ಮೇ 17ರ ತನಕ ಪ್ರಯಾಣಿಕರ ರೈಲು ಸಂಚಾರ ಸ್ಥಗಿತ

ದೇಶದಾದ್ಯಂತ ಕೊರೊನಾ ಲಾಕ್ ಡೌನ್ ಅನ್ನು ಕೇಂದ್ರ ಸರ್ಕಾರವು ಮೇ 17ನೇ ತಾರೀಕಿನ ವಿಸ್ತರಣೆ ಮಾಡಿದ ಬೆನ್ನಿಗೇ ಭಾರತೀಯ ರೈಲ್ವೆಯಿಂದ ಪ್ರಯಾಣಿಕರ ರೈಲು ಸೇವೆಯನ್ನು ಅಲ್ಲಿಯ ತನಕ ಸ್ಥಗಿತಗೊಳಿಸಿದೆ. ಆದರೆ ವಿವಿಧೆಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಪ್ರವಾಸಿಗರು ಮತ್ತು ಇತರರ ಅನುಕೂಲಕ್ಕಾಗಿ ಶ್ರಮಿಕ್ ಸ್ಪೆಷಲ್ ರೈಲುಗಳು ಸಂಚರಿಸಲಿವೆ.

ಸಾಗಾಟ ಮತ್ತು ಪಾರ್ಸೆಲ್ ಕಾರ್ಯ ಚಟುವಟಿಕೆಗಳು ಮುಂದುವರಿಯಲಿವೆ ಎಂದು ರೈಲ್ವೆ ಸಚಿವಾಲಯವು ತಿಳಿಸಿದೆ. ಮೇ 3ನೇ ತಾರೀಕಿಗೆ ಎರಡನೇ ಹಂತದ ಲಾಕ್ ಡೌನ್ ಪೂರ್ಣಗೊಳ್ಳಲಿದೆ. ಅದಕ್ಕೆ ಎರಡು ದಿನ ಮುಂಚಿತವಾಗಿಯೇ ಅವಧಿ ವಿಸ್ತರಿಸಿ, ಕೇಂದ್ರ ಸರ್ಕಾರ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಅಂದ ಹಾಗೆ, ದೇಶಾದ್ಯಂತ 35 ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 1100 ಮಂದಿ ಮೃತಪಟ್ಟಿದ್ದಾರೆ.

ಮೇ 17ರ ತನಕ ಪ್ರಯಾಣಿಕರ ರೈಲು ಸಂಚಾರ ಸ್ಥಗಿತ

ಹಣ್ಣು, ತರಕಾರಿ, ಹಾಲು ಹಾಗೂ ಡೇರಿ ಉತ್ಪನ್ನಗಳನ್ನು ಮತ್ತು ಕೃಷಿ ಉದ್ದೇಶಕ್ಕೆ ಬಿತ್ತನೆ ಬೀಜಗಳನ್ನು ಸಾಗಾಟ ನಡೆಸಲು ರೈಲುಗಳ ಸೇವೆ ನೀಡಲಾಗುತ್ತಿದೆ. ಇನ್ನು ಈಗಾಗಲೇ ರೈಲ್ವೆಯಿಂದ ಐದು ಸಾವಿರ ಬೋಗಿಗಳನ್ನು ಕೊರೊನಾ ಪೀಡಿತರ ಐಸೋಲೇಷನ್ ವಾರ್ಡ್ ಗಳಾಗಿ ಬದಲಿಸಲಾಗಿದೆ. ಹದಿನೈದು ಸಾವಿರ ಬೋಗಿಗಳನ್ನು ಹೆಚ್ಚುವರಿಯಾಗಿ ಐಸೊಲೇಷನ್ ವಾರ್ಡ್ ಗಳಂತೆ ಮಾಡಲು ತೀರ್ಮಾನಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+