ಚೀನಾದ ಅತ್ಯಂತ ಶ್ರೀಮಂತ ಜಾಕ್ ಮಾ ಬಹಳ ಬಿಜಿ ವ್ಯಕ್ತಿ. ವಿಶ್ವದ ಅತಿ ದೊಡ್ಡ ಐಪಿಒ ಬಿಡುಗಡೆಗೆ ಬಿಡುವಿಲ್ಲದಂತೆ ತೊಡಗಿಕೊಂಡಿದ್ದಾರೆ. ಮತ್ತೊಂದು ಕಡೆ ಅಲಿಬಾಬ ಗ್ರೂಪ್ ಹೋಲ್ಡಿಂಗ್ಸ್ ಲಿಮಿಟೆಡ್ ನ ನಾಲ್ಕು ದಿನಗಳ ಶಾಪಿಂಗ್ ಹಬ್ಬದ ತಯಾರಿ ನಡೆಯುತ್ತಿದೆ. ಇವೆಲ್ಲದರ ಮಧ್ಯೆಯೂ ಎರಡು ವಾರದ ಕೆಳಗೆ ಸಮಯ ಮಾಡಿಕೊಂಡು ಜಾಕ್ ಮಾ, ಚೀನಾದ ಬ್ಯಾಂಕಿಂಗ್ ವ್ಯವಸ್ಥೆಯ ಹೈ ಪ್ರೊಫೈಲ್ ಫೈನಾನ್ಷಿಯಲ್ ಫೋರಂ ಗೆ ಶಾಂಘೈನಲ್ಲಿ ಅಭಿಪ್ರಾಯ ತಿಳಿಸಿ, ಮೈ ಮೇಲೆ ಸಮಸ್ಯೆ ಎಳೆದುಕೊಂಡಿದ್ದಾರೆ.
ಚೀನಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಡಮಾನ ಇಡುವ 'ಪಾನ್ ಶಾಪ್'ಗೆ ಹೋಲಿಸಿ ಮಾತನಾಡಿದ್ದ ಜಾಕ್ ಮಾಗೆ ಅದರ ಫಲಿತಾಂಶ ಎರಡೇ ವಾರದಲ್ಲಿ ಸಿಕ್ಕಿದೆ. ಚೀನಾದಲ್ಲಿ ಹಣಕಾಸು ವ್ಯವಸ್ಥೆಯ ಸೂಕ್ತ ವಾತಾವರಣ ಇಲ್ಲ ಎಂದಿದ್ದ ಅವರು, ಚೀನೀಯರಿಗೆ ಒಂದು ಲಕ್ಷ ಯುವಾನ್ ಬ್ಯಾಂಕ್ ನಿಂದ ಸಾಲ ಪಡೆಯಿರಿ ಅಂದರೆ ಹೆದರುತ್ತಾರೆ. ಅದೇ ಹತ್ತು ಲಕ್ಷ ಯುವಾನ್ ಆದಲ್ಲಿ ಸಾಲ ಪಡೆಯುವವರು ಮತ್ತು ಬ್ಯಾಂಕ್ ಗೆ ಸ್ವಲ ಹೆದರಿಕೆ ಆಗುತ್ತದೆ.
ಇನ್ನು ನೂರು ಕೋಟಿ ಯುವಾನ್ ಸಾಲವಾದಲ್ಲಿ ತೆಗೆದುಕೊಳ್ಳುವವರಿಗೇನೂ ಭಯ ಇಲ್ಲ. ಅದೇನಿದ್ದರೂ ಬ್ಯಾಂಕ್ ನವರಿಗೆ ಎಂದಿದ್ದರು. ತಮ್ಮ ಮಾತುಗಳಿಗೆ ಈಗ ಚೀನಾ ಸರ್ಕಾರದಿಂದ ನೇರವಾಗಿ ಅಂತಲ್ಲದಿದ್ದರೂ ಪರೋಕ್ಷವಾಗಿ ನೋಟಿಸ್ ಪಡೆದಿದ್ದಾರೆ. ಅದು ಅಲಿಬಾಬ ಸಂಸ್ಥೆಯ ಮೂವತ್ಮೂರು ಪರ್ಸೆಂಟ್ ಗೂ ಹೆಚ್ಚು ಹೂಡಿಕೆ ಇರುವ ಆಂಟ್ ಗ್ರೂಪ್ ಗೆ ನೋಟಿಸ್ ಪಡೆಯುವ ಮೂಲಕ.
ಅದಕ್ಕೆ ಕಾರಣ ಆಂಟ್ ಗ್ರೂಪ್ ಕಂಪೆನಿಯ ಗ್ರಾಹಕ ಸಾಲ ವ್ಯವಹಾರದಲ್ಲಿ ಹುಳುಕಿದೆ ಎನ್ನಲಾಗಿದೆ.
ಶಾಂಘೈ ಷೇರು ಮಾರುಕಟ್ಟೆ ಆಂಟ್ ಲಿಸ್ಟಿಂಗ್ ಅಮಾನತು
ಇನ್ನು ಮತ್ತೊಂದು ಶಾಕ್ ಮಂಗಳವಾರ ರಾತ್ರಿ ಬಂದಿದ್ದು ಶಾಂಘೈ ಷೇರು ಮಾರುಕಟ್ಟೆಯಿಂದ ಆಂಟ್ ಲಿಸ್ಟಿಂಗ್ ಅಮಾನತು ಮಾಡಲಾಗಿದೆ. ಹಾಂಕಾಂಗ್ ಐಪಿಒ ಅಮಾನತು ಮಾಡಿದ್ದೀವಿ ಅಂತ ಆಂಟ್ ಹೇಳಿದೆ. ಗುರುವಾರದ ದಿನ ಆಂಟ್ ಟ್ರೇಡಿಂಗ್ ಶುರು ಮಾಡಬೇಕಿತ್ತು. ಈ ಸುದ್ದಿಯ ಪರಿಣಾಮವು ನ್ಯೂಯಾರ್ಕ್ ನಲ್ಲಿ ಅಲಿಬಾಬ ಷೇರುಗಳ ಮೇಲೆ ಆಗಿದೆ. ಜತೆಗೆ ಯುಎಸ್ ನಲ್ಲಿ ಲಿಸ್ಟ್ ಆಗಿರುವ ಇತರ ಚೀನಾ ಕಂಪೆನಿಗಳ ಷೇರಿನ ಬೆಲೆಯು ನೆಲ ಕಚ್ಚುವಂತೆ ಆಗಿದೆ. ಮಾ ಅವರು ಹೇಳಿದ ವಿಚಾರ ಸ್ವಲ್ಪ ಮಟ್ಟಿಗೆ ಕುತೂಹಲಕ್ಕೆ ಕಾರಣ ಆಗಿದ್ದು ಹೌದು. ಆದರೆ ಆ ಮಾತು ಸುಳ್ಳೇನಾಗಿರಲಿಲ್ಲ.
ಚೀನಾದಲ್ಲಿ ಸಣ್ಣ ಪ್ರಮಾಣದ ಸಾಲ ಸಿಗುವುದೇ ಕಷ್ಟ
ಚೀನಾದಲ್ಲಿ ಸಣ್ಣ ಪ್ರಮಾಣದ ಸಾಲವೇ ಸಿಗುವುದು ಕಷ್ಟ. ಚೀನಾದಲ್ಲಿ ಶೇಕಡಾ ಎಂಬತ್ತಾರರಷ್ಟು ಆರ್ಥಿಕತೆ ಚೇತರಿಕೆ ಆಗಿದೆ ಎನ್ನಲಾಗುತ್ತಿದೆ, ಆದರೆ ಇದು ಸಣ್ಣ ವರ್ತಕರಿಗೆ ಅನ್ವಯಿಸಿ ಹೇಳಲು ಸಾಧ್ಯ ಇಲ್ಲ. ಅಂದ ಹಾಗೆ ಅಡಮಾನ ಇರಿಸಿಕೊಳ್ಳುವ 'ಗಿರವಿ ಅಂಗಡಿ'ಯಂಥ ಬ್ಯಾಂಕ್ ಗಳು ಎಂಬುದು ಜಾಕ್ ಮಾ ಮಾತುಗಳೇ ಏನಲ್ಲ. ಸ್ಬತಃ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಹೇಳಿದೆ. ಆದರೆ ಮಾ ಅವರನ್ನು ಮಾತ್ರ ಏಕೆ ಬಲಿಪಶು ಮಾಡಲಾಯಿತು? ಅದಕ್ಕೆ ಕಾರಣ ಅಂದರೆ Ant. ಅದು ಬಹಳ ಲಾಭದಾಯಕವಾಗಿದೆ. ಅದನ್ನು ಈಗ ಗುರಿ ಮಾಡಿಕೊಳ್ಳಲಾಗಿದೆಯಾ? Antನಿಂದ ಐಪಿಒ ಮೂಲಕ ಕನಿಷ್ಠ 34.5 ಬಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸಲಾಗುತ್ತಿದೆ. ಆದರೆ ಅದು ರೀಟೇಲ್ ಆರ್ಡರ್ ಮೂಲಕ 3 ಲಕ್ಷ ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಿತು. ಆದರೆ ಪ್ರಾದೇಶಿಕ ಬ್ಯಾಂಕ್ ಗಳೇ ಬಂಡವಾಳ ಹೊಂದಿಸಿಕೊಳ್ಳಲು ಪರದಾಡುತ್ತಿವೆ.
ಮಾರುಕಟ್ಟೆ ನಿಯಂತ್ರಕರ ನಿಯಮ
Antನಿಂದ ಗ್ರಾಹಕರಿಗೆ ಸುಲಭವಾಗಿ ಸಣ್ಣ ಪ್ರಮಾಣದ ಸಾಲ ಸಿಗುತ್ತದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳ ಜತೆ ದೂರನ್ನು ಕೂಡ ಪ್ರಾದೇಶಿಕ ಬ್ಯಾಂಕ್ ಗಳು ಹೇಳಿಕೊಂಡಿವೆ. Antನಿಂದ ಸಾಲ ನೀಡುವ ಮೊತ್ತದ ಶೇಕಡಾ ಮೂವತ್ತರಷ್ಟು ಬ್ಯಾಲೆನ್ಸ್ ಶೀಟ್ ನಲ್ಲಿ ಬಂಡವಾಳದ ರೂಪದಲ್ಲಿ ಇರಬೇಕು ಎಂಬ ನಿಯಮ ಮಾಡಿದೆ. ಇಲ್ಲಿಯ ತನಕ ಅದು ಬರೀ ಎರಡು ಪರ್ಸೆಂಟ್ ಮಾತ್ರ ಇತ್ತು. ಐಪಿಒ ಮೂಲಕ ಹಣ ಸಂಗ್ರಹಿಸಿದರೆ ಅದು ದೊಡ್ಡ ವಿಷಯ ಅಲ್ಲ. ಈಗ ಐಪಿಒಗೆ ಹೋಗುವುದು ಸಾಧ್ಯವಿಲ್ಲ ಅಂತಾಗಿದೆ. ಅದಕ್ಕೆ ಕಾರಣ ಆಗಿರುವುದು ಮಾರುಕಟ್ಟೆ ನಿಯಂತ್ರಕರ ನಿಯಮ.
ಹಣಕಾಸು ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು
ಅಂದ ಹಾಗೆ, ಈ ಹಿಂದೆ ಸಭೆಯಲ್ಲಿ ಭಾಗವಹಿಸಬೇಕಾ ಮತ್ತು ಮಾತನಾಡಬೇಕಾ ಎಂಬ ಬಗ್ಗೆ ಮಾ ಅವರಿಗೇ ಸಂಘರ್ಷ ಇತ್ತಂತೆ. ಆದರೆ ಈಗಂತೂ ವಿಷಾದವೇ ಆಗುತ್ತಿರಬೇಕು. ಚೀನಾಗೆ ನಿಜಕ್ಕೂ ಎಲ್ಲರನ್ನೂ ಒಳಗೊಂಡಂಥ ಹಣಕಾಸು ವ್ಯವಸ್ಥೆ ರೂಪಿಸಬೇಕಿದ್ದಲ್ಲಿ ಅಥವಾ ಡಿಜಿಟಲ್ ಯುವಾನ್ ಸಾಕಾರ ಆಗಬೇಕಿದ್ದಲ್ಲಿ ಜಾಕ್ ಮಾ ಅಂಥವರ ಅನುಭವ ಹಾಗೂ ಆಲೋಚನೆ ಜತೆಯಾಗಬೇಕು. ಜಾಕ್ ಮಾ ಹೇಳಿದಂತೆ ವ್ಯವಸ್ಥಿತ ಸಮಸ್ಯೆಯೊಂದು ಇದೆ ಎಂದಾದಲ್ಲಿ, ಅದಕ್ಕೆ ಪರಿಹಾರವೂ ಅವರಿಗೆ ಗೊತ್ತಿದೆ. ಆ ಪರಿಹಾರದ ಬಳಕೆ ಆಗಬೇಕು, ಅಷ್ಟೇ.


Click it and Unblock the Notifications