲ್ ನಿಂದ 2498 ರುಪಾಯಿಯ ವಾರ್ಷಿಕ ಪ್ಲ್ಯಾನ್ ಹೊಸದಾಗಿ ಆರಂಭಿಸಲಾಗಿದೆ. ಇದರಲ್ಲಿ 365 ದಿನಗಳ ವ್ಯಾಲಿಡಿಟಿ ಬರುತ್ತದೆ. ಬಳಕೆದಾರರಿಗೆ ನಿತ್ಯವೂ 2 GB ಡೇಟಾ ದೊರೆಯುತ್ತದೆ. ಜತೆಗೆ ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ಕರೆ, ದಿನಕ್ಕೆ ನೂರು ಮೆಸೇಜ್ ದೊರೆಯುತ್ತದೆ.

ಇದರ ಜತೆಗೆ Zee5 ಪ್ರೀಮಿಯಂ ಸಬ್ ಸ್ಕ್ರಿಪ್ಷನ್, ಮೊಬೈಲ್ ಫೋನ್ ಗೆ ಏರ್ ಟೆಲ್ ಸೆಕ್ಯೂರ್ ಮೊಬೈಲ್ ಸೆಕ್ಯೂರಿಟಿ ಸಲ್ಯೂಷನ್, ಏರ್ ಟೆಲ್ ಎಕ್ಸ್ ಟ್ರೀಮ್ ಪೀಮಿಯಂ ಸಬ್ ಸ್ಕ್ರಿಪ್ಷನ್, ವಿಂಕ್ ಮ್ಯೂಸಿಕ್ ಪ್ರೀಪೇಯ್ಡ್ ಸಬ್ ಸ್ಕ್ರಿಪ್ಷನ್, ಉಚಿತ ಹಲೋ ಟ್ಯೂನ್, FASTag ಮೇಲೆ 150 ಕ್ಯಾಶ್ ಬ್ಯಾಕ್ ಹಾಗೂ ಶಾ ಅಕಾಡೆಮಿಯಲ್ಲಿ 28 ದಿನದ ಅವಧಿಗೆ ಉಚಿತ ಕೋರ್ಸ್ ಗೆ ಅವಕಾಶ ದೊರೆಯುತ್ತದೆ.


Click it and Unblock the Notifications