ಚೀನಾದ ಬಹುರಾಷ್ಟ್ರೀಯ ಟೆಕ್ ದೈತ್ಯ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಈ ವರ್ಷ 15,000 ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ಹೇಳಿದೆ. ಈ ಹಿಂದೆ ಸಂಸ್ಥೆಯು ಉದ್ಯೋಗ ಕಡಿತ ಮಾಡಲಿದೆ ಎಂದು ವರದಿಯಾಗಿದೆ. ಈ ವರದಿಯನ್ನು ಅಲಿಬಾಬಾ ಗ್ರೂಪ್ ತಳ್ಳಿಹಾಕಿ, ನೇಮಕಾತಿಯನ್ನು ಘೋಷಣೆ ಮಾಡಿದೆ.
ಅಲಿಬಾಬಾ ಗುರುವಾರ ವೈಬೊದಲ್ಲಿ ತನ್ನ "ಆರು ಪ್ರಮುಖ ವ್ಯಾಪಾರ ವಿಭಾಗಗಳು ಒಟ್ಟು 15,000 ಹೊಸ ನೇಮಕಾತಿಗಳನ್ನು ಮಾಡುವ ಅಗತ್ಯವಿದೆ," ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸಂಸ್ಥೆಯು 3,000 ವಿಶ್ವವಿದ್ಯಾನಿಲಯ ಪದವೀಧರರನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿಯು ಹೇಳಿದೆ.

ಸಂಸ್ಥೆಯು ಈ ಉದ್ಯೋಗ ಕಡಿತವನ್ನು ವದಂತಿ ಎಂದು ಹೇಳಿದೆ. ಹಾಗೆಯೇ ಈ ಉದ್ಯೋಗಿಗಳ ಕಡಿತವು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದೆ. ಒಂದು ವಾರಗಳ ಹಿಂದೆ ಬ್ಲ್ಯೂಬರ್ಗ್ ವರದಿ ಮಾಡಿದೆ. ಅಲಿಬಾಬಾ ಸಂಸ್ಥೆಯಲ್ಲಿ ಒಟ್ಟಾಗಿ ಸುಮಾರು ಶೇಕಡ 7ರಷ್ಟು ಉದ್ಯೋಗ ಕಡಿತವನ್ನು ಮಾಡಲಾಗುತ್ತದೆ ಎಂದು ಹೇಳಿದೆ. ಕಂಪನಿಯು ಅಲಿಬಾಬಾ ಸಾಮ್ರಾಜ್ಯದ ಇತರ ಭಾಗಗಳಿಗೆ ತೆರಳಲು ಪ್ಯಾಕೇಜ್‌ಗಳನ್ನು ಅಥವಾ ವರ್ಗಾವಣೆಗಳನ್ನು ನೀಡುತ್ತಿದೆ ಎಂದು ಕೂಡಾ ವರದಿಯಾಗಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇನಿಯಲ್ ಜಾಂಗ್ ಈ ತಿಂಗಳ ಆರಂಭದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಕಡಿತದ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಪ್ರತ್ಯೇಕ ಘಟಕಗಳಲ್ಲಿ ಸಿಬ್ಬಂದಿಗಳ ಮಾಹಿತಿ ನೀಡಿದ ಗುಂಪು ಮಾರ್ಚ್‌ನ ವೇಳೆಗೆ 235,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ.
ಈ ಹಿಂದೆ ನೇಮಕಾತಿ ವಿವರ ನೀಡಿದ್ದ ಪಿಡಬ್ಲ್ಯೂಸಿ
ಪ್ರಸ್ತುತ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಕಳೆದ ವರ್ಷದ ಕೊನೆಯಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭವಾಗಿದ್ದು, ಇದು ಈಗಲೂ ಮುಂದುವರಿದಿದೆ. ಹಲವಾರು ಮಂದಿ ಕೆಲಸವನ್ನು ಕಳೆದುಕೊಂಡು, ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸಿಹಿಸುದ್ದಿಯನ್ನು ಈ ಹಿಂದೆ ಸಂಸ್ಥೆಯೊಂದು ನೀಡಿದೆ.
ಪಿಡಬ್ಲ್ಯೂಸಿ ಭಾರತದಲ್ಲಿನ ತನ್ನ ಉಪಸ್ಥಿತಿಯನ್ನು ಇನ್ನಷ್ಟು ವಿಸ್ತರಣೆ ಮಾಡುವುದಾಗಿ ಹೇಳಿಕೊಂಡಿದೆ. "ಭಾರತದ ಬೆಳವಣಿಗೆಗಾಗಿ ಉತ್ತಮ ಕಾರ್ಯತಂತ್ರವನ್ನು ನಾವು ರೂಪಿಸುತ್ತೇವೆ," ಎಂದು ಸಂಸ್ಥೆಯು ಹೇಳಿಕೊಂಡಿದೆ. ಭಾರತದಲ್ಲಿ ಪಿಡಬ್ಲ್ಯೂಸಿ ಉದ್ಯೋಗಿಗಳ ಸಂಖ್ಯೆಯನ್ನು 50 ಸಾವಿರದಿಂದ 80 ಸಾವಿರಕ್ಕೆ ಏರಿಸಲು ನಿರ್ಧಾರ ಮಾಡಿದೆ ಎಂದು ಕೂಡಾ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
"ನಮ್ಮ ಅಜೆಂಡಾವನ್ನು ಪೂರೈಸಲು ಪಿಡಬ್ಲ್ಯೂಸಿ ಭಾರತದಲ್ಲಿ ಮತ್ತು ಪಿಡಬ್ಲ್ಯೂಸಿ ಯುಎಸ್‌ನಲ್ಲಿ ಜಾಯಿಂಟ್ ವೆಂಚರ್ ಆರಂಭಿಸಿದೆ. ಮುಖ್ಯವಾಗಿ ಬೆಳವಣಿಗೆ, ಕ್ಲೈಂಟ್‌ಗಳ ಸಂಬಂಧ ವಿಸ್ತರಿಸಲು, ಗುಣಮಟ್ಟವನ್ನು ಹೆಚ್ಚಿಸಲು ನಾವು ಈ ಕ್ರಮವನ್ನು ಕೈಗೊಂಡಿದ್ದೇವೆ," ಎಂದು ಕೂಡಾ ಹೇಳಿಕೆಯಲ್ಲಿ ಸಂಸ್ಥೆಯು ಉಲ್ಲೇಖಿಸಿದೆ. ಕಳೆದ ಕೆಲವು ವರ್ಷಗಳಿಂದ ಪಿಡಬ್ಲ್ಯೂಸಿ ಭಾರತದಲ್ಲಿ ವಿಸ್ತಾರವಾಗಿ ಬೆಳಯುತ್ತಿದೆ.
2022ರಲ್ಲಿ 3 ಕಚೇರಿಗಳನ್ನು ತೆರೆದ ಪಿಡಬ್ಲ್ಯೂಸಿ
2022ರಲ್ಲಿ ಪಿಡಬ್ಲ್ಯೂಸಿ ಭಾರತದಲ್ಲಿ ಒಟ್ಟಾಗಿ ಮೂರು ಕಚೇರಿಗಳನ್ನು ತೆರೆದಿದೆ. ಭುವನೇಶ್ವರ, ಜೈಪುರ ಮತ್ತು ನೋಯ್ಡಾದಲ್ಲಿ ಹೊಸ ಕಚೇರಿಯನ್ನು ಪಿಡಬ್ಲ್ಯೂಸಿ ಆರಂಭ ಮಾಡಿದೆ. ಪ್ರಮುಖವಾಗಿ ಸ್ಥಳೀಯವಾಗಿರುವ, ಪ್ರತಿಭಾವಂತರನ್ನು ನೇಮಕಾತಿ ಮಾಡುವ ಉದ್ದೇಶವನ್ನು ಈ ಸಂಸ್ಥೆಯು ಹೊಂದಿದೆ.
ಪಿಡಬ್ಲ್ಯೂಸಿಯ ಜಾಗತಿಕ ತಂತ್ರದ ಪ್ರಕಾರ, ಸಂಸ್ಥೆಯು ಭಾರತದ ಆರ್ಥಿಕ ಬೆಳವಣಿಗೆಗೆ ತನ್ನ ಪಾತ್ರವನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ. ಹಾಗೆಯೇ ಸ್ಥಳೀಯ ಮಾರುಕಟ್ಟಯನ್ನು ಬೆಳೆಸುವುದು, ಸ್ಥಳೀಯವಾಗಿ ಜನರಿಗೆ ಅತೀ ಹೆಚ್ಚಿನ ಅವಕಾಶವನ್ನು ಸೃಷ್ಟಿ ಮಾಡುವುದು ಪಿಡಬ್ಲ್ಯೂಸಿನ ಪ್ರಮುಖ ಕಾರ್ಯತಂತ್ರವಾಗಿದೆ.


Click it and Unblock the Notifications